Breaking News

ನಾಗರಾಜ ಛಬ್ಬಿ ಪರ ಬಸನಗೌಡ ಪಾಟೀಲ್ ಯತ್ನಾಳ ಹಿರೇಹೊನ್ನಳ್ಳಿಯಲ್ಲಿ ಮತಯಾಚನೆ

Spread the love

ಹುಬ್ಬಳ್ಳಿ: ಗುಂಡಾಗಿರಿ ಮಾಡುವವರು ಹಿಂದುಗಳೇ ಇರಲಿ ಮುಸ್ಲಿಂಮರೇ ಇರಲಿ ಬಿಜೆಪಿ ಯಾವತ್ತೂ ರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಬಸನಗೌಡ ಯತ್ನಾಳ ಹೇಳಿದರು.
ಸೋಮವಾರ ಬಿಜೆಪಿ ಅಭ್ಯರ್ಥಿ ನಾಗರಾಜ ಛಬ್ಬಿ ಪರ ಪ್ರಚಾರದ ನಿಮಿತ್ಯ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿ ಪ್ರಮುಖ ಬೀದಿಯಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ನಂತರ ಮಾತನಾಡಿದರು.
ನಮ್ಮ ಜನಕ್ಕೆ ಅನ್ಯಾಯವಾದರೆ ನಾವು ಯಾರನ್ನು ಸುಮ್ಮನೆ ಬಿಡುವುದಿಲ್ಲ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹ ಮಂತ್ರಿಯವರು ಸಂಭಾಯಿತರು ಇದ್ದಾರೆ.
ಕಳೆದ ಮೂರು ವರ್ಷ ನಾನು ಯಾವುದೇ ಮಂತ್ರಿ ಸ್ಥಾನ ಪಡೆದುಕೊಳ್ಳಲಿಲ್ಲ ಅಂದಾಗ ಸೇರಿದ ಜನರು ಮುಂದಿನ ಮುಖ್ಯ ಮಂತ್ರಿ ನೀವೇ ಎಂದು ಕೂಗಿ ಹೇಳಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷ ಕೂಡಾ ಉಳಿಸಿಕೊಳ್ಳಲು ಆಗಿಲ್ಲ ರಾಜ್ಯದಲ್ಲಿ ಅಧಿಕಾರಿ ಯಾವಾಗ ಹಿಡಿಯುತ್ತದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ದ ಟಿಕಾ ಪ್ರಹಾರ ಮಾಡಿದರು.
ಈಗಿನವರು ನಕಲಿ ಗಾಂಧಿಗಳು ಹಿಂದಿನ ಮಹಾತ್ಮ ಗಾಂಧಿಜಿವರಿಗೆ ಸಂಬಂಧವಿಲ್ಲದವರು ಎಂದು ಕಿಡಿ ಕಾರಿದರು.
ನರೇಂದ್ರ ಮೋದಿಯವರು ಚಹಾ ಮರುತ್ತಾ ಹಿಮಾಲಯಕ್ಕೆ ತೆರಳಿ ತಪಸ್ಸು ಮಾಡಿ ದೇಶಕ್ಕೆ ಜೀವನ ಸಮರ್ಪಣೆ ಮಾಡುತ್ತಿದ್ದಾರೆ ಅವರಿಗೆ ನಾವೆಲ್ಲರೂ ಕೈಜೋಡಿಸಬೇಕು ಎಂದರು.
ಕಲಘಟಗಿ ಮತ ಕ್ಷೇತ್ರದ ಮತದಾರರು ನಾಗರಾಜ ಛಬ್ಬಿಗೆ ಹೆಚ್ಚಿನ ಮತಗಳಿಂದ ಬೆಂಬಲಿಸಬೇಕು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಅಧಿಕಾರ ಹಿಡಿದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಆಡಳಿತ ಜಾರಿಗೆ ಬರುತ್ತದೆ ಎಂದರು.
ಬಿಜೆಪಿ ಅಭ್ಯರ್ಥಿ ನಾಗರಾಜ ಛಬ್ಬಿ, ಬಿಜೆಪಿ ಮುಖಂಡರಾದ ಈರಣ್ಣ ಜಡಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ಕುಂದಗೋಳಮಠ, ತಾಲ್ಲೂಕಾಧ್ಯಕ್ಷ ಬಸವರಾಜ ಶೇರೆವಾಡ, ಸಿ. ಎಫ್ ಪಾಟೀಲ, ಅಣ್ಣಪ್ಪ ಓಲೇಕಾರ, ಕಿರಣ ಪಾಟೀಲ ಕುಲಕರ್ಣಿ, ಮದನ್ ಕುಲಕರ್ಣಿ,ಮಹೇಶ ತಿಪ್ಪಣ್ಣವರ, ವಿಜಯಲಕ್ಸ್ಮಿ ಆಡಿನವರ, ಗುರು ದಾನೇನ್ನವರ,ರಾಜು ಆರ್ ಕಲಘಟಗಿ ಇದ್ದರು.


Spread the love

About Karnataka Junction

[ajax_load_more]

Check Also

ತಪ್ಪು ಮಾಡಿದವರಿಗೆ ಹೊಟ್ಟೆಯುರಿ ಆಗಿದೆ: ನಾರಾಯಣಸ್ವಾಮಿ

Spread the love  ಹುಬ್ಬಳ್ಳಿ: ‘ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ …

Leave a Reply

error: Content is protected !!