ಹುಬ್ಬಳ್ಳಿ: 2023-24 ನೇ ಸಾಲಿನ
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ವಿದ್ಯಾನಗರದ ದಿ. ಹನ್ಸ್ ಹೊಟೇಲ್ ನಲ್ಲಿಂದು ಜರುಗಿತು.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಅಧ್ಯಕ್ಷೆ ರೀಟಾ ಹಂಡಾ,
ಕ್ಲಬ್ ಕಾರ್ಯದರ್ಶಿ ಸಿಂಚನಾ ಆಂಟೋನಿ ಅಧಿಕಾರ ಸ್ವೀಕರಿಸಿದರು.
ರೋಟರಿ ಕ್ಲಬ್ ನ ಲೇಡಿಸ್ ಸರ್ಕಲ್ ರಾಷ್ಟ್ರೀಯ ಅಧ್ಯಕ್ಷೆ ಡಾ.ಅಂಚಲಾ ಕೌಲಾರ್, ಡಿಸ್ಟ್ರಿಕ್ಟ್ ರೋಟರಿಯನ್
ರೋಟರಿಯನ್ ನಾಸೀರ್, ಅಸಿಸ್ಟೆಂಟ್ ಗೌರ್ನರ್ ಸುರೇಂದ್ರ ಪೋರವಾಲ್, ಡಿಸ್ಟ್ರಿಕ್ಟ್ ಸೆಕ್ರೆಟರಿ ಆಡಳಿತ ಸರ್ಕಲ್ ವಸುಕಿ ಸಂಜಿ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ನ ಪದಾಧಿಕಾರಿಗಳು, ಕಳೆದ ಸಾಲಿನ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಪದಾಧಿಕಾರಿಗಳು ಮುಂತಾದವರಿದ್ದರು.
ಇದಕ್ಕೋ ಮುನ್ನರೋಟರಿ ಕ್ಲಬ್ ಆಪ್ ಹುಬ್ಬಳ್ಳಿ ಸೆಂಟ್ರಲ್ ವತಿಯಿಂದ ಅಂಬ್ಯುಲೆನ್ಸ್ , ಪೊಲೀಸರ ಕರ್ತವ್ಯಕ್ಕೆ ಅನುಕೂಲಕ್ಕೆ ಪೊಲೀಸ್ ಚೌಕಿ ಹಾಗೂ ಮಾರ್ಗಸೂಚಿ ಫಲಕವನ್ನು ಟ್ವಿಸಿ ಮುಂಬೈ ಮಿಡ್ ಟೌನ್ ನಿಕಟ ಪೂರ್ವ ಅಧ್ಯಕ್ಷರಾದ ರೋಟರಿಯನ್ ಆರ್.ಪಿ. ಆನಂದ ಹಾಗೂ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಅಧ್ಯಕ್ಷೆ ರೀಟಾ ಹಂಡಾ ಉದ್ಘಾಟಿಸಿದರು.
ನಂತರ ಮಾತನಾಡಿದ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ನೂತನ ಅಧ್ಯಕ್ಷೆ ರೀಟಾ ಹಂಡಾ ಅವರುಅಸಹಾಯಕರ ಪರವಾಗಿ ಅನೇಕ ಸಮಾಜಮುಖೀ ಕಾರ್ಯದಲ್ಲ ನಿರಂತರವಾಗಿದ್ದು ಇನ್ನು ಈ ವರ್ಷ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ಹೊಂದಲಾಗಿದೆ. ಇಲ್ಲಿ ಅಧಿಕಾರದ ಆಸೆ, ಸ್ವಾರ್ಥಕ್ಕಿಂತ ಸೇವೆ ಮಾಡುವುದು ಮುಖ್ಯವಾಗಿದೆ. ಎಲ್ಲರ ಸಹಾಯ ಸಹಕಾರ ಅಗತ್ಯವಾಗಿದೆ. ಪ್ರಸಕ್ತ ವರ್ಷ ತಮ್ಮ ಅಧಿಕಾರ ಅವಧಿಯಲ್ಲಿ ಯಾವುದೇ ಸರಿಯಾದ ಸೌಲಭ್ಯಗಳು ಇಲ್ಲದ ಗ್ರಾಮಗಳಲ್ಲಿ ಮಕ್ಕಳಿಗೆ
ಗುಣಮಟ್ಟದ ಶಿಕ್ಷಣ,
ಮಹಿಳಾ ಸಬಲೀಕರಣಕ್ಕೆ
ಪೂರಕವಾಗಿ ಬಡ ಮಹಿಳೆಯರ ಸ್ವಾವಲಂಬಿ ಬದುಕಿಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸಾಮಾಗ್ರಿ ವಿತರಣೆ ಸೇರಿದಂತೆಉತ್ತಮ ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
