ಪೂರ್ವ ಕ್ಷೇತ್ರಕ್ಕೆ ಬಿಜೆಪಿಯಿಂದ ಗೋಕಾಕ್ ಗೆ ಟಿಕೆಟ್ ನೀಡಲು ಒತ್ತಾಯ: ಹಣ ಇದ್ದವರಿಗೆ ಟಿಕೆಟ್ ಆರೋಪ

Spread the love

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಮುನ್ನೆಲೆಗೆ ಬಂದಿದೆ. ಚಂದ್ರಶೇಖರ ಗೋಕಾಕಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಚಂದ್ರಶೇಖರ ಗೋಕಾಕ್ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಹೈ ಕಮಾಂಡ್ ಗೆ ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ಚಂದ್ರಶೇಖರ ಗೋಕಾಕ ಅಭಿಮಾನಿಗಳು, ರಸ್ತೆ ಬಂದ್ ಮಾಡಿ ಪ್ರೋಟೆಸ್ಟ್ ಮಾಡಿದ್ದಾರೆ. ರಸ್ತೆಯಲ್ಲಿಯೇ ಕುಳಿತು, ಗೋಕಾಕ ಭಾವಚಿತ್ರ ಹಿಡಿದು ಟಿಕೆಟ್ ಬೇಕೆ ಬೇಕು ಎಂದು ಪಟ್ಟು ಹಿಡಿದಿದ್ದು, ಚಂದ್ರಶೇಖರ್ ಗೋಕಾಕ ಸಂಘ ಪರಿವಾರದಿಂದ ಬಂದವರು. ಟಿಕೆಟ್ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನೂ ಕಳೆದ ಚುನಾವಣೆಯಲ್ಲಿ ಟಿಕೆಟ್ ‌ನೀಡಲಾಗಿತ್ತು. ಅವರು ಪರಾಭವಗೊಂಡರು, ಇದೊಂದು ಬಾರಿಗೆ ಚಂದ್ರಶೇಖರ ಗೋಕಾಕ ಅವರಿಗೆ ನೀಡಬೇಕು. ಬಿಜೆಪಿ ಹೈಕಮಾಂಡ ಹಣ ಇದ್ದ ಡಾ.ಕ್ರಾಂತಿ ಕಿರಣ ಅವರಿಗೆ ಟಿಕೆಟ್ ನೀಡಿದೆ. ಅದನ್ನು ಬದಲಾವಣೆ ಮಾಡಿ ಚಂದ್ರಶೇಖರ ಗೋಕಾಕ ಅವರಿಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಡ ಹಾಕಿದ್ದಾರೆ.


Spread the love

Leave a Reply

error: Content is protected !!