ಧಾರವಾಡ: ಹಲವು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಪೋಷಕರ ವಿರೋಧದ ನಡುವೆಯೂ ಇಬ್ಬರೂ ಮನೆ ಬಿಟ್ಟು ಓಡಿ ಹೋಗಿ ಮದುವೆಯನ್ನೂ ಆಗಿದ್ದರು. ಮದುವೆಯಾದರೂ ಪೋಷಕರ ವಿರೋಧದ ಮುಂದುವರಿದ ಹಿನ್ನೆಲೆಯಲ್ಲಿ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಾಜ್ಯಾದ್ಯಂತ ಹಿಂದೂ- ಮುಸ್ಲಿಮರ ನಡುವೆ ಧರ್ಮದಂಗಲ್ ಕಿಚ್ಚು ಹೊತ್ತಿದೆ. ಜೊತೆಗೆ, ಲವ್ ಜಿಹಾದ್‌ನಂತಹ ಘಟನೆಗಳು ಕೂಡ ನಡೆಯುತ್ತಿವೆ. ಆದರೆ, ಧಾರವಾಡ ತಾಲೂಕಿನ ಹೆಬ್ಬಳ್ಳಿಯಲ್ಲಿ ಹಿಂದೂ ಧರ್ಮದ ಹುಡುಗ ಮತ್ತು ಮುಸ್ಲಿಂ ಧರ್ಮದ ಹುಡಿಗಿ ಮದುವೆ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರ, ಇಬ್ಬರೂ ಪ್ರೀತಿ ಮಾಡುವುದನ್ನು ತಿಳಿದು ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇನ್ನು ಪ್ರೀತಿಗೆ ಪೋಷಕರು ವಿರೋಧ ಮಾಡಿದ ಹಿನ್ನಲೆಯಲ್ಲಿ, ಪ್ರೇಮಿಗಳ್ಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗುಡ್ಡದ ಪಾಳು ಮನೆಯಲ್ಲಿ ನೇಣಿಗೆ ಶರಣು: ಗ್ರಾಮದ ಮೈಲಾರಿ ಕಾಲಾಳದ (23) ಹಾಗೂ ಮದೀನಾ ಕೊಣ್ಣೂರು ಮೃತಪಟ್ಟವರು. ಕೆಲ ವರ್ಷದಿಂದ ಪ್ರೀತಿಯಲ್ಲಿದ್ದ ಈ ಜೋಡಿಗೆ ಪೋಷಕರ ವಿರೋಧ ವ್ಯಕ್ತವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಓಡಿ ಹೋಗಿದ್ದ ಈ ಜೋಡಿಯು ಮದುವೆಯನ್ನೂ ಆಗಿದ್ದರು. ಆದರೆ, ಈಗ ಇದ್ದಕ್ಕಿದ್ದಂತೆ ಹೆಬ್ಬಳ್ಳಿ ಗ್ರಾಮದ ಗುಡ್ಡದಲ್ಲಿರುವ ಪಾಳು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಂಗಳವಾರ ರಾತ್ರಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಈ ಜೋಡಿಗಳ ಮೃತ ದೇಹವನ್ನು ಗ್ರಾಮಸ್ಥರು ಬುಧವಾರ ಬೆಳಗ್ಗೆ ಕಂಡು ಬೆಚ್ಚಿ ಬಿದ್ದಿದ್ದಾರೆ.
ಓಡಿ ಹೋಗಿದ್ದರೂ ಗ್ರಾಮಕ್ಕೆ ಬಂದಿದ್ದೇಕೆ?: ಈ ಘಟನೆಯ ಕುರಿತಂತೆ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇನ್ನು ಇದು ಆತ್ಮಹತ್ಯೆ ಅಥವಾ ಕೊಲೆಯೋ ಎಂಬ ಬಗ್ಗೆ ತನಿಖೆಯನ್ನೂ ಆರಂಭಿಸಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂಬುದು ತಿಳಿದುಬಂದಿದ್ದು, ಅವರು ಓಡಿ ಹೋಗಿದ್ದರೂ ಪುನಃ ಗ್ರಾಮಕ್ಕೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವನ್ನು ಹುಡುಕುತ್ತಿದ್ದಾರೆ. ಇನ್ನು ಘಟನೆಯ ಕುರಿತಂತೆ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Check Also
ಗಾಂಜಾ ಮಾರುತ್ತಿದ್ದ 12 ಆರೋಪಿಗಳು ಬಂಧನ*. ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಪೋನ್‌ಗಳು ವಶ. ಎನ್ ಶಶಿಕುಮಾರ್.
Spread the loveಹುಬ್ಬಳ್ಳಿ: ಇಂದು ನಗರದಲ್ಲಿ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಗಾಂಜಾ ಮಾರಾಟ ಮಾಡುವ …