Breaking News

ಧಾರವಾಡ ಜಿಲ್ಲೆಯಲ್ಲಿ ಕೈಗಾರಿಕಾ ಉದ್ದೇಶಕ್ಕೆ ಪಡೆದ ಪ್ರದೇಶ‌ ಅನ್ಯ ಉದ್ದೇಶಕ್ಕೆ ಬಳಿಕೆ

Spread the love

ಧಾರವಾಡ: ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾತಿಕಾರಿ ಬದಲಾವಣೆ ತರಬೇಕು ಎಂದು ಅನೇಕ ಕೈಗಾರಿಕೋದ್ಯಮಿಗಳ ಹಾಗೂ ಸರ್ಕಾರದ ಗುರಿ ಇನ್ನು ಅದೇ ಸರ್ಕಾರ ಹಾಗೂ ಅಧಿಕಾರಿಗಳು ಕೈಗಾರಿಕಾ ನೀತಿ ಹಾಗೂ ಕೈಗಾರಿಕಾ ಸ್ಥಾಪನೆಯ ಕಾನೂನಗಳನ್ನ ಗಾಳಿಗೆ ತೋರಿ ಕೈಗಾರಿಕಾ ಸ್ಥಾಪನಾ ಉದ್ದೇಶಕ್ಕಿದ್ದ ಪ್ರದೇಶವನ್ನ ಬೇರೆ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವ ದುರುಳರು ಧಾರವಾಡದ ಸತ್ತೂರು, ಬೆಲೂರು ಸೇರಿದಂತೆ ಮುಂತಾದ ಕಡೆಗಳಲ್ಲಿ ಇದ್ದಾರೆ. ಒಂದು ಕೈಗಾರಿಕಾ ಪ್ರದೇಶ ಹೇಗೆ ಇರಬೇಕು, ಅಲ್ಲಿ ಯಾವ ಉದ್ದೇಶಕ್ಕೆ ಆ ಪ್ರದೇಶವನ್ನು ಪಡೆಯಲಾಗಿದೆ ಅದೇ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದಿಯೇ ಎಂಬುದು ಬಹು ಚರ್ಚೆಗೆ ಗ್ರಾಸವಾದ ವಿಷಯ. ಏಕೆಂದರೆ ಈಗಾಗಲೇ ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಧಾರವಾಡ ಕೈಗಾರಿಕಾ ಕ್ಷೇತ್ರದಲ್ಲಿ ಶರವೇಗದಲ್ಲಿ ಬೆಳೆಯುತ್ತಿದೆ. ಆದರೆ ಅಷ್ಟೇ ಪ್ರಮಾಣದಲ್ಲಿ ಕೈಗಾರಿಕಾ ಕೇಂದ್ರಕ್ಕೆ ನೀಡಿದ ಪ್ರದೇಶಗಳು ಅನ್ಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಅದು ಶಿಕ್ಷಣ, ಸಾಮಾಜಿಕ ಕಾರ್ಯ ಚಟುವಟಿಕೆ ಕೇಂದ್ರ, ಐಷಾರಾಮಿ ಬಂಗ್ಲೆ, ನಿವಾಸಕ್ಕೆಂದು ಮನೆ, ಆಸ್ಪತ್ರೆ, ಬಾರ್ ಆಂಡ್ ರಸ್ಟೂಟೆಂಟ್, ಹರಟೆ ಹೂಡೆಯುವ ತಾಣ, ವಿದ್ಯಾರ್ಥಿಗಳು ಹಾಗೂ ಸೇವಾ ನಿರತ ವಸತಿ ಗೃಹಗಳನ್ನಾಗಿ ಬಳಸಿಕೊಳ್ಳುವ ಕೈಗಾರಿಕಾ ಕೇಂದ್ರಗಳಾಗಿವೆ. ಇನ್ನು ಇದಕ್ಕಿಂತಲೂ ಬಹು ಮುಖ್ಯ ವಾಗಿದ್ದ ಕೇಲವರು ತಮ್ಮ ತಮ್ಮ ಕೈಗಾರಿಕಾ ಪ್ರದೇಶದ ಕೇಂದ್ರಗಳ ಸುತ್ತಮುತ್ತಲಿನ ಪ್ರದೇಶಗಳನ್ನ ಸಹ ಅತಿಕ್ರಮಣ ಮಾಡಿದರೆ‌ ಇನ್ನು ಕೇಲವರು ನಕಲಿ ದಾಖಲೆ ಸೃಷ್ಟಿಸಿ ಗುಳುಂ ಮಾಡಿದ್ದಾರೆ. ಆದ್ದರಿಂದ ಧಾರವಾಡ ಜಿಲ್ಲೆಯಲ್ಲಿ ಅನೇಕ ಅರ್ಹ ಕೈಗಾರಿಕೋದ್ಯಮಿಗಳು ಸಂಕಷ್ಟದಲ್ಲಿದ್ದು ಈ ಕೈಗಾರಿಕೋದ್ಯಮಿಗಳು ಹಾಕಿದ ಬಂಡವಾಳ ಬರದೇ ಚಿಂತೆಯಲ್ಲಿದ್ದಾರೆ. ಇನ್ನು ಇನ್ನೊಂದು ಹೆಜ್ಜೆ ಮುಂದೆ ಇದರ ಕರಾಮತ್ತು ಬಗ್ಗೆ ಕೈ ಹಾಕಿದರೆ ಕೈಗಾರಿಕಾ ಉದ್ದೇಶಕ್ಕೆ ಪಡೆದು ಅವಧಿ ಮುಗಿದರೂ ಅಲ್ಲಿ ಯಾವುದೇ ರೀತಿಯ ಕೈಗಾರಿಕೆಗಳನ್ನ ಆರಂಭ ಮಾಡಿಲ್ಲ. ಇದು ಸಹ ಕೈಗಾರಿಕಾ ಅಭಿವೃದ್ಧಿಗೆ ಸಾಕಷ್ಟು ಹಿನ್ನೆಡೆಯಾಗಿದೆ. ಆದ್ದರಿಂದ ಶೀಘ್ರವೇ ಯಾರು ಯಾವ ಕೈಗಾರಿಕಾ ಪ್ರದೇಶದಲ್ಲಿ ಎಷ್ಟು ಕೈಗಾರಿಕಾ ಕೇಂದ್ರಗಳು ಆರಂಭ ಮಾಡಿದ್ದು ಯಾವ ಉದ್ದೇಶಕ್ಕೆ ಪಡೆಯಲಾಗಿದೆ ಅದು ಯಾವುದಕ್ಕೆ ಆ ಪ್ರದೇಶವನ್ನು ಬಳಸಲಾಗುತ್ತಿದೆ ಎಂಬ ಕುರಿತು ಸರಣಿ ವರದಿ ಬರಲಿದೆ.


Spread the love

About Karnataka Junction

[ajax_load_more]

Check Also

ಅ,27 ರಂದು ಯಕ್ಷಲೋಕ ವಿಜಯ ಪ್ರಸಂಗ ಪ್ರದರ್ಶನ

Spread the loveಹುಬ್ಬಳ್ಳಿ: ಹುಬ್ಬಳ್ಳಿಯ ಬಂಟ ಹವ್ಯಾಸಿ ಕಲಾವಿದರ ಸಂಘ, ಕಲಾರಂಗದ ವತಿಯಿಂದ ಅ. 27ರಂದು ಸಂಜೆ 4 ಗಂಟೆಗೆ …

Leave a Reply

error: Content is protected !!