ಹುಬ್ಬಳ್ಳಿ : ಹಿಂದು ಗಂಟೆಚೋರ ಹಾಗೂ ಗಿರಣಿ ವಡ್ಡರ ಸಮಾಜಕ್ಕೆ
ಜಾತಿ ಪ್ರಮಾಣ ಪತ್ರ ನೀಡಿಕೆ ಹಾಗೂ ವಿವಿಧ ಬೇಡಿಕೆ ಈಡೇರಿಸುವ ಉಗ್ರ ಸ್ವರೂಪದ ಹೋರಾಟದ ನಿರ್ಧಾರ ತೆಗೆದುಕೊಳ್ಳಲಾಯಿತು.
ನಗರದ ಖಾಸಗಿ ಹೊಟೇಲ್ ನಲ್ಲಿಂದು ನಡೆದ ಹಿಂದು ಗಂಟೆಚೋರ ಹಾಗೂ ಗಿರಣಿ ವಡ್ಡರ ಸಮಾಜದ ಸಭೆಯಲ್ಲಿ ಒಮ್ಮತ ಅಭಿಪ್ರಾಯಕ್ಕೆ ಬರಲಾಯಿತು. ಸಮಾಜದ ಸಮಾಜ ಮಕ್ಕಳು ಶಿಕ್ಷ ಣದಿಂದ ವಂಚಿತರಾಗುತ್ತಿದ್ದು, ನ್ಯಾಯ ಸಿಗುವರೆಗೂ ಹೋರಾಟ, ಗಂಟಿಚೋರ್ ಸಮುದಾಯಕ್ಕೆ ತಮ್ಮ ಜಾತಿಯ ಬಗ್ಗೆ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಿದ್ದರು ಎಂದು ಆದೇಶ ಹೊರಡಿಸಿದ್ದರು. ನಮಗೆ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ, ಜಿಲ್ಲಾಧಿಕಾರಿ ಆದೇಶ ಇದ್ದಾಗಲೂ ವಿಚಾರಣೆ ಹಾಗೂ ಸ್ಥಾನಿಕ ಚೌಕಾಶಿ ಮಾಡದೇ ನಮ್ಮ ಸಮುದಾಯದ ಜನರ ಜಾತಿ ಪತ್ರವನ್ನು ವಿನಃ ಕಾರಣ ತಿರಸ್ಕರಿಸುತ್ತಿದ್ದಾರೆ. ತಹಸೀಲ್ದಾರ ಸೇರಿದಂತೆ ಕೇಲ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಒತ್ತಡಕ್ಕಾಗಿ ನಮ್ಮ ಸಮಾಜದವರನ್ನು ಶಿಕ್ಷ ಣದಿಂದ ವಂಚಿತರಾಗಿಸಬೇಕು ಎಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ಸಿಬ್ಬಂದಿಯತ್ತ ತೋರಿಸಿ ವಿನಾಕಾರಣ ವಿಳಂಭ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. ಸಮಾಜದ ಅನೇಕ ನ್ಯಾಯಯುತ ಬೇಡಿಕೆ ಈಡೇರಬೇಕು ಇನ್ನು ಸಮಾಜದ ಪುನರ್ ಸಂಘಟನೆ ಜೊತೆಗೆ ಸಮಾಜದಲ್ಲಿ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಜಾಗೃತಿ ಕುರಿತು ಚಿಂತನೆ ಮಾಡಲಾಯಿತು.
ಸಮಾಜದವರಿಂದ ನ್ಯಾಯ ಸಿಗುವವರೆಗೂ ಧರಣಿ ,ಹೋರಾಟ ಮಾಡುವು ನಿರ್ಧಾರ ತೆಗೆದುಕೊಳ್ಳಲಾಯಿತು.
ಯಾವುದೇ ಭಿನ್ನಾಭಿಪ್ರಾಯ ಹೊಂದದೆ ಒಂದಾಗಿ ಸಂಘಟಿತ ಹೋರಾಟ ನಡೆಸುವ ಒಮ್ಮತದ ಅಭಿಪ್ರಾಯಕ್ಕೆ ಬರಲಾಯಿತು. ಹಿಂದು ಗಂಟಿಚೋರ್ ಹುಬ್ಬಳ್ಳಿ ಘಟಕದ ಸಮಾಜದ ಅಧ್ಯಕ್ಷರಾದ ರಂಗನಾಥ ದೊಡ್ಡಮನಿ, ಮುಖಂಡರಾದ ಚಂದ್ರಶೇಖರ ಹಲಕುರ್ಕಿ, ಮಲ್ಲೇಶ ಚಪ್ಪರಮನಿ, ಕಾಶಿನಾಥ ಅಂಕಲಿ, ಸುಧೀರ್ ಹೊಸೂರು, ಕರುಣಾ ಲೋಹಾರ್, ಭರತರಾಜ್ ಕಟ್ಟಿಮನಿ, ಶಿವಲಿಂಗ ಘಂಟಿ, ಅರ್ಜುನ ಕಟ್ಟೀಮನಿ, ಬಾಲರಾಜ್ ಹಲಕುರ್ಕಿ, ಅಶೋಕ ಕಟ್ಡಿಮನಿ ಸಮಾಜದ ಪ್ರಮುಖ ಮುಂತಾದವರಿದ್ದರು
Check Also
ಧಾರವಾಡ ಲೋಕಸಭಾ ರಿಸಲ್ಟ್- ಇತಿಹಾಸ ಸೃಷ್ಟಿದ ಪ್ರಲ್ಹಾದ್ ಜೋಶಿ
Spread the loveಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ ಮಹತ್ವ ಇದೆ. ಕರ್ನಾಟಕ ಅಷ್ಟೇ ಅಲ್ಲಾ ದೇಶದ …