Breaking News

ಹೋಮಿಯೋಪತಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Spread the love

ಹುಬ್ಬಳ್ಳಿ; ಧಾರವಾಡ ಮಹಾತ್ಮಾ ಬಸವೇಶ್ವರ ನಗರದಲ್ಲಿಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ ರವರ ಅಭಿಮಾನಿ ಬಳಗದ ವತಿಯಿಂದ ಉಚಿತ ಹೊಮಿಯೋಪತಿ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ನ್ಯಾಯವಾದಿ ಶೇಖರ ಕವಳಿ ಹಾಗೂ ಶ್ರೀಕಾಂತ ಕ್ಯಾತಪ್ಪನವರ
ವೈದ್ಯರಾದ ಶ್ರೀಕಾಂತ ಮಿರಜಕರ, ಡಾ‌.ಸುಕೃತ ಶೆಟ್ಟರ ಹಾಗೂ ಡಾ‌. ಬಸವರಾಜ ಅಂಗಡಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ ಶೇಕರ ಕವಳಿ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ರೀತಿಯ ಚಿಕಿತ್ಸಾ ಪದ್ಧತಿಗಳಿವೆ. ಅವುಗಳಲ್ಲಿ ಹೊಮಿಯೋಪತಿ ಚಿಕಿತ್ಸೆಯೂ ಸಹ ಪ್ರಸಿದ್ಧ ಪದ್ಧತಿಯಾಗಿದೆ. ಇತಿಹಾಸ ಕಾಲದಿಂದಲೂ ಅನುಸರಿಕೊಂಡು ಬಂದ ಈ ಚಿಕಿತ್ಸಾ ಪದ್ಧತಿಯನ್ನು ಮುಖಂಡ ಶ್ರೀಕಾಂತ ಕ್ಯಾತಪ್ಪನವರ ರವರು ಉಚಿತವಾಗಿ ನಾಗರಿಕರಿಗೆ ಮುಟ್ಟಿಸುವ ಕಾರ್ಯವನ್ನು ಮಾಡುತ್ತಿರುವ ಸಲುವಾಗಿ ಅವರನ್ನು ಅಭಿನಂದಿಸಿದರು. ಡಾ. ಸುಕೃತ ಶೆಟ್ಟರ, ಡಾ. ಶ್ರೀ ವಿದ್ಯಾ, ಡಾ. ವಿಷ್ಣುವರ್ಧನ್,
ಸಿ.ಎಸ್. ಪಾಟೀಲ, ಶೇಖರ, ಅಶೋಕ ಶೆಟ್ಟರ ರವರು, ಶಂಕರ ಪರೀಟ ರವರು, ಸಂಜು ಹೊಸಕೋಟಿ, ಹರೀಶ ಮಾನೆ ರವರು, ಹಾಗೂ ಮಹಾತ್ಮಾ ಬಸವೇಶ್ವರ ನಗರ, ಗುಲಗಂಜಿಕೊಪ್ಪ, ಕೊಪ್ಪದಕೇರಿ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.


Spread the love

About Karnataka Junction

[ajax_load_more]

Check Also

ಬಸ್ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ

Spread the loveಹುಬ್ಬಳ್ಳಿ: ಸಾರಿಗೆ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ …

Leave a Reply

error: Content is protected !!