ಧಾರವಾಡ: ಹುಬ್ಬಳ್ಳಿ ಧಾರವಾಡ ಜಲಮಂಡಳಿ ಇಲಾಖೆಯಲ್ಲಿನ ಸಿಬ್ಬಂದಿಗಳಿಗೆ ಕಳೆದ ಏಂಟು ತಿಂಗಳುಗಳಿಂದ ವೇತನ ನೀಡಿಲ್ಲ.ಉದ್ಯೋಗ ಭದ್ರತೆ ನೀಡಲ್ಲಿ ಹೇಳದೇ ಕೇಳದೇ ಕೆಲಸದಿಂದ ವಜಾ ಮಾಡಿರುವುದನ್ನ ವಿರೋಧಿಸಿ ಜಲಮಂಡಳಿ ಸಿಬ್ಬಂದಿ ನಡೆಸುತ್ತಿರುವ ಧರಣಿಗೆಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ಬೆಂಬಲ ನೀಡಿ ಮಾತನಾಡಿದರು.
ಬರುವ 16ಕ್ಕೆ ವಿಧಾನಸಭೆಯಲ್ಲಿ ಈ ಮುಷ್ಕರ ಪ್ರಸ್ತಾಪ ಮಾಡುತ್ತೇನೆ
ಮುಷ್ಕರ ಬಗ್ಗೆ ಪ್ರಸ್ತಾಪ ಮಾಡಿ ಮಾತನಾಡುವೆ ಎಂದು ಭರವಸೆ ನೀಡಿದರು.
ಒಂದು ದಿನದ ಕಾರ್ಯಕಲಾಪದಲ್ಲಿ ನಾನು ಭಾಗವಹಿಸಲಿದ್ದೇನೆ ಆಗ ಸರ್ಕಾರದ ಮುಂದೆ ಗಮನಕ್ಕೆ ರುತ್ತೇನೆ ಇನ್ನು ಬೇಡಿಕೆ ಬಗ್ಗೆ ಸರ್ಕಾರ ಒಪ್ಪಿಸಲು ಪ್ರಯತ್ನಿಸುತ್ತೇನೆ ಎಂದ ಅವರು ಹದಿನೈದು ದಿನದಿಂದ ಮುಷ್ಕರ ನಡೆದಿದ್ದು
ಇದೇ ಭಾಗದವರೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇದ್ದಾರೆ.
ಆದರೂ ಅವರ ಗಮನಕ್ಕೆ ಬಂದಿರುವುದಿಲ್ಲವಾ ಎಂದು ಕಿಡಿ ಕಾರಿದರು. ಈ ನಿರ್ಲಕ್ಷ್ಯ ನಾನು ಖಂಡಿಸುತ್ತೇನೆ ಚುನಾವಣೆ ಬಳಿಕ ನನ್ನ ಪಾತ್ರ ಮಹತ್ವ ಇರುತ್ತದೆ
ಮುಂದೆ ಸರ್ಕಾರ ರಚಿಸುವಾಗ ನಾನೇ ಪ್ರಮುಖ ಪಾತ್ರ ವಹಿಸಲಿದ್ದೇನೆ ಎಂದು ಭರವಸೆ ವ್ಯಕ್ತಪಡಿಸಿದ ಅವರು
ನಾನು ಮುಷ್ಕರ ಬಗ್ಗೆ ಧ್ವನಿ ಎತ್ತಿದಾಗ ಅಧಿವೇಶನದಲ್ಲಿ ಗೌರವ ಸಿಗಬಹುದೆಂದು ಭಾವಿಸಿದ್ದೇನೆ ಕಾರಣ ಇಲ್ಲದೇ ಹೋದಲ್ಲಿ ಮೂರು ತಿಂಗಳ ಬಳಿಕ ನೋಡಿಕೊಳ್ಳುತ್ತೇನೆ ಎಂದರು.
Check Also
ನನಗಿಂತ ಭರತ್ ಗೆ ಹೆಚ್ಚು ಮತ ನೀಡಿ ಗೆಲ್ಲಸಿ- ಸಂಸದ ಬಸವರಾಜ ಬೊಮ್ಮಾಯಿ ಮನವಿ
Spread the loveಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ …