https://youtu.be/O1y4iL8mt7c
ಹುಬ್ಬಳ್ಳಿ; ಪೆಟ್ರೋಲ್, ಡಿಸೇಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ಮಹೇಶ ದಾಬಡೆ ನೇತೃತ್ವದಲ್ಲಿ ಹಳೇ ಹುಬ್ಬಳ್ಳಿಯ ಇಂಡಿ ಪಂಪ್ ಪೆಟ್ರೋಲ್ ಬಂಕ್ ಎದುರಿಗೆ ಪ್ರತಿಭಟನೆ ನಡೆಸಲಾಯಿತು. ಹು-ಧಾ ಮ-ಜಿ ಅಧ್ಯಕ್ಷ ಅಲ್ತಾಫ್ ಹಳ್ಳೂರ್,ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಜತ್ ಉಳ್ಳಾಗಡ್ಡಿಮಠ, , ದೇವಕಿ ಯೋಗಾನಂದ, ಮಂಜು ಚಿಂತಗಿಂಚಲ್,ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳ/ಸಮತಾ ಸೇನಾದ ಗುರುನಾಥ್ ಉಳ್ಳಿಕಾಶಿ, ಲೋಹಿತ್ ಗಾಮನಗಟ್ಟಿ, ಹನಮಂತ ತಳವಾರ ಬಸವರಾಜ ನೆವನೂರ,ಮಿಂಟು ಮೆಹರವಾಡೆ,ಹಾಗೂ ಅನೇಕ ಪ್ರಮುಖರು ,ಪದಾಧಿಕಾರಿಗಳು,
ಕಾರ್ಯಕರ್ತರು,ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಈಸಂಧರ್ಭದಲ್ಲಿ ಬೆಲೆ ಏರಿಕೆಯ ಮೂಲಕ ಜನಸಾಮಾನ್ಯರ ಸುಲಿಗೆಯನ್ನು ತೀವ್ರವಾಗಿ ಖಂಡಿಸಿ ಘೋಷಣೆ ಕೂಗಲಾಯಿತಲ್ಲದೆ,ಸದರಿ ಇಂಧನಗಳನ್ನ ಜಿಎಸ್ ಟಿ ವ್ಯಾಪ್ತಿಗೆ ತರುವವರೆಗೂ ಹೋರಾಟ ತೀವ್ರಗೊಳಿಸಲಾಗುವದೆಂದು ಮಹೇಶ ದಾಬಡೆ,ರಜತ ಉಳ್ಳಾಗಡ್ಡಿಮಠ,ದೇವಕಿ,ಅಲ್ತಾಫ್ ಹಳ್ಳೂರ ಮಾತನಾಡಿದರು.
ಸಮತಾ ಸೇನಾ ದ ಗುರುನಾಥ ಉಳ್ಳಿಕಾಶಿ ಮಾತನಾಡಿದರು.
ಈ ವೇಳೆ ದಲಿತ ಕವಿ ಡಾ. ಸಿದ್ದಲಿಂಗಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮೌನಾಚರಣೆ ಮಾಡಲಾಯಿತು.