ಹುಬ್ಬಳ್ಳಿ; ಸ್ಯಾಂಡಲ್ ವುಡ್ ನಟ ಪ್ರೇಮ್ ನಿರ್ಮಾಪಕರ ಮನೆಗೆ ಬಂದಾಗ ನಾಗರ ಹಾವು ಪ್ರತ್ಯಕ್ಷವಾಗಿರುವ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ.
ಹೌದು. ನೆನಪಿರಲಿ ಪ್ರೇಮ್ ಹಾಗೂ ಕುಟುಂಬ ಹುಬ್ಬಳ್ಳಿಯ ನಿರ್ಮಾಪಕರ ಮನೆಗೆ ಬಂದಾಗ ನಾಗರಹಾವು ಪ್ರತ್ಯಕ್ಷವಾಗಿದ್ದು, ಹುಬ್ಬಳ್ಳಿಯ ತಾಜನಗರದಲ್ಲಿರುವ ನಿರ್ಮಾಪಕ ವೆಂಕರೆಡ್ಡಿ ಮನೆಗೆ ಬಂದಾಗ ನಾಗರಹಾವು ಪ್ರತ್ಯಕ್ಷವಾಗಿದೆ.
ಇನ್ನೂ ಮನೆಯ ಹಿಂಭಾಗದ ಲಕ್ಷ್ಮೀ ದೇವಸ್ಥಾನದ ಬಳಿ ಆರು ಅಡಿ ನಾಗರಹಾವು ಪ್ರತ್ಯಕ್ಷವಾಗಿದ್ದು, ನಾಗರಹಾವನ್ನು ಉರಗ ತಜ್ಞ ಸಂಗಮೇಶ್ ರಕ್ಷಣೆ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಿರ್ಮಾಪಕರ ಮನೆಗೆ ಬಂದಿದ್ದ ನೆನಪಿರಲಿ ಪ್ರೇಮ್ ಹಾಗೂ ಆತನ ಕುಟುಂಬ. ಆ ಸಂದರ್ಭದಲ್ಲಿ ಹಾವು ಪ್ರತ್ಯಕ್ಷವಾಗಿದೆ. ಪತಿ ಮತ್ತು ಮಕ್ಕಳ ಸಮೇತ ನಿರ್ಮಾಪಕನ ಮನೆಗೆ ಬಂದಾಗ ನಾಗರಹಾವು ಪ್ರತ್ಯಕ್ಷವಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
