ಹುಬ್ಬಳ್ಳಿ : ಶಾಲೆಯತ್ತ ಮಕ್ಕಳನ್ನ ಆಕರ್ಷಣೆ ಮಾಡಲು ಹಾಗೂ ಅನ್ನದ ಹಸಿವಿನಂದ ಮಕ್ಕಳು ಬಳಲಬಾರದೆಂದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಮಕ್ಕಳಿಗೆ ನೀಡುವ ಊಟ ಎಷ್ಟು ಗುಣಮಟ್ಟದ್ದು ಎನ್ನುವುದು ಆಗಾಗ ನಡೆಯುತ್ತಿರುವ ಚರ್ಚೆ ಮತ್ತು ವಿಚಾರ . ಈಗ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕೇಲ ಗ್ರಾಮಗಳಲ್ಲಿ ಅಕ್ಷರ ದಾಸೋಹದಡಿ ನೀಡುವ ಊಟದಲ್ಲಿ ಹುಳುಗಳು ಪತ್ತೆಯಾಗಿದ್ದು ಮಕ್ಕಳು ಹಾಗೂ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಅಕ್ಷರ ದಾಸೋಹದ ಊಟದಲ್ಲಿ ಹುಳಗಳು ಪತ್ತೆಯಾಗುತ್ತಿರುವ ಪ್ರಕರಣ ಇದೇ ಮೊದಲೇನಲ್ಲ. ಈ ಹಿಂದೆಯೂ ಕೆಲವೊಂದು ಶಾಲೆಯಗಳ ಊಟದಲ್ಲಿ ಹುಳಗಳು ಪತ್ತೆಯಾಗಿವೆ. ಇದೀಗ ನವಲಗುಂದ ತಾಲೂಕಿನ ಶಾಲೆಗಳಲ್ಲಿಯೂ ಇಂತಹ ಪ್ರಕರಣ ಬೆಳಕಿಗೆ ಬಂದಿದೆ. ಧಾರವಾಡ ಜಿಲ್ಲೆಯನವಲಗುಂದ ತಾಲೂಕಿನ ಬೆಳವಟಗಿ, ಕಡದಳ್ಳಿ, ಗುಡಿಸಾಗರ, ನಾಗನೂರ ಮಾರ್ಗದ ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಊಟದಲ್ಲಿ ಹುಳಗಳು ಪತ್ತೆಯಾಗಿವೆ. ತಮ್ಮ ತಟ್ಟೆಯಲ್ಲಿ ಹುಳನ್ನು ನೋಡಿದ ವಿದ್ಯಾರ್ಥಿಗಳು ಊಟ ಮಾಡದೆ ಹಾಗೇ ಬಿಟ್ಟಿದ್ದಾರೆ.ಶಾಲೆಗಳಿಗೆ ಎನ್ಜಿಒದಿಂದ ನಿತ್ಯ ಊಟ ಬರುತ್ತದೆ ಎಂದು ಜನರು ಆರೋಪಿಸುತ್ತಿದ್ದಾರೆ. ಹುಳ ಪತ್ತೆಯಾದ ಊಟ ಶಾಲೆಗಳಲ್ಲಿ ಹಾಗೇ ಉಳಿದಿದೆ.ಇನ್ನು ಊಟದಲ್ಲಿ ಹುಳಗಳು ಪತ್ತೆಯಾದ ಬಗ್ಗೆ ಸ್ಪಷ್ಟನೆ ನೀಡಿದ ಎನ್ಜಿಓ ಹಾಗೂ ಅಧಿಕಾರಿಗಳು, ಅಲಸಂದೆ ಬೀಜದ ಮೊಳಕೆ ಮುರಿದು ಹುಳದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.ಅಧಿಕಾರಿಗಳು ಅಲಸಂದೆ ಮೊಳಕೆ ತುಂಡುಗಳು ಅಂತ ಹೇಳಿ ಆತ ಎಡವಟ್ಟಿನಿಂದ ತಪ್ಪಿಸಿಕೊಳ್ಳಲು ಸ್ಪಷ್ಟನೆ ನೀಡಿದ್ದಾರೆ. ಆದರೆ ಇದನ್ನು ಗ್ರಾಮಸ್ಥರು ನಂಬಬೇಕೇ? ಹುಳಗಳನ್ನು ಅಲಸಂಡೆ ಎಂದ ಅಧಿಕಾರಿಗಳ ಮಾತನ್ನು ಗ್ರಾಮಸ್ಥರು ಒಪ್ಪಿಕೊಳ್ಳಲು ತಯಾರಿಲ್ಲ. ಹೀಗಾಗಿ ಊಟವನ್ನು ಮರಳಿ ಕಳಿಸಿದ್ದಾರೆ
Check Also
ಅಯೋಧ್ಯೆ ನಗರದಲ್ಲಿ ಚಾಕು ಇರಿತ: ಏಳು ಜನರನ್ನು ಕಂಬಿ ಹಿಂದೆ ಅಟ್ಟಿದ ಖಾಕಿ
Spread the loveಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿ …