ಹುಬ್ಬಳ್ಳಿ ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭಕ್ಕೆ ವಿವಿಯ ಕುಲಪತಿ, ಅಧ್ಯಕ್ಷ ಪ್ರಭಾಕರ ಕೋರೆ, ಉಪಕುಲಪತಿ ಡಾ.ಅಶೋಕ ಶೆಟ್ಟರ್ ಸೇರಿದಂತೆ ಹಲವು ಗಣ್ಯರು ಚಾಲನೆ ನೀಡಿದರು. ಸಂಸ್ಥೆಯ ಪ್ರಭಾಕರ ಕೋರೆ ಒಳಾಂಗಣ ಕ್ರೀಡಾಂಗಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಘಟಿಕೋತ್ಸವದಲ್ಲಿ 1619 ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ವಿತರಿಸಲಾಯಿತು. ಇನ್ನು ಮೊದಲ ಹಾಗೂ ಎರಡನೇ ರ‌್ಯಾಂಕ್ ಪಡೆದ 35 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಈ ವೇಳೆ ಚಿನ್ನ ಹಾಗೂ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು. ಅಲ್ದೆ ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ ಮೆಕ್ಯಾನಿಕಲ್ ವಿಷಯದ ಮೇಲೆ ವಿನಾಯಕ ಕುಲಕರ್ಣಿ ಹಾಗೂ ಎಂಜಿನಿಯರಿಂಗ್ ಎಜುಕೇಶನ್ ರಿಸರ್ಚ್ ನಲ್ಲಿ ಪಿಎಚ್ ಡಿ ಪಡೆದ ಪ್ರೀತಿ ಬಲಿಗಾರ ಎಂಬ ವಿದ್ಯಾರ್ಥಿನಿಗೆ ಪಿಎಚ್ ಡಿ ಪದವಿ ನೀಡಿ ಗಣ್ಯರಿಂದ ಗೌರವಿಸಲಾಯಿತು. ಪದವಿ ಹಾಗೂ ಪಿಎಚ್ ಡಿ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ವೇಳೆ ತಮ್ಮ ಶಿಕ್ಷಕರು ಹಾಗೂ ಪಾಲಕರೊಂದಿಗೆ ಪರಸ್ಪರ ಸಂತಸ ಹಂಚಿಕೊಂಡರು.
