Breaking News

ಕೊಡ್ಲಿವಾಡ ಗ್ರಾಮದ ಪ್ರಾಥಮಿಕ ಶಾಲೆ ದತ್ತು ಪಡೆದ ವೀರಪಾಕ್ಷಪ್ಪ ಅಂಗಡಿ

Spread the love

ಹುಬ್ಬಳ್ಳಿ;ಕೊಡ್ಲಿವಾಡ ಗ್ರಾಮದ ಪ್ರಾಥಮಿಕ ಶಾಲೆಯನ್ನು ಗ್ರಾಮದವರೇ ಆದ ಬೆಂಗಳೂರಿನ ನಿವಾಸಿ ವೀರಪಾಕ್ಷಪ್ಪ ಅಂಗಡಿ ಶ್ರೀಮತಿ ನಿರ್ಮಲಾ ದಂಪತಿ ದತ್ತು ತೆಗೆದುಕೊಂಡರು.
ಸರಕಾರದ ಪ್ರತಿನಿಧಿಯಾಗಿ ಜಿಲ್ಲಾ ಉಪ ನಿರ್ದೇಶಕ ಎಸ್ ಎಸ್ ಕೆಳದಿಮಠ ಅವರ ಜೊತೆಗೆ ಕರ್ನಾಟಕ ಸರ್ಕಾರದ ಯೋಜನೆ ನನ್ನ ಶಾಲೆ ನನ್ನ ಕೊಡುಗೆ ಅಡಿಯಲ್ಲಿ ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಿ ಪತ್ರವನ್ನು ವಿನಿಮಿಯ ಮಾಡಿಕೊಂಡರು .
ಈ ಸಂದರ್ಭದಲ್ಲಿ ಜಿಲ್ಲಾ ಉಪ ನಿರ್ದೇಶಕ ಕೆಳದಿಮಠ ಮಾತನಾಡಿ, ಶಾಲೆಯನ್ನು ಅಭಿವೃದ್ಧಿ ಮಾಡಲು ಅಂಗಡಿ ಯವರು ಮುಂದೆ ಬಂದಿದ್ದು ಅವರಿಗೆ ಇಲಾಖೆಯ ಪರವಾಗಿ ಸಂಪೂರ್ಣ ಸಹಾಯ ಸಹಕಾರವನ್ನು ನೀಡುತ್ತೇವೆ ಅದರ ಜೊತೆಗೆ ಸಾರ್ವಜನಿಕರ ಸಹಾಯ ಮುಖ್ಯ ಎಂದು ಶಿಕ್ಷಕರಿಗೆ ಒಳ್ಳೆಯ ಶಿಕ್ಷಣವನ್ನು ನೀಡಲು ಸಲಹೆಯನ್ನು ನೀಡಿದರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ವಿದ್ಯಾ ಕುಂದುರಿಗಿ ಭಾಗವಹಿಸಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವುದಾಗಿ ಹೇಳಿದರು ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಶ್ರೀ ಎಬಿ ಉಪ್ಪಿನ್ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಸಭೆಯ ಅಧ್ಯಕ್ಷತೆಯನ್ನು ಶತಾಯುಷಿ ಚನ್ನವೀರಪ್ಪ ಅಂಗಡಿ ವಹಿಸಿ ಮಾತನಾಡಿದರು.
ವಿರೂಪಾಕ್ಷಪ್ಪ ಅಂಗಡಿ ಮಾತನಾಡಿ 5 ವರ್ಷದಲ್ಲಿ ಶಾಲೆಯ ಸರ್ವಾಂಗಿನ ಅಭಿವೃದ್ಧಿ ಜೊತೆಗೆ ಮಕ್ಕಳ ಶಿಕ್ಷಣವನ್ನು ಅಭಿವೃದ್ಧಿಪಡಿಸಲು ನಾನು ಹಾಗೂ ನನ್ನ ಕುಟುಂಬದವರು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇವೆ ಎಂದು ಅದಕ್ಕೆ ಇಲಾಖೆ ಹಾಗೂ ಗ್ರಾಮದ ಸಮಸ್ತ ಜನತೆಯ ಸಹಕಾರ ಮುಖ್ಯ ಎಂದು ಹೇಳಿದರು
ಡಾ. ಸಿ.ಸಿ ಅಂಗಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜ್ಜಪ್ಪ ಮಾಡಳ್ಳಿ ಉಪಾಧ್ಯಕ್ಷ ಶ್ರೀಮತಿ ರೇಣುಕಾ ಕನಕಣ್ಣವರ್ ಮುಖ್ಯ ಶಿಕ್ಷಕ ಕಬನೂರ ಮುಂತಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಶ್ರೀ ವಿರೂಪಾಕ್ಷಪ್ಪ ಅಂಗಡಿಯವರು ತಮಗೆ ಶಿಕ್ಷಣ ಕೊಟ್ಟ ಮೂರು ಜನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗುರು ವಂದನೆಯನ್ನು ಮಾಡಿ ಗುರುಕಾಣಿಕೆಯನ್ನು ನೀಡುವುದರ ಜೊತೆಗೆ ಸನ್ಮಾನ ಮಾಡಿದರು .ತಂದೆ ಚನ್ನವೀರಪ್ಪ ಅಂಗಡಿಯವರು ಶತಾಯುಷಿಗಳಾಗಿ ತಮ್ಮ ಕುಟುಂಬವನ್ನು ಮುನ್ನಡೆಸುತ್ತಿರುವುದಕ್ಕಾಗಿ ಸಮಸ್ತ ಕುಟುಂಬದ ಪರವಾಗಿ ಫಲ ಪುಷ್ಪಗಳನ್ನು ನೀಡುವುದರ ಜೊತೆಗೆ ಸನ್ಮಾನ ಮಾಡಿದರು ಕಾರ್ಯಕ್ರಮದಲ್ಲಿ ಅಂಗಡಿ ಕುಟುಂಬದ ಎಲ್ಲ ಸದಸ್ಯರು ಕೊಡ್ಲಿವಾಡ ಬರದ್ವಾಡ ಗ್ರಾಮದ ಜನತೆ ಮುದ್ದು ಮಕ್ಕಳು ಹಾಜರಿದ್ದರು . ವೀರಣ್ಣ ರೊಟ್ಟಿಗವಾಡ ಕಾರ್ಯಕ್ರಮ ನಿರ್ವಹಿಸಿದರು ಪ್ರಾರಂಭದಲ್ಲಿ ಶ್ರೀ ಬಾಬಣ್ಣ ಕೊಟ್ಟೂರು ಶೆಟ್ಟರ್ ಸ್ವಾಗತಿಸಿದರು ಕೊನೆಯಲ್ಲಿ ಶ್ರೀ ವಿಜಯಕುಮಾರ್ ಉಳುವಪ್ಪನವರ್ ವಂದನಾರ್ಪಣೆ ಮಾಡಿದರು.


Spread the love

About Karnataka Junction

[ajax_load_more]

Check Also

ಧಾರವಾಡ: ನಿಟ್ಟುಸಿರು ಬಿಟ್ಟ ಸಿಎಂ ಸಿದ್ದು, ಸ್ನೇಹಮಯಿ ಅರ್ಜಿಯನ್ನೇ ವಜಾಗೊಳಿಸಿದ ಹೈಕೋರ್ಟ್*

Spread the loveಧಾರವಾಡ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಈ ಭ್ರಷ್ಟಾಚಾರದಲ್ಲಿ ಸಿಎಂ ಸೇರಿ ಅವರ …

Leave a Reply

error: Content is protected !!