Breaking News

ಆಕಾಂಕ್ಷಿಗಳು, ಪದಾಧಿಕಾರಿಗಳೊಂದಿಗೆ ಜನಸಾಮಾನ್ಯರ ಶಕ್ತಿ ಸಭೆ

Spread the love

ಹುಬ್ಬಳ್ಳಿ: ‘ಶಿಕ್ಷಣ, ಆರೋಗ್ಯ ಸೇರಿದಂತೆ 15 ಅಂಶಗಳ ನ್ನೊಳಗೊಂಡ ಜನರಿಂದ‌ ಜನರಿಗಾಗಿ ಪ್ರಣಾಳಿಕೆಯನ್ನು ಮಾರ್ಚ್ 20ರಂದು ಬಿಡುಗಡೆ ಮಾಡಲಾಗುವುದು’ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಕಿತ್ತೂರು ಕರ್ನಾಟಕದ ಉಸ್ತುವಾರಿ ರವಿಚಂದ್ರ ನೆರಬೆಂಚಿ ಹೇಳಿದರು.
‘ಸಮಗ್ರ ಕರ್ನಾಟಕದ ಅಭಿವೃದ್ಧಿಯ ಪ್ರಣಾಳಿಕೆ ಸಿದ್ಧಪಡಿಸುವುದಕ್ಕಾಗಿ ರಾಜ್ಯದ 224 ಕ್ಷೇತ್ರಗಳಲ್ಲಿ ರೈತರು, ಕಾರ್ಮಿಕರು, ನೌಕರರು ಸೇರಿದಂತೆ ಸಲಹೆ–ಸೂಚನೆ ಪಡೆಯಲಾಗುತ್ತಿದೆ. ವೆಬ್‌ಸೈಟ್‌ ಮತ್ತು ಕ್ಯೂ ಆರ್ ಕೋಡ್‌ ಮೂಲಕವೂ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ’ ಎಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜನರ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ. ನಮ್ಮ ಪಕ್ಷ ಮೀನು‌ ಹಿಡಿದು ಕೊಡುವುದಿಲ್ಲ.‌ ಬದಲಿಗೆ, ಮೀನು ಹಿಡಿಯುವುದನ್ನು ಕಲಿಸುತ್ತದೆ. ನಮ್ಮ ಆದ್ಯತೆ ಶಿಕ್ಷಣ ಮತ್ತು ಆರೋಗ್ಯ. ನವಿಲು ಕುಣಿಯುತ್ತಿದೆ ಎಂದು ಕಾಗೆ ಕೂಡ ಕುಣಿಯುವ ಪ್ರಯತ್ನ ಮಾಡುತ್ತಿದೆ’ ಎಂದು ಟೀಕಿಸಿದರು.
ರಾಜ್ಯ ಉಪಾಧ್ಯಕ್ಷ ರೋಹನ ಐನಾಪುರ ಮಾತನಾಡಿ, ‘ಜನರು ನೀಡುವ ಸಲಹೆ– ಸೂಚನೆಗಳ ನ್ನೊಳಗೊಂಡ ಪಕ್ಷದ ಪ್ರಣಾಳಿಕೆಯನ್ನು ಸಿದ್ದಪಡಿಸುವ ಹೊಣೆಯನ್ನು ಮಾಜಿ ವಿಜ್ಞಾನಿ ಅಶ್ವಿನಿ ಮಹೇಶ್ ಅವರಿಗೆ ನೀಡಲಾಗಿದೆ. ಎಎಪಿ ಇತರ ಪಕ್ಷಗಳಂತೆ ಅಲ್ಲ. ಹೇಳುವುದನ್ನೇ ಮಾಡುತ್ತದೆ, ಮಾಡಿದ್ದನ್ನೇ ಹೇಳುತ್ತದೆ’ ಎಂದರು.
‘ಚುನಾವಣೆ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ಯೋಜನೆಗಳು ಏನಿರಬೇಕು ಎಂಬುದರ ಕುರಿತು ಜಿಲ್ಲಾ ಸಂಚಾಲಕರು ಮತ್ತು ಪದಾಧಿಕಾರಿಗಳ ಜೊತೆ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ಚರ್ಚೆ ನಡೆಯುತ್ತಿದೆ’ ಎಂದು ತಿಳಿಸಿದರು.
ಸುದ್ದಿಗೋಷ್ಠಿ ಬಳಿಕ, ಕಿತ್ತೂರು ಕರ್ನಾಟಕ ವಲಯದ ಆಕಾಂಕ್ಷಿಗಳು ಮತ್ತು ಜಿಲ್ಲಾ ಪದಾಧಿಕಾ ರಿಗಳೊಂದಿಗೆ ರಾಜ್ಯ ನಾಯಕರು ಜನ ಸಾಮಾನ್ಯರ ಶಕ್ತಿ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದರು.
ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಹಿರೇಮಠ, ವಿಕಾಸ ಸೊಪ್ಪಿನ ಹಾಗೂ ಬಸವರಾಜ ತೆರದಾಳ ಇದ್ದರು.
ಪ್ರಚಾರಕ್ಕೆ ಕೇಜ್ರಿವಾಲ್, ಮಾನ್
‘ಚುನಾವಣೆ ಅಂಗವಾಗಿ ಕಿತ್ತೂರ ಕರ್ನಾಟಕದ ಬಾಗಲಕೋಟೆ, ಧಾರವಾಡ, ಬೆಳಗಾವಿ ಹಾಗೂ ಗದಗದಲ್ಲಿ ಮುಂದಿನ ತಿಂಗಳು ದೊಡ್ಡ ಮಟ್ಟದ ಪ್ರಚಾರ ಕಾರ್ಯಕ್ರಮ ಆಯೋಜಿ ಸಲಾಗುವುದು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ರವಿಚಂದ್ರ ನೆರಬೆಂಚಿ ಹೇಳಿದರು.


Spread the love

About Karnataka Junction

[ajax_load_more]

Check Also

ಹಸು ಕೆಚ್ಚಲು ದುರ್ಘಟನೆಯಲ್ಲಿ ಜಮೀರ್ ಅಹ್ಮದ್ ನಾಟಕ ರಚನೆ ಮಾಡ್ತಿದ್ದಾರೆ – ಹೊಸ ಬಾಂಬ್ ಸಿಡಿಸಿದ ಮುತಾಲಿಕ್‌

Spread the loveಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ಘಟನೆ ಅತ್ಯಂತ ಶೋಚನೀಯ. ಸಚಿವ ಜಮೀರ್ ಅಹ್ಮದ್ ನಾಟಕ ರಚನೆ ಆಡುತ್ತಿದ್ದಾರೆ ಎಂದು …

Leave a Reply

error: Content is protected !!