Breaking News

ಹುಬ್ಬಳ್ಳಿ ನಗರ- ನನಗೆ ಸಿಗಬೇಕಾದ ಜವಾಬ್ದಾರಿ ಜಗದೀಶ್ ಶೆಟ್ಟರ್ ಗೆ ಸಿಕ್ಕಿದೆ ಸಂತೋಷವಾಗಿದೆ ಕುಸುಗಲ್ ರಸ್ತೆಯ ತಮ್ಮ ನಿವಾಸದಲ್ಲಿ ಶಾಸಕ ಶಂಕರ ಪಾಟೀಲ

Spread the love

https://youtu.be/tLd4_qnIvkg
ಹುಬ್ಬಳ್ಳಿ: ನಮ್ಮ ಸಮಾಜದ ಮುಖಂಡರಾದ ಶಾಸಕ ಯತ್ನಾಳ ಹಾಗೂ ಬೆಲ್ಲದ ಯಾವ ಅರ್ಥದಲ್ಲಿ ಮಾತನಾಡುತ್ತಿದ್ದಾರೆ ಗೊತ್ತಿಲ್ಲ. ಬೆಲ್ಲದ ಅವರು ಚಿಕ್ಕವರು ಇದ್ದಾರೆ. ಬೆಲ್ಲದ ಅವರು ಪಕ್ಷದ ತೀರ್ಮಾನದಂತೆ ನಡೆಯಲಿ ಎಂದು ನವಲಗುಂದ ಬಿಜೆಪಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ಬೆಲ್ಲದ ಅವರಿಗೆ ಸಲಹೆ ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬೆಲ್ಲದ ಅವರು ದೂರದೃಷ್ಟಿ ಇಟ್ಟುಕೊಂಡು ರಾಜಕಾರಣ ಮಾಡಬೇಕು. ಅರವಿಂದ ಬೆಲ್ಲದ ಧಾರವಾಡ ಜಿಲ್ಲೆಯ ಶಾಸಕರಲ್ಲಿನ ಒಗ್ಗಟ್ಟು ಒಡೆಯಬಾರದು. ಬೆಲ್ಲದ ಅವರು ಸಿಎಂ ಆದರೆ ನಮಗೂ ತುಂಬಾ ಖುಷಿ ಇದೆ. ಆದರೆ ಅದಕ್ಕೆ ಇನ್ನೂ ತುಂಬಾ ಸಮಯ ಇದೆ. ಧಾರವಾಡ ಜಿಲ್ಲೆಯಲ್ಲಿ ಪಕ್ಷದ ಹಿರಿಯರಾದ ಪ್ರಹ್ಲಾದ ಜೋಶಿ, ಜಗದೀಶ್ ಶೆಟ್ಟರ್ ಇದ್ದಾರೆ‌. ಅವರ ಹೆಸರಿಗೆ ದಕ್ಕೆ ಬಾರದಂತೆ ಬೆಲ್ಲದ ಅವರು ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ರಾಜ್ಯಕ್ಕೆ ಬಿಜೆಪಿ ಪಕ್ಷದ ವರಿಷ್ಠ ಅರುಣ್ ಸಿಂಗ್ ಆಗಮಿಸುವ ವಿಚಾರವಾಗಿ ಮಾತನಾಡಿದ ಅವರು,ವರಿಷ್ಠರನ್ನು ಭೇಟಿ ಮಾಡುವ ಬಗ್ಗೆ ಸದ್ಯಕ್ಕೆ ನಮ್ಮ ಪಕ್ಷದ ಶಾಸಕರಿಗೆ ಸೂಚನೆ ಬಂದಿಲ್ಲ. ವರಿಷ್ಠರು ಶಾಸಕರ ಜೊತೆ ಪ್ರತ್ಯೇಕ ಚರ್ಚೆ ಅವಕಾಶ ನೀಡಿದರೇ ನಮ್ಮ ಅಭಿಪ್ರಾಯ ತಿಳಿಸುತ್ತೇವೆ ಎಂದರು.
ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ನಾಯಕತ್ವ ಬದಲಾವಣೆ ಇಲ್ಲವೇ ಇಲ್ಲ. ಬಿಎಸ್ ವೈ ನೇತೃತ್ವದಲ್ಲಿ ಚುನಾವಣೆ ನಡೆದಿದೆ.‌ ಅವರೇ ನಮ್ಮ ನಾಯಕರು. ಬಿ.ಎಸ್.ವೈ ನಾಯಕತ್ವಕ್ಕೆ ನನ್ನ ಬೆಂಬಲ ಇದೆ. ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ. ಸದ್ಯಕ್ಕೆ ನಿಗಮ ಸ್ಥಾನ ನೀಡಿದ್ದಾರೆ. ಅದು ನನಗೆ ತೃಪ್ತಿ ಇದೆ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.


Spread the love

About Karnataka Junction

    Check Also

    ಮಹದಾಯಿ ಯೋಜನೆ ಜಾರಿಗೆ ಬಿಜೆಪಿ ಸಿದ್ಧ-‌ಪ್ರಲ್ಹಾದ್ ಜೋಶಿ

    Spread the loveಹುಬ್ಬಳ್ಳಿ : ಕಳಸಾ-ಬಂಡೂರಿ ಹಾಗೂ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಭಾರತೀಯ ಜನತಾ ಪಕ್ಷ ಯಾವಾಗಲೂ ಸಿದ್ಧವಿದ್ದು ಈ …

    Leave a Reply

    error: Content is protected !!