ಹುಬ್ಬಳ್ಳಿ: ಸಾಮ್ರಾಟ್ ಅಶೋಕ್ ಚಕ್ರವರ್ತಿ ರವರ ಜಯಂತಿಯನ್ನು ಮಾರ್ಚ್ ೨೯ ರಂದು ವಿಶ್ವ ಬಹುಜನ ಧ್ವಜ ಮತ್ತು ಸಂವಿಧಾನ ರಕ್ಷ ಸೇನಾ ಟ್ರಸ್ಟ್ ವತಿಯಿಂದ ಹಮ್ಮಿಕೊ ಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಸದಾನಂದ ತೇರದಾಳ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆ. ೧೦ ಗಂಟೆಗೆ ನಗರದ ಹೆಡ್ ಪೋಸ್ಟ್ ಆಫೀಸ್ ಬಳಿ ಇರುವ ಸಂವಿಧಾನದ ಶಿಲ್ಪ ಡಾ. ಅಂಬೇಡ್ಕರ್ ಅವರ ಪುತ್ಥಳಿ ಆವರಣದಲ್ಲಿ ಸಾಮ್ರಾಟ್ ಅಶೋಕ ಚಕ್ರವರ್ತಿ ಜಯಂತಿಯನ್ನು ಪ್ರಪ್ರಥಮವಾಗಿ ಆಚರಿಸಲಾಗುವುದು ಎಂದರು.
ಇನ್ನೂ ಇದೇ ವೇಳೆ ಸಂಘಟನೆಯ ರಾಜ್ಯ ಅಧ್ಯಕ್ಷರಿಂದ ಸಂಘಟನೆಯ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡುವ ಮೂಲಕ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಸದಸ್ಯ ಎಂ. ದಿಕ್ಷಿತ್, ಶಕ್ತಿರಾಜ್ ದಾಂಡೇಲಿ, ರಾಜ್ಯ ರೈತಸಂಘಟನೆ ಅಧ್ಯಕ್ಷ ಹಿರೇಮಠ, ಮಾರುತಿ ಹುಟಗಿ ಉಪಸ್ಥಿತರಿದ್ದರು.
Check Also
ಅ,27 ರಂದು ಯಕ್ಷಲೋಕ ವಿಜಯ ಪ್ರಸಂಗ ಪ್ರದರ್ಶನ
Spread the loveಹುಬ್ಬಳ್ಳಿ: ಹುಬ್ಬಳ್ಳಿಯ ಬಂಟ ಹವ್ಯಾಸಿ ಕಲಾವಿದರ ಸಂಘ, ಕಲಾರಂಗದ ವತಿಯಿಂದ ಅ. 27ರಂದು ಸಂಜೆ 4 ಗಂಟೆಗೆ …