ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂ 40ರಲ್ಲಿ ಬರುವ ವೆಂಕಟೇಶ್ವರ ನಿವಾಸಿಗಳ ಸಂಘದ ವತಿಯಿಂದ ಬೃಹತ್ ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರಿಗೆ ಭೇಟಿ ಮಾಡಿ ಒಳಚರಂಡಿ ಹಾಗೂ ಕುಡಿಯುವ ನೀರಿನ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಿದರು. ಸ್ಥಳೀಯರ ಮನವಿ ಸ್ಪಂದಿಸಿ ಮುಂದಿನ ದಿನಗಳಲ್ಲಿ ಒಳಚರಂಡಿ ಕಾಮಗಾರಿ ಭೂಮಿ ಪೂಜೆ ಮಾಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ . ಕೆರೂರ್,ಸುರೇಶ್ ಜಾದವ್ ,ಅಶೋಕ್ ಗಂಗೂರು ,ಸಂದೇಶ್ ದಲ್ಬಂಜನ, ಮಂಜುನಾಥ ಪಾಚಂಗೀ, ರವಿ ಕಲಾಲ್, ಶಿವಾನಂದ ಬ್ಯಾಹಟ್ಟಿ, ಕಿಶನ್ ಬಿಲಾನಾ, ವಿನೋದ್ ನಾಗೋಲಿ, ಹಾಗೂ ಇತರರಿದ್ದರು.
