ಛಾಯಾಚಿತ್ರಗಳ ಬೆಲೆ ಹೆಚ್ಚಳ ಅನಿವಾರ್ಯ: ಕಿರಣ‌ ಬಾಕಳೆ

Spread the love

ಹುಬ್ಬಳ್ಳಿ: ಫೋಟೋ ಹಾಗೂ ವಿಡಿಯೋಗ್ರಾಫರ್ ಅಸೋ ಸಿಯೇಷನ್ ವತಿಯಿಂದ ಛಾಯಾಚಿತ್ರಗಳ ಬೆಲೆಗಳನ್ನು ಸ್ವಲ್ಪ ಪರಿಷ್ಕರಿಸಿ, ಹೆಚ್ಚಿಸಲಾಗಿದೆ. ಗ್ರಾಹಕರು ಸಹಕರಿಸಬೇಕು ಎಂದು ಅಸೋಸಿಯೇಷನ್ ಅಧ್ಯಕ್ಷ ಕಿರಣ ಬಾಕಳೆ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಬದುಕಿನಲ್ಲಿ ದಿನದಿಂದ ದಿನಕ್ಕೆ ಬೆಲೆ ಏರುಮುಖವಾಗುತ್ತಿದೆ. ಹಿಂದಿನ ಬೆಲೆಯಲ್ಲಿಯೇ ನಾವು ಕಾರ್ಯ ನಿರ್ವಹಿಸುತ್ತಿದ್ದು, ನಮ್ಮ ಜೀವನ ನಡೆಸಲು ಸಾಲುತ್ತಿಲ್ಲ ಎಂದರು.
ಛಾಯಾ ವೃತ್ತಿಯ ಉಪಕರಣಗಳು, ಲೆನ್ಸ್, ಡಿಜಿಟಲ್ ಕ್ಯಾಮರಾ ಹಾಗೂ ಇನ್ನಿತರ ಸಾಮಗ್ರಿಗಳ ಬೆಲೆಗಳಲ್ಲಿ ಭಾರಿ ಏರಿಕೆಯಾಗಿದೆ. ಆದ್ದರಿಂದ ಸಂಘದ ಸದಸ್ಯರ ಬೇಡಿಕೆ ಪರಿಗಣಿಸಿ, ಸರ್ವ ಸದಸ್ಯರ ಸಭೆ ನಡೆಸುವ ಮೂಲಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಗ್ರಾಹಕರು ಆರ್ಡರ್ ಮಾಡುವಾಗ ಸಂಘದ ಸದಸ್ಯತ್ವದ ಗುರುತಿನ ಕಾರ್ಡ್ ಪರಿಶೀಲಿಸಿ ಖಚಿತ ಪಡಿಸಿಕೊಂಡು ಗುಣಮಟ್ಟದ ಕೆಲಸ ತೆಗೆದುಕೊಳ್ಳಬೇಕು. ಸಂಘದ ಸದಸ್ಯರಲ್ಲದವರು ಹೆಚ್ಚು ಹಣ ಪಡೆದರೆ ಸಂಘ ಸ್ಪಂದಿಸುವುದಿಲ್ಲ ಎಂದು ಕಿವಿ ಮಾತು ಹೇಳಿದರು.
ಉಪಾಧ್ಯಕ್ಷ ದಿನೇಶ ದಾಬಡೆ, ಕಾರ್ಯದರ್ಶಿ ರವೀಂದ್ರ ಕಾಟಿಗರ, ಖಜಾಂಚಿ ಅನಿಲ ತುರಮರಿ ಇತರರಿದ್ದರು.


Spread the love

About Karnataka Junction

    Check Also

    ರಂಜಾನ್‌ ಹಬ್ಬದ ನಿಮಿತ್ತ ಅಟೋ ಚಾಲಕ ಮಾಲೀಕರಿಗೆ ಹಣ್ಣು ಹಂಪಲ ವಿತರಣೆ

    Spread the loveರಂಜಾನ್‌ ಹಬ್ಬದ ನಿಮಿತ್ತ ಅಟೋ ಚಾಲಕ ಮಾಲೀಕರಿಗೆ ಹಣ್ಣು ಹಂಪಲ ವಿತರಣೆ ಹುಬ್ಬಳ್ಳಿ: ರಂಜಾನ್‌ ಹಬ್ಬದ ನಿಮಿತ್ತ …

    Leave a Reply

    error: Content is protected !!