ಬೆಳಗಾವಿ:
ಇದೇನಿದ್ದರೂ ಡಿಕೆಶಿ ಮತ್ತು ರಮೇಶ ಜಾರಕಿಹೊಳಿ ನಡುವಿನ ವೈಯಕ್ತಿಕ ಯುದ್ಧ, ಮಿಸ್ಟರ್ ಶಿವಕುಮಾರ ನೀನು ರಾಜಕಾರಣಿ ಎನ್ನಲು ನಾಲಾಯಕ ಎಂದು ಶಾಸಕ ರಮೇಶ ಜಾರಕಿಹೊಳಿ ಹರಿಹಾಯ್ದಿದ್ದಾರೆ.
ಇಂದು ಬೆಳಗಾವಿ ಖಾಸಗಿ ಹೊಟೇಲನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು
ಆತ ನನಗೆ ವೈಯಕ್ತಿಕ ಟಾರ್ಗೇಟ್ ಮಾಡಬಾರದಿತ್ತು. ರಾಜಕಾರಣದಲ್ಲಿ ಆತ ಇಂತಹ ಷಡ್ಯಂತ್ರ ಮಾಡಬಾರದಿತ್ತು. ನೂರಾರು ದಾಖಲೆಗಳು ನಮ್ಮ ಬಳಿ ಆತನ ವಿರುದ್ಧ ಇವೆ. ನಾನು ಸೂಕ್ತ ಪ್ರಾಧಿಕಾರದ ಮುಂದೆ ಡಿಕೆಶಿ ವಿರುದ್ಧ ದಾಖಲಾತಿಗಳನ್ನು ಬಿಡುಗಡೆ ಮಾಡಿಯೇ ಮಾಡುತ್ತೇನೆ ಎಙದು ರಮೇಶ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಯುವತಿಯೊಬ್ಬಳನ್ನು ಮುಂದಿಟ್ಟುಕೊಂಡು ಡಿ. ಕೆ. ಶಿವಕುಮಾರ ಅವರು ನನ್ನ ತೇಜೋವಧೆ ಮಾಡಿದ್ದಾರೆ. ನಾನು ಮಾಡದ ಕೃತ್ಯವನ್ನು ಕಾನೂನಿನ ಕಾರಣಕ್ಕಾಗಿ ನಾನು ಒಪ್ಪಿಕೊಂಡಿದ್ದೆನಷ್ಟೇ.
1985ರಲ್ಲಿ ಹರಿದ ಚಪ್ಪಲಿ ಹಾಕೊಂಡು ತಿರುಗಾಡುತ್ತಿದ್ದ ಈ ಡಿಕೆಶಿ ಈಗ ಆಗರ್ಭ ಶ್ರೀಮಂತನಾಗಿದ್ದಾನೆ. ಶಿವಕುಮಾರ ಲೂಟಿ ಮಾಡಿ, ಹಗರಣ ಮಾಡಿ ಗಾಜಿನ ಮನೆಯಲ್ಲಿ ತಾನೇ ಈಗ ಜೀವನ ಸಾಗಿಸುತ್ತಿದ್ದಾನೆ.
ನನ್ನ ತೇಜೋವಧೆಗೆ ಕಾರಣವಾಗಿದ್ದ ಹುಡುಗಿ ಮತ್ತು ಇಬ್ಬರು ಯುವಕರಾದ
ಶ್ರವಣ ಮತ್ತು ಹರೀಶ ಸೇರಿದಂತೆ ಆರು ಜನರನ್ನು ಪೊಲೀಸರು ತತಕ್ಷಣ ಬಂಧಿಸಬೇಕು ಎಂದು ರಮೇಶ ಆಗ್ರಹಿಸಿದರು.
ಡಿಕೆಶಿ ಮತ್ತು ನಾನು ಒಳ್ಳೆಯ ಗೆಳೆಯರಾಗಿದ್ದೇವು. ಸ್ವತಃ ಡಿ. ಕೆ. ಶಿವಕುಮಾರ ಮತ್ತು ಅವರ ಪತ್ನಿ ಉಷಾ ಅವರೇ ನನಗೆ ಕಾಂಗ್ರೆಸ್ ಪಕ್ಷ ಬಿಡದಂತೆ ಆಗ್ರಹಿಸಿದ್ದರು ಎಂದು ಸಂದರ್ಭವೊಂದನ್ನು ಉಲ್ಲೇಖಿಸಿ ನೆನೆಪಿಸಿಕೊಂಡರು.
ಡಿ. ಕೆ. ಶಿವಕುಮಾರ ಷಡ್ಯಂತ್ರದಿಂದ ನನ್ನ ವೈಯಕ್ತಿಕ ಬದುಕು ಹಾಗೂ ಎರಡು ವರ್ಷ ನೆಮ್ಮದಿ ಹಾಳಾಗಿದೆ.
ಗ್ರಾಮೀಣ ಶಾಸಕಿಯಿಂದ ರಾಜಕಾರಣ ಹಾಳಾಗಿದೆ, ಆಕೆಯಿಂದ ನನ್ನ ಎಲ್ಲ ರಾಜಕೀಯ ಸಂಬಂಧಗಳು ಹಾಳಾಗಿವೆ.
ಸಿಡಿ ಷಡ್ಯಂತ್ರ ನಡೆಸುವ ಒಂದು ತಂಡವೇ ಆ್ಯಕ್ಟಿವ್ ಆಗಿದ್ದು, ಈ ಹಾವಳಿಗೆ ಇಂದು ರಾಜಕಾರಣಿಗಳು ಮತ್ತು IAS ಅಧಿಕಾರಿಗಳಿಗೂ ಕಂಟಕ ಎದುರಾಗಲಿದೆ ಎಂದು ರಮೇಶ ಆತಂಕಿತರಾದರು.
Check Also
ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು
Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ನಂಬರ್ …