ಹುಬ್ಬಳ್ಳಿ: ಸಾಕಷ್ಟು ವಿರೋಧಗಳು ನಡುವೆಯೂ ನಗರದಲ್ಲಿನ ಇಂದಿರಾ ಗಾಂಧಿ ಉದ್ಯಾನವನದ ಹತ್ತಿರದಲ್ಲಿನ ಸಹಕಾರಿ ರಂಗದ ಭೀಷ್ಮ ಎಂದೇ ಕರೆಸಿಕೊಳ್ಳುವ ಮಾಜಿ ಸಚಿವ ದಿವಂಗತ ಕೆ.ಎಚ್ ಪಾಟೀಲ ಅವರ ಪುತ್ಥಳಿಯನ್ನ
ಪ್ಲೈಓವರ್ ನಿರ್ಮಾಣಕ್ಕಾಗಿ ರಾತ್ರೋರಾತ್ರಿ ತೆರವು ಮಾಡಲಾಗಿದ್ದು ಕಾಂಗ್ರೆಸ್ ನಾಯಕರ ಕೆಂಗೆಣ್ಣಿಗೆ ಗುರಿಯಾಗಿದೆ.
ನಗರದಲ್ಲಿ ಸುಗಮ ಸಂಚಾರಕ್ಕಾಗಿ ಹಲವು ಕಡೆ ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದ್ದು,
ಇದರಲ್ಲಿ ಒಂದು ಫ್ಲೈಓವರ ಈಗಾಗಲೇ ಬಸವವನದಲ್ಲಿರುವ ಬಸವೇಶ್ವರರ ಪುತ್ಥಳ ಮೇಲೆ ಹಾದುಹೋಗಲಿದೆ ಎಂಬ ಕಾರಣಕ್ಕಾಗಿ ಅದನ್ನು ತೆರವು ಮಾಡಲಾಗಿದೆ. ಈಗ ದಿವಂಗತ ಕೆ.ಎಚ್ ಪಾಟೀಲ ಅವರ ಪುತ್ಥಳಿ ತೆರವು ಸಹ ಮಾಡಿದ್ದನ್ನ ಮಾಜಿ ಸಚಿವರಾದ ಎ.ಎಂ.ಹಿಂಡಸಗೇರಿ, ಕುಂದಗೋಳ ವಿಧಾನ ಸಭಾ ಶಾಸಕರಾದ ಕುಸುಮಾವತಿ ಶಿವಳ್ಳಿ, ಕಾಂಗ್ರೆಸ್ ಹಿರಿಯ ನಾಯಕರಾದ ಅರವಿಂದ ಕಟಗಿ, ಉಮೇಶ್ ಬಳಿಗಾರ, ಹುಬ್ಬಳ್ಳಿ ವಾಣಿಜ್ಯೋದ್ಯಮ ಮಂಡಳಿ ಮಾಜಿ ಅಧ್ಯಕ್ಷ ವಸಂತ ಲದ್ವಾ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದರು.
ಆದರೆ ಇದಕ್ಕೆ ದಿವಂಗತ ಕೆ.ಎಚ್ ಪಾಟೀಲ ಅವರ ಹಿಂಬಾಲಕರು ತ್ರೀವ ವಿರೋಧ ವ್ಯಕ್ತಪಡಿಸಿದ್ದು. ಹೀಗಾಗಿ ವಾಣಿಜ್ಯನಗರಿ ಹುಬ್ಬಳ್ಳಿಯ ಮಹತ್ವದ ಯೋಜನೆಯಲ್ಲಿ ಒಂದಾಗಿರುವ ಪ್ಲೈಓವರ್ ಈಗಾಗಲೇ ಜಿಲ್ಲಾಡಳಿತ, ಮಹಾನಗರ ಪಾಲಿಕೆ ವತಿಯಿಂದ ಸಾಕಷ್ಟು ಬಾರಿ ವಿವಿಧ ಸಮುದಾಯದ ಮುಖಂಡರ ಜೊತೆಗೆ ಸಭೆ ನಡೆಸಲಾಗಿತ್ತು ಎನ್ನಲಾಗಿದೆ. ಆದರೆ ಇದಕ್ಕೆ ಮಾತ್ರ ಮಾಜಿ ಸಚಿವ ಎ.ಎಂ ಹಿಂಡಸಗೇರಿ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರರಾದ ಗೋಪಾಲಕೃಷ್ಣ ಹಾಗೂ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರನ್ನು ವರ್ಗಾವಣೆ ಮಾಡಲು ಪಟ್ಟು ಹಿಡಿದ್ದಾರೆ ಈ ಹಿಂದೆ
ಸಭೆಗಳಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು, ಜೊತೆಗೆ ಒಮ್ಮತವು ಬಂದಿರಲಿಲ್ಲ ಹೀಗಾಗಿ ಪುತ್ಥಳಿ ತೆರವು ಕಾರ್ಯವನ್ನು ಇಷ್ಟು ದಿನ ನಿಲ್ಲಿಸಲಾಗಿತ್ತು.. ಆದರೆ ನಿನ್ನೆ ತಡರಾತ್ರಿ ಏಕಾಏಕಿ ತಾಂತ್ರಿಕ ಉಪಕರಣಗಳ ಮೂಲಕ ಕೆ. ಎಚ್ ಪಾಟೀಲ ಅವರ ಮೂರ್ತಿ
ತೆರವು ಮಾಡಲಾಗಿದೆ.. ಪ್ಲೈಓವರ್ ಕಾಮಗಾರಿ ಪೂರ್ಣಗೊಂಡ ನಂತರದ ಮತ್ತೇ ಇದೇ ಮೂರ್ತಿಯನ್ನು ಅದೇ ಸ್ಥಳದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಭರವಸೆಯನ್ನು
ಅಧಿಕಾರಿಗಳು ನೀಡಿದ್ದಾರೆ.. ಆದರೆ ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಹೋರಾಟಕ್ಕೆ ಸಿದ್ಧತೆ; ಇನ್ನು ಆಡಳಿತ ರೂಢ ಭಾರತೀಯ ಜನತಾ ಪಕ್ಷದ ನಾಯಕರ ಮಾತು ಕೇಳಿಕೊಂಡು ಅಧಿಕಾರಿಗಳು ತಮಗೆ ಬೇಕಾದ ರೀತಿಯಲ್ಲಿ ಆಡಳಿತ ನಡೆಸುತಿದ್ದು ಇದೊಂದು ಸರ್ವಾಧಿಕಾರಿ ಧೋರಣೆ ಆಗಿದ್ದು ಕೂಡಲೇ ಅದೇ ಸ್ಥಳದಲ್ಲಿ ದಿವಂಗತ ಕೆ. ಎಚ್ ಪಾಟೀಲ ಅವರ ಪುತ್ಥಳಿ ಸ್ಥಾಪನೆ ಮಾಡಬೇಕು ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟ ಹಾದಿ ಹಿಡಿಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಕ್ರಿಯೆಗೆ ಸಿಗದ ಅಧಿಕಾರಿಗಳು; ಇನ್ನು ಸಹಕಾರಿ ರಂಗದ ಭೀಷ್ಮ ಎಂದೇ ಕರೆಯುವ ದಿವಂಗತ ಕೆ.ಎಚ್ ಪಾಟೀಲ ಅವರ ಪುತ್ಥಳಿ ಸ್ಥಳಾಂತರ ಹಾಗೂ ಕೆ.ಎಚ್ ಪಾಟೀಲ ಅವರ ಹಿಂಬಾಲಕರ ವಿರೋಧ ಕುರಿತು ಪ್ರತಿಕ್ರಿಯೆ ಪಡೆಯಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಸಂಬಂಧಿಸಿದ ಯಾವುದೇ ಅಧಿಕಾರಿಗಳು ಲಭ್ಯವಾಗಲಿಲ್ಲ
Check Also
ನನಗಿಂತ ಭರತ್ ಗೆ ಹೆಚ್ಚು ಮತ ನೀಡಿ ಗೆಲ್ಲಸಿ- ಸಂಸದ ಬಸವರಾಜ ಬೊಮ್ಮಾಯಿ ಮನವಿ
Spread the loveಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ …