ಹುಬ್ಬಳ್ಳಿ: ನಿಸ್ವಾರ್ಥದಿಂದ ಬಡವರ ಸೇವೆ ಮಾಡುವುದರ ಜೊತೆಗೆ ಇನ್ನೊಬ್ಬರ ಕಷ್ಟ ಸುಖಕ್ಕೆ ಸ್ಪಂದಿಸುವ ವರೇ ನಿಜವಾದ ಸೇವೆ ಎಂದರೆ ಅದುವೇ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಂಸ್ಥೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಗಂಗಾವತಿ ಹೇಳಿದರು.
ನಗರದ ಮೂರುಸಾವಿರಮಠದ ಆವರಣದಲ್ಲಿ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಂಸ್ಥೆಯಿಂದ ಆರಂಭವಾದ ‘ಹಸಿದವರ ಅನ್ನ ಜೋಳಿಗೆ’ ಹೆಸರಿನ ಪ್ರಚಾರ ವಾಹನ ಹಾಗೂ ಸಂಬಂಧಿಸಿದ ಜಾಲತಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸೇವೆ ಮಾಡುವ ಅರ್ಹತೆ ಹಾಗೂ ಸಾಮರ್ಥ್ಯ ಹಲವರಿಗೆ ಇದ್ದರೂ, ಸೇವೆ ಮಾಡುವ ಅವಕಾಶ ಕೆಲವರಿಗೆ ಮಾತ್ರ ಇರುತ್ತದೆ. ಬಹಳಷ್ಟು ಜನ ಹಸಿವಿನಿಂದ ಸಮಾಜದಲ್ಲಿ ನರಳುತ್ತಿದ್ದಾರೆ. ಅಂತವರಿಗೆ ಅನ್ನ ಸಿಗುವಂತಹ ಈ ಕಾರ್ಯ ಯಶಸ್ವಿಯಾಗಲಿ. ಶಾಸಕರು, ಮಹಾನಗರ ಪಾಲಿಕೆ ಕೂಡ ಸಹಕರಿಸಬೇಕು’ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಪೌರಕಾರ್ಮಿಕರಾಗಿದ್ದ ನೀಲಪ್ಪ ಅವರ ಮಗ ಕರಿಯಪ್ಪ ಅವರು, ಸಮಾಜದ ನಿರ್ಗತಿಕರನ್ನು ಮಕ್ಕಳಂತೆ ಪರಿಗಣಿಸಿ ಆಹಾರ ಒದಗಿಸುವ ಸೇವಾ ಕಾರ್ಯ ಶ್ಲಾಘನೀಯವಾದುದ್ದು. ಈ ಕಾರ್ಯಕ್ಕೆ ಸಹಕಾರ ನೀಡಲಾಗುವುದು’ ಎಂದು ತಿಳಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ವೀಣಾ ಭರದ್ವಾಡ , ‘ಸಾರ್ವಜನಿಕರು ಸಭೆ, ಸಮಾರಂಭಗಳಲ್ಲಿ ಉಳಿದ ಗುಣಮಟ್ಟದ ಆಹಾರವನ್ನು ಕೆಡಿಸದೇ ಇಂತಹ ಕಾರ್ಯಕ್ಕೆ ನೀಡಬೇಕು. ಪಾಲಿಕೆಯಿಂದಲೂ ಈ ಕಾರ್ಯಕ್ಕೆ ಸಹಕಾರ ನೀಡಲಾಗುವುದು’ ಎಂದರು.
ಸಭೆ ಸಮಾರಂಭಗಳಲ್ಲಿ ಆಹಾರ ಉಳಿದರೆ, ವ್ಯರ್ಥ ಮಾಡದೇ ಮೊಬೈಲ್: 93801 36683ಗೆ ಕರೆ ಮಾಡಿ ಕೊಡಬಹುದು ಎಂದು ಆಯೋಜಕರು ಮನವಿ ಮಾಡಿದರು.
ಡಾ.ಆನಂದ ಪಾಂಡುರಂಗಿ, ಮಾಜಿ ಸಂಸದ ಐ.ಜಿ.ಸನದಿ, ದಾನಿಗಳಾದ ಚಂದ್ರಶೇಖರ್ ಅಮಿನಘಡ, ನಾಗರತ್ನ ಅಮಿನಘಡ, ಚನ್ನಬಸಪ್ಪ ಧಾರವಾಡಶೆಟ್ಟರ್, ಕರಿಯಪ್ಪ ಶಿರಹಟ್ಟಿ ಸೇರಿದಂತೆ ಮುಂತಾದವರಿದ್ದರು.
Check Also
ಹುಬ್ಬಳ್ಳಿಯಲ್ಲಿನಾಮದೇವ ಮಹಾರಾಜರ ಪುಣ್ಯತಿಥಿ ಆಚರಣೆ
Spread the loveಹುಬ್ಬಳ್ಳಿ : ಇಲ್ಲಿನ ಹುಬ್ಬಳ್ಳಿಯ ನಾಮದೇವ ದೈವಕಿ ಸಮಾಜದ ವತಿಯಿಂದ ಸಿಂಪಿಗಲ್ಲಿ ಹರಿ ಮಂದಿರದಲ್ಲಿ ಶ್ರೀ ಸಂತ …