ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಕಾಗವಾಡ ವಿಧಾನಸಭಾ ಕ್ಷೇತ್ರದ ಶಾಸಕ ಭರಮಗೌಡ ಕಾಗೆ ಶುಕ್ರವಾರ ಅಧಿಕಾರ ವಹಿಸಿಕೊಂಡರು.
ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಕೇಂದ್ರ ಕಚೇರಿಯಲ್ಲಿ ಕಾಗದ ಪತ್ರಗಳಿಗೆ ಸಹಿ ಹಾಕುವ ಮೂಲಕ ಅಧಿಕಾ ಸ್ವೀಕಾರ ಪ್ರಕ್ರಿಯನ್ನು ಪೂರ್ಣಗೊಳಿಸಿದರು.
ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು ಲಾಭದ ಹಾದಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಂಸ್ಥೆಯಲ್ಲಿನ ನೂನ್ಯತೆ ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೊಸ ಬಸ್ ಖರೀದಿ, ಸಿಬ್ಬಂದಿ ವೇತನ ಪರಿಷ್ಕರಣೆ, ಭ್ರಷ್ಟಾಚಾರ ತಡೆ ಸೇರಿದಂತೆ ಸಂಸ್ಥೆಯ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ಸಂಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವುದರ ಜೊತೆಗೆ ಎಲ್ಲೆರನ್ನೂ ಗಣನೆಗೆ ತೆಗೆದುಕೊಂಡು ಹೋಗುತ್ತೇನೆ ಎಂದರು.
ಶಕ್ತಿ ಯೋಜನೆಗೆ ೮೬೨ ಕೋಟಿ ರೂ. ಖರ್ಚಾಗಿದೆ. ಪೈಕಿ ೪೯೦ ಕೋಟಿ ರೂ. ಅನುದಾನ ಬಿಡುಗಡೆ ಯಾಗಿದ್ದು, ಬಾಕಿ ಇರುವ ೨೫೦ ಕೋಟಿ ರೂ. ಬಾಕಿ ಹಣವನ್ನು ನೀಡುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಲಾಗುವುದು. ಡೀಸೆಜ್, ವೇತನ ಹಾಗೂ ನಿರ್ವಹಣೆಗೆ ದಿನಂಪ್ರತಿ ೮ ಕೋಟಿ ರೂ. ಖರ್ಚಾಗುತ್ತಿದ್ದು, ೭ ಕೋಟಿ ರೂ. ಆದಾಯ ಬರುತ್ತಿದೆ. ಹೀಗಾಗಿ ಸಂಸ್ಥೆ ದಿನಕ್ಕೆ ೧ ಕೋಟಿ ರೂ. ನಷ್ಟ ಅನುಭವಿಸುತ್ತಿದೆ ಎಂದರು.
==================================
ಕೋಟ್…
೧೩೫ ಶಾಸಕರ ಪೈಕಿ ಕೆಲವೇ ಜನಕ್ಕೆ ಮಂತ್ರಿಗಿರಿ ಭಾಗ್ಯ ಸಿಕ್ಕಿದೆ. ಅವರವರ ಅನುಭವದ ಆಧಾರದ ಮೇಲೆ ಖಾತೆ ಹಂಚಿಕೆ ಆಗಿದೆ. ಹಿರಿತನದ ಮತ್ತು ಅನುಭವದ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತದೆ. ನಾನೂ ಮುಖ್ಯಮಂತ್ರಿ ಆಕಾಂಕ್ಷಿ. ಆದರೆ, ಸ್ಥಾನ ಮಾನ ದೊರಕಬೇಕಲ್ಲವೇ. ಎಲ್ಲರೂ ಲಾಭ ಇರುವ ಹುದ್ದೆ, ಸಂಸ್ಥೆಗೆ ಅಂಟಿಕೊAಡರೆ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಪಾಡೇನು. ಹೀಗಾಗಿ ನನ್ನ ಮೇಲಿನ ಗೌರವ, ನಂಬಿಕೆಯಿAದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಜವಾಬ್ದಾರಿ ನೀಡಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.
-ಭರಮಗೌಡ ಕಾಗೆ, ವಾಕರಸಾ ಸಂಸ್ಥೆಯ ಅಧ್ಯಕ್ಷ
==================================ಹೆಚ್ಚಿನ ಬಸ್ ಖರೀದಿ ಪ್ರಕ್ರಿಯೆ…
ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಅಲ್ಲದೆ, ಸಾವಿರ ಟ್ರಿಪ್ ಹೆಚ್ಚಳವಾಗಿರುತ್ತವೆ. ೪ ಸಾವಿರದ ೮ ನೂರಕ್ಕೂ ಹೆಚ್ಚು ಬಸ್‌ಗಳು ಸಂಸ್ಥೆಯಲ್ಲಿವೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ೫೦ ಬಸ್‌ಗಳು ಗ್ರಾಮಾಂತರ ವಿಭಾಗಕ್ಕೆ ನೀಡಲಾಗಿದೆ. ೨೦ ಹೊಸ ಪಲ್ಲಕ್ಕಿ ಬಸ್‌ಗಳಲ್ಲಿ ೧೦ ಬಸ್‌ಗಳು ಬಂದಿವೆ. ಉಳಿದ ೧೦ ಬಸ್‌ಗಳು ಮುಂದಿನ ದಿನಗಳಲ್ಲಿ ಸಂಸ್ಥೆಗೆ ಸೇರ್ಪಡೆಯಾಗಲಿವೆ. ಅಲ್ಲದೇ ಎಲೆಕ್ಟಿçÃಕ್ ಬಸ್‌ಗಳು ಹುಬ್ಬಳ್ಳಿ ಧಾರವಾಡ ಮತ್ತು ಹುಬ್ಬಳ್ಳಿ ಬೆಳಗಾವಿ ನಡುವೆ ಕಾರ್ಯಾಚರಣೆ ಮಾಡಲಿವೆ. ೧೫ ವರ್ಷಕ್ಕೂ ಹೆಚ್ಚಿನ ಹಳೆಯ ಬಸ್‌ಗಳನ್ನು ಗುಜರಿಗೆ ಹಾಕಲಾಗುತ್ತದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಮಾಹಿತಿ ನೀಡಿದರು
Check Also
ಅ,27 ರಂದು ಯಕ್ಷಲೋಕ ವಿಜಯ ಪ್ರಸಂಗ ಪ್ರದರ್ಶನ
Spread the loveಹುಬ್ಬಳ್ಳಿ: ಹುಬ್ಬಳ್ಳಿಯ ಬಂಟ ಹವ್ಯಾಸಿ ಕಲಾವಿದರ ಸಂಘ, ಕಲಾರಂಗದ ವತಿಯಿಂದ ಅ. 27ರಂದು ಸಂಜೆ 4 ಗಂಟೆಗೆ …