ಧಾರವಾಡ: ಧಾರವಾಡ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರವಾಗಿ ವಿನಯ ಕುಲಕರ್ಣಿ ಅವರ ಪತ್ನಿ ಶೀವಲೀಲಾ ಕುಲಕರ್ಣಿ ಅವರು
ಬಸವ ಜಯವಂತಿ ದಿನದಂದು ಕ್ಷೇತ್ರದ ವ್ಯಾಪ್ತಿಯಲ್ಲಿನ ಹೆಬ್ಬಳ್ಳಿ,ಮರೇವಾಡ, ಉಪ್ಪಿನಬೆಟಗೇರಿ,ಹೊಸ ಯಲ್ಲಾಪೂರ, ಹಾಗೂ ಉಳವಿ ಬಸವಣ್ಣ ದೇವಸ್ಥಾನ ಹೊಸಾಯಲ್ಲಾಪೂರ ಮುಂತಾದ ವಾರ್ಡಗಳಲ್ಲಿ ನಮನ ಸಲ್ಲಿಸುವ ಮೂಲಕ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು. ನಂತರ ಮಾತನಾಡಿದ ಅವರು ಮಹಾನ್ ಮಾನವತಾವಾದಿ ಶ್ರೀ ಬಸವೇಶ್ವರ ಅವರ ಜನ್ಮ ದಿನ ಇಂದು ಇಂತ ಒಳ್ಳೆಯ ಗಳಿಗೆಯಲ್ಲಿ ತಮ್ಮ ಬಳಿ ಬಂದಿದ್ದು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರಿಗೆ ಪವಿತ್ರವಾದ ಮತ ಹಾಕಬೇಕು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ, ಮುಖಂಡರುಗಳಾದ ಅಶೋಕ ಸೂರ್ಯವಂಶಿ,ಚನಬಸಪ್ಪ ಮಟ್ಟಿ,ದೀಪಾ ನೀರಲಕಟ್ಟಿ,ಸಂಜೀವ ಲಕಮನಹಳ್ಳಿ,ಅಜ್ಜಪ್ಪ ಗುಲಾಲದವರ,ಅಣ್ಣಪ್ಪ ಚಿನಗುಡಿ,ಮಂಜು ಸಂಕನಗನವರ ಮುಂತಾದವರು ಉಪಸ್ಥಿತರಿದ್ದರು.
