Breaking News

ಐಎನ್​ಐಎಫ್​ಡಿ ಫ್ಯಾಷನ್ ಶೋ 29ರಂದು- ಜ್ಯೋತಿ ಬಿಡಸಾರಿಯಾ

Spread the love

ಹುಬ್ಬಳ್ಳಿ: ನಗರದ ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ವತಿಯಿಂದ 5ನೇ ಆವೃತ್ತಿಯ ಫ್ಯಾಷನ್ ಶೋ ಹಾಗೂ ಫ್ಯಾಷನ್ ಉಡುಗೆಗಳ ಪ್ರದರ್ಶನ ಜು. 29ರಂದು ಸಂಜೆ 6ಗಂಟೆಗೆ ಗೋಕುಲ ರಸ್ತೆಯ ಕ್ಯೂಬಿಕ್ಸ್ ಹೋಟೆಲ್​ನಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕಿ ಜ್ಯೋತಿ ಬಿಡಸಾರಿಯಾ ಹೇಳಿದರು.
ನಗರದಲ್ಲಿಂದು ಖಾಸಗಿ ಹೊಟೇಲ್ ನಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾರಂಭವನ್ನು ಜಿಲ್ಲಾ ಪಂಚಾಯಿತಿ ಸಿಇಒ ಟಿ.ಕೆ. ಸ್ವರೂಪಾ ಉದ್ಘಾಟಿಸುವರು. 16 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, 37 ವಿದ್ಯಾರ್ಥಿಗಳು ಇರುವರು. ಭಾಗವಹಿಸುವ ತಂಡಗಳು ವಿಭಿನ್ನವಾಗಿ ವಸ್ತ್ರ ವಿನ್ಯಾಸ ಮಾಡುತ್ತಿದ್ದು, ಅದೇ ಉಡುಪುಗಳನ್ನು ಧರಿಸಿ ಮಾಡೆಲ್​ಗಳು ರ‍್ಯಾಂಪ್ ವಾಕ್ ಮಾಡಲಿದ್ದಾರೆ ಎಂದರು.
ನಮ್ಮ ಸಂಸ್ಥೆ ವೇದಾ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಫ್ಯಾಷನ್ ಡಿಸೈನ್​ನಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದೆ. ಕೆಲವು ವರ್ಷಗಳಿಂದ ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್​ಗಳ ಸಮಾರಂಭ ಏರ್ಪಡಿಸಿ, ಈ ಭಾಗದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಕೋರಿಯೋಗ್ರಾಫರ್​ಗಳು ಹಾಗೂ ಮಾಡೆಲ್​ಗಳು ಮುಬೈನಿಂದ ಬರಲಿದ್ದಾರೆ. ಐಎನ್​ಐಎಫ್​ಡಿ ಸಂಸ್ಥೆಯಲ್ಲಿ ಮೂರು ವರ್ಷದ ಪ್ಯಾಷನ್ ಡಿಸೈನ್ ಹಾಗೂ ಇಂಟೇರಿಯರ್ ಡಿಸೈನ್ ಕೋರ್ಸ್​ಗಳಿವೆ. ಅನೇಕ ವಿದ್ಯಾರ್ಥಿಗಳು ಶಿಕ್ಷಣ ಕಲಿತು, ಬೇರೆ ಬೇರೆ ಕಡೆ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎಂದರು.
ವಿನುತಾ ಸಂದೀಪ, ವೆನಿಲಾ ತುಂಬಿಡಿ, ಭಾವನಾ ಜೈನ್ ಸುದ್ದಿಗೋಷ್ಠಿಯಲ್ಲಿದ್ದರು.


Spread the love

About Karnataka Junction

[ajax_load_more]

Check Also

ಅಂದಾನಿಮಠ ನಿಧನಕ್ಕೆ ಕೆಪಿಸಿಸಿ(ಐ) ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಲ್ ಹಾಜ್ ಸಿ ಎಸ್ ಮೆಹಬೂಬ್ ಬಾಷಾರವರು ಸಂತಾಪ

Spread the loveಹುಬ್ಬಳ್ಳಿ: ಉತ್ತರ ಕರ್ನಾಟಕದ ಹಿರಿಯ ನ್ಯಾಯವಾದಿಗಳು, ಹಾಗೂ ಹುಬ್ಬಳ್ಳಿಯ ಖ್ಯಾತ ಹಿರಿಯ ವಕೀಲರಾದ ಜಿ. ಆರ್ .ಅಂದಾನಿಮಠ …

Leave a Reply

error: Content is protected !!