Breaking News

ಭ್ರಷ್ಟ ಪಿಡಿಓ ಮಲ್ಲನಗೌಡ ದಾನಪ್ಪಗೌಡರ ವರ್ಗಾವಣೆಗೆ ಆಗ್ರಹಿಸಿ ಗ್ರಾಪಂ ಕಚೇರಿಗೆ ಬೀಗ ಜಡೆದು ಪ್ರತಿಭಟನೆ

Spread the love

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಲ್ಲನಗೌಡ ದಾನಪ್ಪಗೌಡರ ( ಪಿಡಿಓ) ಯಾವುದೇ ಕೆಲಸವನ್ನು ಮಾಡತಾ ಇಲ್ಲ ಸಂಪೂರ್ಣವಾಗಿ
ಅಭಿವೃದ್ಧಿ ಕಡೆಗಣಿಸಿದ್ದು, ಸರಿಯಾಗಿ ಕಚೇರಿಗೆ ಬರುತ್ತಿಲ್ಲ ಕಾರಣ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯತಿ ಅಧ್ಯಕ್ಷೆ, ಉಪಾಧ್ಯಕ್ಷರು ಮತ್ತು ಸದಸ್ಯರು ಶಿರಕೋಳ ಗ್ರಾಮ ಪಂಚಾಯತಿಗೆ ಸೋಮವಾರ ಬೀಗ ಜಡೆದು ಪ್ರತಿಭಟಿಸಿದರು. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ (ನರೇಗಾ) ಯಾವುದೇ ಕಾಮಗಾರಿ ಮಾಡತಾ ಇಲ್ಲ. ಈಗಾಗಲೇ ನರೇಗಾ ಯೋಜನೆ ಅಡಿ ಅನೇಕ ಕಾಮಗಾರಿಗಳು ಮಾಡಿದ್ದರು ಕೂಲಿ ಕಾರ್ಮಿಕರಿಗೆ ದುಡಿದ ಹಣ ಬಿಡುಗಡೆ ಮಾಡತಾ ಇಲ್ಲ. 15 ನೇ ಹಣಕಾಸು ಯೋಜನೆಯಡಿ ಅನೇಕ ಕಾಮಗಾರಿಗಳನ್ನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಡಬೇಕು ಯಾವುದೇ ಕಾಮಗಾರಿಗಳನ್ನು ಮಾಡಲು ಮುಂದಾಗತಾ ಇಲ್ಲ. ಗ್ರಾಮದಲ್ಲಿ, 3.80 ಲಕ್ಷ ರೂಪಾಯಿ ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಿದ್ದು ಇದರಲ್ಲಿ 2.41 ಲಕ್ಷ ರೂಪಾಯಿ ವೆಚ್ಚದಲ್ಲಿ ಕೆಲಸ ಮಾಡಲಾಗಿದ್ದು ಇನ್ನು ಇದರಲ್ಲಿ 99 ಸಾವಿರ ಹಣವನ್ನು ಎಂಬಿ ಪುಸ್ತಕದಲ್ಲಿ ದಾಖಲು ಮಾಡದೇ ಗ್ರಾಮ ಪಂಚಾಯತಿ ಅಧ್ಯಕ್ಷರ ಪರವಾನಗೆ ಇಲ್ಲದೇ ಹಣದ ಪಡೆಯಲಾಗಿದೆ. ಇನ್ನು 15 ನೇ ಹಣಕಾಸು ಯೋಜನಾ ವ್ಯಾಪ್ತಿಯಲ್ಲಿ ಪಂಚಾಯತ ಸಿಬ್ಬಂದಿಗಳಿಗೆ ವೇತನ ನೀಡಲು ಅಲ್ಪ ಸ್ವಲ್ಪ ಹಣ ಮೀಸಲು ಇರಿಸಿದ್ದರು ಅದನ್ನು ಕೆಲಸ ಮಾಡಿದ ಸಿಬ್ಬಂದಿಗೆ ಪಾವತಿ ಮಾಡತಾ ಇದರಿಂದಾಗಿ ಗ್ರಾಮ ಪಂಚಾಯತಿ ಸಿಬ್ಬಂದಿ ವೇತನ ಇಲ್ಲದೇ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ . ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆಗಿ ಎರಡು ವರ್ಷಗಳ ಕಾಲ ಆದರೂ ಯಾವುದೇ ಅಭಿವೃದ್ಧಿ ಕೆಲಸ ಮಾಡುತಿಲ್ಲ. ಸ್ಥಳೀಯರು ಎನ್ನುವ ಕಾರಣಕ್ಕೆ ಇಂದು ಮಾಡ್ಯಾನು ನಾಳೆ ಕೆಲಸ ಮಾಡ್ಯಾನು ಅಂತಾ ಸುಮ್ಮನೆ ಆದರೆ ಯಾವುದೇ ಕೆಲಸ ಮಾಡುತಿಲ್ಲ ಎಂದು ಗ್ರಾಮ ಪಂಚಾಯತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಕಾಬಿಟ್ಟಿ ಅಧಿಕಾರ ನಡೆಸಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಪಿಡಿಒ ಮಲ್ಲನಗೌಡ ದಾನಪ್ಪಗೌಡರ ಸ್ಥಳೀಯ ನಿವಾಸಿ ಇಲ್ಲಿಯೇ ಇದೇ ಪಂಚಾಯಿತಿಯಲ್ಲಿ ಕಾರ್ಯದರ್ಶಿ ಸಹ ಆಗಿದ್ದವರು ಇನ್ನು ಪದನ್ಯೂತಿ ಹೊಂದಿ ಸಹ ಇದೇ ಪಂಚಾಯತಿಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಆಗಿದ್ದಾರೆ. ಆದರೆ ಯಾವುದೇ ರೀತಿಯ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸುತ್ತಿಲ್ಲ.
ಕಾಮಗಾರಿ ಮಾಡದೇ ರಾಜಕೀಯ ಪ್ರಭಾವದಿಂದಾಗಿ ಸರ್ಕಾರಿ ನೌಕರಿ ದುರ್ಬಳಕೆ ಮಾಡಿಕೊಂಡು ಕಾಲಹರಣ ಮಾಡುತಿದ್ದಾರೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ವಿನಾಕಾರಣ ಕಾಲಹರಣ‌ ಮಾಡುವುದು, ಬೇಕಾಬಿಟ್ಟಿ ಸಮಯಕ್ಕೆ ಕಚೇರಿಗೆ ಬರುವುದು, ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರು, ಗ್ರಾಮ ಪಂಚಾಯತಿ ಸದಸ್ಯರಿಗೆ ಗೌರವ ಕೊಡತಾ ಇಲ್ಲಾ.‌ಇನ್ನು ಅಭಿವೃದ್ಧಿ ವಿಷಯದಲ್ಲಿ ಶಿರಕೋಳ 16 ನೇ ಸ್ಥಾನದಲ್ಲಿ ಇದೆ ಆದ್ದರಿಂದ ಕೂಡಲೇ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನ ವರ್ಗಾವಣೆ ಮಾಡಬೇಕು ಎಂದು ಗ್ರಾಮ ಪಂಚಾಯತಿ ಸರ್ವ ಸದಸ್ಯರು ಪಟ್ಟು ಹಿಡಿದಿದ್ದಾರೆ. ಕಚೇರಿ, ಕಾಮಗಾರಿಗಳಿಗೆ
‘ಸಾಮಗ್ರಿಯನ್ನು ಖರೀದಿಸುವ ಮುನ್ನ ನನ್ನ ಜೊತೆಗೆ ಚರ್ಚಿಸಿಲ್ಲ.
ಈಗಾಗಲೇ ಪಿಡಿಓ ವರ್ಗಾವಣೆಗೆ ಒತ್ತಾಯ ಮಾಡಿ ನವಲಗುಂದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ, ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು ಹಾಗೂ ಶಾಸಕ ಎನ್ ಎಚ್ ಕೋನರಡ್ಡಿ ಅವರಿಗೆ ಮನವಿ ಕೊಡಲಾಗಿದೆ. ‌ಆದರೆ ಯಾವುದೇ ರೀತಿಯ ಪ್ರಯೋಜನ ಆಗತಾ ಇಲ್ಲ. ರಾಜಕೀಯ ಪ್ರಭಾವ ಹಾಗೂ ಗ್ರಾಮದಲ್ಲಿಯೇ ಸ್ಥಳೀಕರ ನಡುವೆ ಜಗಳ ಹಚ್ಚಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಡಿಒ ಅವರನ್ನು ವರ್ಗಾವಣೆಗೆ ಒತ್ತಾಯಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತಿದ್ದಾರೆ. ಗ್ರಾಮ ಪಂಚಾಯತಿ ಅಧ್ಯಕ್ಷೆ ಯಶೋಧಾ ವಾಲಿಸುಂಕದ, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶಾರವ್ವ ಶಾಸ್ತ್ರೀಮಠ, ಸದಸ್ಯರಾದ ಶಂಕ್ರವ್ವ ಮುಗಳಿ, ಶಾಂತವ್ವ ಕಡಕೋಳ, ಮಲ್ಲಪ್ಪ ನವಲಗುಂದ, ಜಗದೀಶ್ ಯಕ್ಕುಂಡಿ, ಮಲ್ಲಪ್ಪ ಗಾಣಿಗೇರ, ಗುಜ್ಜಳ, ಗ್ರಾಮದ ಹಿರಿಯರು ಮುಂತಾದವರಿದ್ದರು.


Spread the love

About Karnataka Junction

    Check Also

    ನೇಹಾ ಕೊಲೆ‌ ಪ್ರಕಾರಣ: ಕೊಲೆ ಆರೋಪಿ ಫಯಾಜ್ ಕೊಲೆಯಾದ ಸ್ಥಳಕ್ಕೆ ಮಹಜರು

    Spread the loveಹುಬ್ಬಳ್ಳಿ: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ವಿಚಾರವಾಗಿ ತನಿಖೆ ಚುರುಕು ಪಡೆದಿದ್ದು ನೇಹಾ ಕೊಲೆ ಆರೋಪಿ ಫಯಾಜ್ …

    Leave a Reply

    error: Content is protected !!