ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಣೆ
ಎಸ್ ಡಿಎಂಸಿ ಅಧ್ಯಕ್ಷ, ಹಿರಿಯ ನ್ಯಾಯವಾದಿ ಶೇಖರ ಕವಳಿ ನೇತೃತ್ವ
ಧಾರವಾಡ: ನಗರದ ಗುಲಗಂಜಿಕೊಪ್ಪದ ಕನ್ನಡ ಹಿರಿಯ ಪ್ರಾರ್ಥಮಿಕ ಶಾಲೆ ನಂಬರ 13 ಹಾಗೂ ಕನ್ನಡ ಮತ್ತು ಉರ್ದು ಶಾಲೆಯ ವಿದ್ಯಾರ್ಥಿಗಳಿಗೆ,ವಿದ್ಯಾರ್ಥಿನಿಯರಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಲಾಯಿತು. ದಾನಿಗಳು ಹಾಗೂ ಕರ್ನಾಟಕ ಸರ್ಕಾರದ ಬಯಲು ಸೀಮೆಯ ಅಧ್ಯಕ್ಷರಾದ
ತವಣಪ್ಪ ಪಾಯಪ್ಪ ಅಷ್ಟಗಿ ನೋಟ್ ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳು, ಶಾಲಾ ಸುಧಾರಣಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಭಾರತೀಯ ಜನತಾ ಪಕ್ಷದ ಮುಖಂಡರಾದ ಶೇಖರ ಕವಳಿ, ಶ್ರೀಕಾಂತ ಖ್ಯಾತಪ್ಪನವರು ಬಿ.ಜೆ.ಪಿ ಯ ಯುವ ಮುಖಂಡರು,ಹಿರಿಯರಾದ ಫಕೀರಗೌಡ ಪಾಟೀಲರು, ಶಂಕರ ಪರೀಟ, ಶಾಲಾ ಅಭಿವೃದ್ಧಿ ಮಂಡಳದ ಸದಸ್ಯರಾದ ಅಶೋಕ ಶೆಟ್ಟರ್, ಶಾಲಾ ಅಭಿವೃದ್ಧಿ ಮಂಡಳದ ಉಪಾಧ್ಯಕ್ಷರಾದ ಮಂಜು ಹಿರೇಮಠ ಹಾಗೂ ಶಾಲಾ ಎಲ್ಲಾ ಶಿಕ್ಷಕ,ಶಿಕ್ಷಕಿಯರು ಭಾಗವಹಿಸಿದ್ದರು.