Breaking News

ಮಾ.೨೫ ರಂದು ದಿವ್ಯಾಂಗ ಸೇವಾ ಕೇಂದ್ರ ಪ್ರಾರಂಭ

Spread the love

ಹುಬ್ಬಳ್ಳಿ : ಸಕ್ಷಮ ಉತ್ತರ ಕರ್ನಾಟಕ ಪ್ರಾಂತ್ ವತಿಯಿಂದ ಹುಬ್ಬಳ್ಳಿಯಲ್ಲಿ ಮಾ. ೨೫ ರಂದು ದಿವ್ಯಾಂಗ ಸೇವಾ ಕೇಂದ್ರ ಪ್ರಾರಂಭಿಸಲಾಗುವುದೆಂದು ಸಕ್ಷಮ ಉತ್ತರ ಕರ್ನಾಟಕ ಪ್ರಾಂತ್ ಅಧ್ಯಕ್ಷ ಎಸ್. ಬಿ. ಶೆಟ್ಟಿ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ ಸಕ್ಷಮ್ ” ಉತ್ತರ ಕರ್ನಾಟಕ ಪ್ರಾಂತ್ , ಹುಬ್ಬಳ್ಳಿ ಈ ಸಂಸ್ಥೆಯು ‘ ದಿವ್ಯಾಂಗರ ಕಲ್ಯಾಣಕ್ಕಾಗಿ ಸಮರ್ಪಿತವಾದ ಸಂಸ್ಥೆ , ಕಳೆದ 8 ವರ್ಷಗಳಿಂದ ಉತ್ತರ ಕರ್ನಾಟಕದ 16 ಜಿಲ್ಲೆಗಳಲ್ಲಿ ವಿಶೇಷ ಚೇತನರ ಕಲ್ಯಾಣಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ.
ಇದೀಗ ಮಾ 25 ರಂದು ಶನಿವಾರ ಇನ್ನೊಂದು “ ದಿವ್ಯಾಂಗ ಸೇವಾ ಕೇಂದ್ರ ” ವನ್ನು ಕರ್ನಾಟಕ ಪ್ರಾಂತ್ , ಹುಬ್ಬಳ್ಳಿ ವತಿಯಿಂದ ಮಂಗಲ ಓಣಿ , ಕಾರವಾರ ರಸ್ತೆ , ಹುಬ್ಬಳ್ಳಿಯಲ್ಲಿ ಬೆಳ್ಳಿಗ್ಗೆ 9.30 ಗಂಟೆಗೆ ಉದ್ಘಾಟಿಸಲಾಗುವುದು.
ಈ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆರ್.ಎಸ್.ಎಸ್ . ಅಖಿಲ ಭಾರತ ವ್ಯವಸ್ಥೆ ಪ್ರಮುಖರಾದ ಮಂಗೇಶಜೀ ಭಂಡೆ ಅವರು ಭಾಗವಹಿಸುವರು , ಡಾ . ರಾಮಲಿಂಗಪ್ಪ ಅಂಟರತಾನಿ , ಡಾ . ಈಶ್ವರ ಹೋಸಮನಿ , ಎಚ್.ಎಚ್.ಕುಕ್ಕನೂರ , ಜಿತೇಂದ್ರ ಮಜೇಥಿಯಾ , ಮಹಾದೇವ ಕರಮರಿ , ಸುಹಾಸ ಬೊನಗೇರಿ , ಸುಗ್ಗಿ ಸುಧಾಕರ ಶೆಟ್ಟಿ ಹಾಗೂ ವಿನೋದ ಪ್ರಕಾಶಜೀ ಸಮಾರಂಭಕ್ಕೆ ಗೌರವ ಅತಿಥಿಗಳಾಗಿ ಭಾಗವಹಿಸುವರು . “ ಸಕ್ಷಮ್ ” ಉತ್ತರ ಕರ್ನಾಟಕ ಪ್ರಾಂತ್ , ಹುಬ್ಬಳ್ಳಿ ಇದರ ಅಧ್ಯಕ್ಷರಾದ ಸಿ.ಎ. ಎಸ್.ಬಿ.ಶೆಟ್ಟಿ ಅವರು ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುನೀಲ್ ಗೋಖಲೆ , ಸುಭಾಸ ಬಬ್ರುವಾಡ , ನಾಗಲಿಂಗ ಮುರಗಿ , ಸರ್ವೇಶ್ವರಯ್ಯ ಮಠ ಉಪಸ್ಥಿತರಿದ್ದರು.


Spread the love

About Karnataka Junction

[ajax_load_more]

Check Also

ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ

Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …

Leave a Reply

error: Content is protected !!