ಅಂಗವಿಕಲರಿಗೆ ಕೃತಕ ಕಾಲು ಜೋಡಣಾ ಶಿಬಿರ ​

Spread the love

ಹುಬ್ಬಳ್ಳಿ: ಇಲ್ಲಿನ ಆಲ್ ಇಂಡಿಯಾ ಜೈನ ಯುಥ್ ಫೆಡರೇಶನ್‌ನ ಮಹಾವೀರ ಲಿಂಬ್‌ ಸೆಂಟರ್‌ನಲ್ಲಿ ಆಶೋಕನಗರದ ರೋಹಿತ ಅಂಬಿಕೇರ, ರೋಹಣ ಅಥಣಿ ಮತ್ತಿತರರು ಅಂಗವಿಕಲರಿಗಾಗಿ ಕೃತಕ ಕಾಲು ಜೋಡಣಾ ಶಿಬಿರವನ್ನು ಆಯೋಜಿಸಿದ್ದರು.
ಶಿಬಿರ ಉದ್ಘಾಟಿಸಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಅಶೋಕನಗರದ ಯುವಕರ ಕಾರ್ಯ ಮೆಚ್ಚುವಂಥದ್ದು. ‘ಸಶಕ್ತ ಭಾರತ – ಸಶಕ್ತ ಬೂತ್’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯಂತೆ ಯುವಕರು ಸೇವಾ ಕಾರ್ಯವನ್ನು ಕೈಗೊಂಡು ತಮ್ಮದು ‘ಸಶಕ್ತ ಬೂತ್’ ಎಂಬುದನ್ನು ನಿರೂಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಾಲಿಕೆ ಸದಸ್ಯ ವೀರಣ್ಣ ಸವಡಿ ಮಾತನಾಡಿ, ಮಹಾವೀರ ಲಿಂಬ್ ಸೆಂಟರ್‌ ಹಲವು ವರ್ಷಗಳಿಂದ ಅಂಗವಿಕಲರಿಗಾಗಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಈ ಕೇಂದ್ರಕ್ಕೆ ಬರುವ ಪ್ರತಿಯೊಬ್ಬ ಅಂಗವಿಕಲನೂ ಸ್ವಾವಲಂಬಿಗಳಾಗಿ ಮರಳುತ್ತಾನೆ ಎಂದರು.
ಮಹಾವೀರ ಲಿಂಬ್ ಸೆಂಟರ್‌ಗೆ ಪಾಲಿಕೆಯಿಂದ ಸಹಾಯ ಹಸ್ತ ನೀಡಲು ಸದಾ ಸಿದ್ಧ ಎಂದ ಅವರು, ಮುಂಬರುವ ದಿನಗಳಲ್ಲಿ ಮತ್ತೆ ಶಿಬಿರ ಏರ್ಪಡಿಸುವುದಾದರೆ ₹50ಸಾವಿರ ಧನಸಹಾಯ ಮುಂಗಡವಾಗಿ ನೀಡುವುದಾಗಿ ತಿಳಿಸಿದರು.
ಸೆಂಟರ್‌ನ ಸಂಸ್ಥಾಪಕ ಅಧ್ಯಕ್ಷರಾದ ಮಹೇಂದ್ರ ಸಿಂಘಿ ಈ ವರೆಗಿನ ಸೇವಾ ಕಾರ್ಯದ ಬಗ್ಗೆ ವಿವರಿಸಿದರು.
ವಿವಿಧ ಜಿಲ್ಲೆಗಳಿಂದ ಬಂದ ಅಂಗವಿಕಲರಿಗೆ ಕೃತಕ ಕಾಲುಗಳನ್ನು ಜೋಡಿಸಲಾಯಿತು.
ಮುಕುಂದ ಅಂಬಿಕೇರ ಮತ್ತು ದತ್ತುಸಾ ಅಥಣಿ, ಮಹಾವೀರ ಲಿಂಬ್ ಸೆಂಟರ್‌ನ ಸದಸ್ಯರಾದ ಸುಭಾಷ ಡಂಕ, ಜೀತೆಂದ್ರ ಪೋರವಾಲ ಹಾಗೂ ಲಿಂಬ್ ಸೆಂಟರ್‌ನ ಸಿಬ್ಬಂದಿ ಉಪಸ್ಥಿತರಿದ್ದರು.


Spread the love

About Karnataka Junction

    Check Also

    ಐಎನ್​ಐಎಫ್​ಡಿ ಫ್ಯಾಷನ್ ಶೋ 29ರಂದು- ಜ್ಯೋತಿ ಬಿಡಸಾರಿಯಾ

    Spread the loveಹುಬ್ಬಳ್ಳಿ: ನಗರದ ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ವತಿಯಿಂದ 5ನೇ ಆವೃತ್ತಿಯ ಫ್ಯಾಷನ್ ಶೋ ಹಾಗೂ …

    Leave a Reply