Breaking News

ಕೃತಕ ಕೈಕಾಲು ಜೋಡಣೆ 23ರಂದು

Spread the love

ಹುಬ್ಬಳ್ಳಿ: ಇಲ್ಲಿಯ ಮಜೇಥಿಯಾ ಫೌಂಡೇಷನ್ ಆಶ್ರಯದಲ್ಲಿ ಕೃತಕ ಕೈ-ಕಾಲು ಜೋಡಣೆ ಉಚಿತ ಶಿಬಿರವನ್ನು ಜು. 23ರಂದು ಬೆಳಗ್ಗೆ 10ಕ್ಕೆ ನಗರದ ಮೂರುಸಾವಿರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ಮುಖ್ಯ ಸಂಚಾಲಕ ಮಂಜುನಾಥ ಭಟ್ಟ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈದರಾಬಾದ್‌ನ ಭಾರತ ವಿಕಾಸ ಪರಿಷತ್ ಚಾರಿಟಬಲ್ ಟ್ರಸ್ಟ್‌ನ ನುರಿತ ವೈದ್ಯರು ಶಿಬಿರ ನಡೆಸಿಕೊಡುವರು. ರಾಜ್ಯದ ವಿವಿಧ ಕಡೆಗಳಿಂದ ಈಗಾಗಲೇ 280ಕ್ಕೂ ಹೆಚ್ಚು ಜನರು ಹೆಸರು ನೋಂದಣಿ ಮಾಡಿದ್ದಾರೆ.
ಸಾವಿರಾರು ಜನರು ಕರೆ ಮಾಡಿ ವಿಚಾರಣೆ ಮಾಡಿದ್ದಾರೆ. ಈ ಶಿಬಿರದ ನಂತರ ಆಗಸ್ಟ್ 20ರಂದು ಮತ್ತೊಂದು ಶಿಬಿರ ಆಯೋಜನೆ ಮಾಡಿ ಅಗತ್ಯ ಇರುವ ಎಲ್ಲರಿಗೂ ನೆರವು ನೀಡುವ ಉದ್ದೇಶ ಹೊಂದಲಾಗಿದೆ ಎಂದರು.
ತಮಿಳುನಾಡು, ಆಂಧ್ರ ಪ್ರದೇಶದಿಂದಲೂ ಜನರು ಬರುವವರಿದ್ದು, ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ. ಮಜೇಥಿಯಾ ಸಂಸ್ಥೆಯಿಂದ ಈ ಹಿಂದೆ ಕೃತಕ ಕಾಲು ಹಾಕಿಸಿಕೊಂಡವರು ತಮ್ಮ ವೃತ್ತಿಗೆ ಮರಳಿದ್ದಾರೆ. ಸಹಜ ಜೀವನ ನಡೆಸುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಜೀವನ ರೂಪಿಸಿಕೊಂಡಿದ್ದಾರೆ ಎಂದರು.
ಅಪಘಾತ ಮತ್ತು ಇತರ ಕಾರಣಗಳಿಂದಾಗಿ ಕೈ ಕಾಲು ಕಳೆದುಕೊಳ್ಳುವ ಸಂದರ್ಭಗಳು ಇರುತ್ತವೆ. ಹೀಗೆ ಕಳೆದುಕೊಂಡವರಿಗೆ ಶಸಚಿಕಿತ್ಸೆ ಆಗಿರುವ ಜಾಗದಲ್ಲಿ ಗಾಯಗಳಿರಬಾರದು, ಗಾಯವಾದ ಜಾಗದಲ್ಲಿ ನೀರು ತುಂಬಿಕೊಳ್ಳುತ್ತದೆ. ಹಾಗಾಗಿ ಒಂದು ವರ್ಷ ಕಳೆದ ನಂತರ ಕೈ ಕಾಲು ಹಾಕಿಸಬಹುದು. ಅಂಥವರಿಗೆ ಪರಿಶೀಲಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಾ. ವಿ.ಟಿ. ನಿಟಾಲಿ ತಿಳಿಸಿದರು.
ಇನ್ನು ಮುಂದೆ ಹೆಸರು ನೋಂದಾಯಿಸಿದವರಿಗೆ ಶಿಬಿರದ ದಿನ ಅವರ ಕಾಲಿನ ಅಳತೆ ಪಡೆದುಕೊಂಡು ಹೈದರಾಬಾದ್ ಸಂಸ್ಥೆಗೆ ವಿವರ ನೀಡಿ ಕೃತಕ ಕೈಕಾಲು ತಯಾರಿಸಲಾಗುತ್ತದೆ. ಆಗಸ್ಟ್‌ನಲ್ಲಿ ನಡೆಯುವ ಶಿಬಿರದಲ್ಲಿ ವಿತರಿಸಲಾಗುತ್ತದೆ. ಮೂರು ತಿಂಗಳಿಗೊಮ್ಮೆ ಇಂತಹ ಶಿಬಿರ ನಡೆಸಲಾಗುವುದು. ಅಕ್ಟೋಬರ್‌ನಲ್ಲಿ ಶಿಬಿರ ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಫೌಂಡೇಷನ್ ಸಿಇಒ ಅಜೀತ ಕುಲಕರ್ಣಿ, ಸಂಚಾಲಕ ಅಮರೇಶ ಹಿಪ್ಪರಗಿ, ಅಮೃತಭಾಯ್ ಪಟೇಲ, ಶಶಾಂತರಾಜ್ ಇದ್ದರು.


Spread the love

About Karnataka Junction

    Check Also

    ಪದಾಧಿಕಾರಿಗಳು, ಕಾರ್ಯಕರ್ತರು ಜಯ ಕರ್ನಾಟಕ ಸಂಘಟನೆಗೆ ಸೇರ್ಪಡೆ

    Spread the loveಹುಬ್ಬಳ್ಳಿ : ರಾಜ್ಯದ ನಾಡು,ನುಡಿ, ಜಲ ರಕ್ಷಣೆ ಮಾಡುವಲ್ಲಿ ಜಯ ಕರ್ನಾಟಕ ಸಂಘಟನೆ ತನ್ನದೇ ಆದ ಹೋರಾಟ …

    Leave a Reply