ಹುಬ್ಬಳ್ಳಿ: ನಗರದ ಚಾಮುಂಡೇಶ್ವರಿ ನಗರದಲ್ಲಿ ಅಸ್ತಿತ್ವಂ ಫೌಂಡೇಷನ್ ಸೇವಾ ಸಂಸ್ಥೆಯ ಲೋಕಾರ್ಪಣೆ ಕಾರ್ಯಕ್ರಮವು ಭಾರತೀಯ ಸೇನೆಯ ಯೋಧರಾದ ಪ್ರಕಾಶ ದೇಶಣ್ಣವರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರುಗಿತು. ಶಿಕ್ಷಣ ಮತ್ತು ಸಮಾಜಸೇವೆಯ ಗುರಿಯೊಂದಿಗೆ ಸಮಾನಮನಸ್ಕ ಯುವಕರು ಸೇರಿ ಈ ಅಸ್ತಿತ್ವಂ ಫೌಂಡೇಷನ್ ಅನ್ನು ಸ್ಥಾಪಿಸಿದ್ದೇವೆ ಎಂದು ಅಸ್ತಿತ್ವಂ ಫೌಂಡೇಷನ್ನಿನ ಅಧ್ಯಕ್ಷ ಶ್ರೀನಿವಾಸ ಅನಂತಪುರ ತಿಳಿಸಿದರು.
ಅಧ್ಯಕ್ಷತೆಯನ್ನು ಫೌಂಡೇಷನ್ ಗೌರವಾಧ್ಯಕ್ಷ ಬಾಬು ಬಳ್ಳಾರಿ ವಹಿಸಿದ್ದರು. ಅತಿಥಿಗಳಾಗಿ ಚಾಮುಂಡೇಶ್ವರಿ ನಗರದ ಅಧ್ಯಕ್ಷ ಪರಶುರಾಮ ಮಲ್ಯಾಳ, ಸ್ವಾಭಿಮಾನ ಫೌಂಡೇಷನ್ ಅಧ್ಯಕ್ಷರಾದ ಮಂಜುನಾಥ ಕೊಂಡಪಲ್ಲಿ ಮತ್ತು ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ ಸಿದ್ಲಾಪುರ ಮತ್ತು ಮಂಜುನಾಥ ಹೆಬಸೂರ ಆಗಮಿಸಿದ್ದರು. ಸಂದರ್ಭದಲ್ಲಿ ಮಾತನಾಡಿದ ಅತಿಥಿ ಮಂಜುನಾಥ ಕೊಂಡಪಲ್ಲಿ, ಪರಶುರಾಮ ಮಲ್ಯಾಳ ಮತ್ತು ಮಂಜುನಾಥ ಹೆಬಸೂರ ಅವರು ನೂತನ ಪದಾಧಿಕಾರಿಗೆ ಅಭಿನಂದಿಸಿ ಸಂಸ್ಥೆಯ ಉದ್ದೇಶಗಳ ಕುರಿತು ಮುಕ್ತ ಕಂಠದಿಂದ ಶ್ಲಾಘಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಪ್ರಧಾನ ಕಾರ್ಯದರ್ಶಿಯಾದ ವಿಜಯ ಚಿನ್ನಾರಿ ಅಚ್ಚುಕಟ್ಟಾಗಿ ನಿರ್ವಹಿಸಿದರು. ಈ ಸಂದರ್ಭದಲ್ಲಿ ಆಗಮಿಸಿದ್ದ ಅತಿಥಿಗಳಿಗೆ ಮತ್ತು ಗಣ್ಯರಿಗೆ ನೆನಪಿನಾರ್ಥವಾಗಿ ಪುಸ್ತಕ ಮತ್ತು ಸಸಿಗಳನ್ನು ನೀಡಲಾಯಿತು.
ಅಸ್ತಿತ್ವಂ ಫೌಂಡೇಷನನ ನೂತನ ಪದಾಧಿಕಾರಿಗಳಾದ ರಾಜಪ್ಪ ಪೂಜಾರ, ವಿನಾಯಕ ಮಾದಾರ, ವೆಂಕಟೇಶ್ ಭಂಡಾರಿ, ಹನುಮಂತ ನಸಬಿ, ಶ್ರೀನಿವಾಸ ಮುಚಗೋಟಿ, ಶ್ರೀಕಾಂತ ಕಡೇಮನಿ, ಚೇತನ ಬಗಾಡೆ, ವಿನಾಯಕ ಕದಂ, ಅನಿಲಕುಮಾರ ಆತ್ಮಕೂರ ಮುಂತಾದವರು ಉಪಸ್ಥಿತರಿದ್ದರು.
