Breaking News

ದೇಶ ಬದಲಾಗಬೇಕಾದರೆ ಮೊದಲು ನಾವು ಬದಲಾಗಬೇಕು- ಡಾ.ಪ್ರಮೋದ್ ಹಿರೇಮಠ

Spread the love

ಹುಬ್ಬಳ್ಳಿ: ದೇಶ, ಸಂವಿಧಾನ, ಕಾನೂನು, ಪ್ರಜಾಪ್ರಭುತ್ವ ಈ ಹಿನ್ನೆಲೆಗಳನ್ನು ಇರಿಸಿಕೊಂಡಿರುವ ಹಲವು ಚಿತ್ರಗಳು ಈಗಾಗಲೇ ತೆರೆ ಮೇಲೆ ಪ್ರೇಕ್ಷಕರನ್ನು ರಂಜಿಸಿವೆ. ಸಮಾಜಕ್ಕೆ ಸಂದೇಶ ನೀಡುವ
ಪ್ರಜಾರಾಜ್ಯ ಚಿತ್ರ ಒಂದು ಸಾಮಾಜಿಕ ಬದಲಾವಣೆಯ ಸಂದೇಶ ನೀಡುವಂತವಹದ್ದು ಎಂದು ನಟ ಡಾ. ಪ್ರಮೋದ್ ಹಿರೇಮಠ ಅಭಿಪ್ರಾಯಪಟ್ಟರು.
ನಗರದ ಅಪ್ಸರಾ ಚಿತ್ರಮಂದಿರದಲ್ಲಿಂದು ಬಿಡುಗಡೆಯಾದ ಪ್ರಜಾರಾಜ್ಯ ಚಿತ್ರ ವೀಕ್ಷಣೆ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಅವರು ಅಭಿಪ್ರಾಯ ಹಂಚಿಕೊಂಡರು.
ವಿಜಯ್ ಭಾರ್ಗವ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್, ನಾಗಾಭರಣ, ಡಾ. ವರದರಾಜು, ಅಚ್ಯುತಕುಮಾರ್, ವಿಜಯ್ ಭಾರ್ಗವ, ಸುಧಾ ಬೆಳವಾಡಿ, ದಿವ್ಯ ಗೌಡ, ಸುಧಾರಾಣಿ, ಸಂಪತ್ ಮೈತ್ರೇಯ, ಚಿಕ್ಕಹೆಜ್ಜಾಜಿ ಮಹದೇವ್,ಹುಬ್ಬಳ್ಳಿಯ ಹೆಸರಾಂತ ಮಧುಮೇಹ ತಜ್ಞರಾದ
ಡಾ.ಪ್ರಮೋದ್ ಹಿರೇಮಠ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಮೊದಲಾದವರ ನಟನೆಯನ್ನು ಪ್ರೇಕ್ಷಕರು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಜನರ ಉತ್ತಮ ಸಂದೇಶವಿರುವ ಚಿತ್ರ ಇದಾಗಿದ್ದು, ಪ್ರೇಕ್ಷಕರು ಚಿತ್ರವನ್ನು ಮೆಚ್ಚಿಕೊಂಡಿದ್ದು ಈಗ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಮಹತ್ವ ಸಾರುವ ನಮ್ಮ ʼಪ್ರಜಾರಾಜ್ಯʼ ಚಿತ್ರ ಬಿಡುಗಡೆಯಾಗಿದ್ದು ಸಂತಸ ತಂದಿದೆ. ʼಏನಾಗಲಿ ಎದ್ದೇಳುʼ ಹಾಡು ನಿರೀಕ್ಷೆಗೂ ಮೀರಿ ಎಲ್ಲರ ಗಮನ ಸೆಳೆಯುತ್ತಿದೆ.


Spread the love

About Karnataka Junction

    Check Also

    ಹುಬ್ಬಳ್ಳಿಯಲ್ಲಿಯೇ ಕನ್ನಡಕ್ಕೆ ಅಪಮಾನ: ಎಲ್ಲಿದ್ದೀರಾ ಕನ್ನಡಾಭಿಮಾನಿಗಳೇ, ಅಧಿಕಾರಿಗಳೇ..?

    Spread the loveಹುಬ್ಬಳ್ಳಿ: ಕನ್ನಡ ನಾಡು ನುಡಿ ಸಂಸ್ಕೃತಿಗೆ ಹುಬ್ಬಳ್ಳಿ ಬಹುದೊಡ್ಡ ಕೊಡುಗೆ ನೀಡಿದೆ. ಆದರೆ ಇಲ್ಲಿಯೇ ಕನ್ನಡಕ್ಕೆ ಅಪಮಾನ …

    Leave a Reply