ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ
ಪೂರ್ವ ಕ್ಷೇತ್ರದಲ್ಲಿ ಎರಡು ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ನನ್ನ ವಿರೋಧಿಗಳಲ್ಲಿ ಭಾರೀ ನಡುಕ ಹುಟ್ಟಿಸಿವೆ. ಹಾಗಾಗಿ, ಕೆಲವರು ದಬ್ಬಾಳಿಕೆ ರಾಜಕಾರಣ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಶಾಸಕ ಪ್ರಸಾದ ಅಬ್ಬಯ್ಯ ಎಚ್ಚರಿಕೆ ನೀಡಿದರು.
ನಗರದ ರೈಲು ನಿಲ್ದಾಣ ರಸ್ತೆ ಬಳಿ ಶಾಸಕರ ಚುನಾವಣಾ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ನ ಪ್ರತಿ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ದಬ್ಬಾಳಿಕೆಯ ರಾಜಕರಾಣದ ವಿರುದ್ಧ ತೊಡೆತಟ್ಟಿ ನಿಲ್ಲಬೇಕಿದೆ’ ಎಂದರು.
‘ಅಧಿಕಾರದ ದುರ್ಬಳಕೆ ಮತ್ತು ಷಡ್ಯಂತ್ರದಿಂದ ಆಡಳಿತ ವ್ಯವಸ್ಥೆಯನ್ನೇ ಹಾಳು ಮಾಡಲಾಗುತ್ತಿದೆ. ಸರ್ಕಾರಿ ಸಂಸ್ಥೆಗಳನ್ನು ದುರುಪ ಯೋಗಪಡಿಸಿಕೊಂಡು, ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರನ್ನು ಹಣಿಯುವ ಪ್ರಯತ್ನ ನಡೆಯುತ್ತಿದೆ. ಚುನಾವಣೆಯಲ್ಲಿ ಎಲ್ಲರೂ ಒಂದಾಗಿ ಕಾಂಗ್ರೆಸ್ ಶಕ್ತಿ ಏನೆಂಬುದನ್ನು ತೋರಿಸಬೇಕಿದೆ’ ಎಂದು ತಿಳಿಸಿದರು.
ಕಚೇರಿ ಉದ್ಘಾಟಿಸಿ ಮಾತನಾಡಿದ ಪಕ್ಷದ ಹಿರಿಯ ಮುಖಂಡ ಎ.ಎಂ. ಹಿಂಡಸಗೇರಿ, ‘ರಾಜ್ಯದಲ್ಲಿ ಡಬಲ್ ಭ್ರಷ್ಟಾಚಾರದ ಸರ್ಕಾರದ ಆಡಳಿತ ನಡೆಸುತ್ತಿದೆ. ಇದರಿಂದ ರಾಜ್ಯಕ್ಕೆ ಮುಕ್ತಿ ಸಿಗಬೇಕಾದರೆ ಭ್ರಷ್ಟ ಬಿಜೆಪಿಯನ್ನು ಕಿತ್ತೊಗೆಯಬೇಕು’ ಎಂದರು.
ಮುಖಂಡರಾದ ರಾಜಾ ದೇಸಾಯಿ, ಯೂಸೂಫ್ ಸವಣೂರ, ಅನಿಲಕುಮಾರ ಪಾಟೀಲ, ಅನ್ವರ ಮುಧೋಳ, ಸತೀಶ ಮೆಹರವಾಡೆ, ಮಹೇಂಧ್ರ ಸಿಂಘಿ, ಶಫಿ ಮುದ್ದೇಬಿಹಾಳ, ಮಜರ್ ಖಾನ್, ಶಾಕೀರ್ ಸನದಿ, ಅಶ್ರಫ್ ಅಲಿ, ಬಸವರಾಜ ಗುರಿಕಾರ, ವಹಾಬ್ ಮುಲ್ಲಾ, ಶಿರಾಜ್‌ಅಹ್ಮದ ಕುಡಚಿವಾಲೆ, ಪಾರಸ್‌ಮಲ ಜೈನ್, ಯಮನೂರ ಜಾಧವ, ಮೋಹನ್ ಅಸುಂಡಿ, ಪ್ರಕಾಶ ಬುರಬುರೆ, ಇಲಿಯಾಸ್ ಮನಿಯಾರ್, ವಿಶ್ವನಾಥ ಪಾಟೀಲ ಹಾಗೂ ಇತರರು ಇದ್ದರು.
