Breaking News

ಆರ್ಯವೈಶ್ಯ ಸಮಾಜ‌ ಸಮಾಜಮುಖಿ ಕಾರ್ಯಕ್ಕೆ ಮಹತ್ವ ನೀಡುತ್ತದೆ- ಡಾ.ಕ್ರಾಂತಿಕಿರಣ

Spread the love

ಹುಬ್ಬಳ್ಳಿ: ಆರ್ಯವೈಶ್ಯ ಸಮಾಜ ಶ್ರಮ ಜೀವಿ ಜೊತೆಗೆ ಸಮಾಜಮುಖಿ ಕಾರ್ಯಕ್ಕೆ ಮಹತ್ವ ನೀಡುತ್ತದೆ ಎಂದು ಬಾಲಾಜಿ ಆಸ್ಪತ್ರೆಯ ಚೇರ್ಮನ್ ಹಾಗೂ ಆರ್‌.ಜಿ.ಯು.ಎಚ್.ಎಸ್ ಸಿಂಡಿಕೇಟ್ ಸದಸ್ಯ ಡಾ. ಕ್ರಾಂತಿಕಿರಣ್ ತಿಳಿಸಿದರು.
ಹುಬ್ಬಳ್ಳಿ ಆರ್ಯ ವೈಶ್ಯ ಸಮಾಜ, ಶ್ರೀ ವಾಸವಿ ಮಹಿಳಾ ಮಂಡಳಿ, ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರ ಹಾಗೂ ಜಯಪ್ರಿಯ ಕಣ್ಣಿನ ಆಸ್ಪತ್ರೆ ವತಿಯಿಂದ “ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ” ಅಂಗವಾಗಿ ಇಲ್ಲಿನ ಕಂಚಗಾರ ಗಲ್ಲಿಯ ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದರಿಂದ ಅನೇಕ ರೋಗಗಳಿಗೆ ತುತ್ತಾಗುವಂತಾಗಿದೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಂಡು ಉತ್ತಮ ದೇಹಾರೋಗ್ಯ ಕಾಪಾಡಿಕೊಳ್ಳಬೇಕು. ನಾವು ಆರೋಗ್ಯವಾಗಿದ್ದರೆ ಮಾತ್ರ ಬದುಕಿನಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಶ್ರೀ ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಸಂಧ್ಯಾ ತಾವರಗೇರಿ ಮಾತನಾಡಿ, ಮನೆಯಲ್ಲಿ ಮಹಿಳೆಯೊಬ್ಬರು ಖಾಯಿಲೆಯಿಂದ ಹಾಸಿಗೆ ಹಿಡಿದರೆ ಇಡೀ ಮನೆಯೇ ಅನಾರೋಗ್ಯವಾಗುತ್ತದೆ. ಇವುಗಳನ್ನು ತಡೆಯಲು ನಮ್ಮ ಮಹಿಳಾ ಮಂಡಳದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮಹಿಳೆಯರಿಗಾಗಿಯೇ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಾಸವಿ ಮಹಿಳಾ ಮಂಡಳದ ಉಪಾಧ್ಯಕ್ಷೆ ಸುನಿತಾ ಪದಾಧಿಕಾರಿಗಳಾದ ಉಷಾ, ಗಾಯತ್ರಿ, ಗೌರಿ,‌ ಮಾನಸಿ, ಪ್ರಮೀಳಾ, ವಿದ್ಯಾ, ಮುಖಂಡರಾದ ಪ್ರಶಾಂತ ಸವಣೂರ, ವೈದ್ಯರಾದ ಡಾ. ರಾಜಶೇಖರ,‌ ಡಾ. ಅಖಿಲೇಶ್ , ಡಾ. ಅಭಯಾಂಭಿಕಾ, ಡಾ. ಜಯಮೇಜಯ, ಇನ್ನಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೂರಾರು ಮಹಿಳೆಯರು ತಮ್ಮ ಆರೋಗ್ಯ ತಪಾಸಣೆ ಮಾಡಿಕೊಂಡರು.


Spread the love

About Karnataka Junction

    Check Also

    ‘ನೇಹಾ ಕೊಲೆ: ರಾಜ್ಯದಾದ್ಯಂತ ಎಬಿವಿಪಿಯಿಂದ ಪ್ರತಿಭಟನೆ ನಾಳೆ’

    Spread the loveಹುಬ್ಬಳ್ಳಿ: ‘ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ನಾಳೆ( ಎ. 20) ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ …

    Leave a Reply

    error: Content is protected !!