Breaking News

ಕಮೀಷನ್ ಕುರಿತು ಬಿಜೆಪಿಯಲ್ಲಿಯೇ ಆರೋಪ ಪ್ರತ್ಯಾರೋಪ ನಡೆದಿದೆ- ಕುಮಾರಸ್ವಾಮಿ

Spread the love

ಹುಬ್ಬಳ್ಳಿ: ಚಿತ್ರದುರ್ಗ ಶಾಸಕ ತಿಪ್ಪಾರಡ್ಡಿ ಅವರು ರಾಜ್ಯ ಸರ್ಕಾರದಲ್ಲಿ ಪ್ರತಿಯೊಂದು ಕಾಮಗಾರಿಯಲ್ಲಿ ಶೇಕಡಾ 40 ರಷ್ಟು ಕಮೀಷನ್ ನೀಡುವ ವಿಚಾರವಾಗಿ
ಅಡಿಯೋ ಪ್ರಕರಣಕ್ಕೆ ಪ್ರತಿಕ್ರಿಯೆ ಮಾಜಿ ಮುಖ್ಯಮಂತ್ರಿ ಹಾಗೂ ಜಾತ್ಯಾತೀತ ಜನತಾದಳ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಹುಬ್ಬಳ್ಳಿಯಲ್ಲಿ ಪ್ರಕ್ರಿಯೆ ನೀಡಿದ್ದು ಭಾರತೀಯ ಜನತಾ ಪಕ್ಷದವರ ಸಂಸ್ಕೃತಿ ಏನು ಅಂತಾ ರಾಜ್ಯಕ್ಕೆ ಗೊತ್ತಾಗಿದೆ. ಇದರಲ್ಲಿ ಏನು ಹೊಸದು ಹಾಗೂ ವಿಶೇಷ ಇಲ್ಲ ಅದು
40 ಫರ್ಸೆಂಟ್ ಸರ್ಕಾರವೋ 50 ಫರ್ಸೆಂಟ್ ಸರ್ಕಾರವೋ ಅವರ ಅವರಲ್ಲಿಯೇ ಆರೋಪ ಪ್ರತ್ಯಾರೋಪ ಮಾಡಲಾಗುತಿದೆ ಇದು ಬಹಳ ದಿನಗಳಿಂದ ನಡೆತಾ ಇದೆ ಕಾರಣ ನಾವು ಆಗಲಿ ಬೇರೆ ಯಾರೇ ಆಗಲಿಚರ್ಚೆ ಮಾಡಿ ಏನು ಪ್ರಯೋಜನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು ಭಾರತೀಯ ಜನತಾ ಪಕ್ಷದ ನಾಯಕರು ಶಾಸಕರಲ್ಲಿಯೇ ಪರಸ್ಪರ ಕೆಸರ ಎರಚಾಟ ಆರಂಭವಾಗಿದೆ. ಇಂತಹ ಬೆಳವಣಿಗೆಯಿಂದ ಜನರು ಬೇಸತ್ತು ಹೋಗಿದ್ದಾರೆ ಇನ್ನೇನು ಕೇಲವೇ ದಿನಗಳಲ್ಲಿ ಜನರು ಭಾರತೀಯ ಜನತಾ ಪಕ್ಷವನ್ನು ಹೊರಗೆ ಕಳಸುತ್ತಾರೆ ಎಂದರು.
*ಸ್ಯಾಂಟ್ರೋ ರವಿ ಪ್ರಕರಣ ಸಿಐಡಿ ತನಿಖೆ ಏನೆಲ್ಲಾ ಹೊರಗೆ ಬರುತ್ತೆ ನೋಡೋಣ*

ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ವರ್ಗಾವಣೆ ಮಾಡಿದ್ದಾರೆ ಒಂದು ಹಂತದಲ್ಲಿ ಈಗ ಅದು ಮುಗಿದೆ ಅಧ್ಯಾಯ ಆದರೆ ಸ್ಯಾಂಟ್ರೋ ರವಿ ಪ್ರಕರಣ ಸಿಐಡಿ ತನಿಖೆ ಹಿನ್ನೆಲೆಯಲ್ಲಿ ಏನೆಲ್ಲಾ ತನಿಖೆಯಿಂದ ಸತ್ಯಾಂಶ ಹೊರಬರಲಿದೆ ಮತ್ತು ಯಾವ ರೀತಿ ತನಿಖೆ ಮಾಡತಾರೆ, ಏನೆಲ್ಲಾ ತನಿಖೆ ಮಾಡತಾರೆ ನೋಡೋಣ ಎಂದರು.
*ಇಂದಿನಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಿಂದ ಪಂಚರತ್ನ ಯಾತ್ರೆ ಆರಂಭ*
ಜಾತ್ಯಾತೀತ ಜನತಾದಳ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತಿದ್ದು ಈಗಾಗಲೇ ಹಳೇ ಮೈಸೂರು ಭಾಗದಲ್ಲಿ ನಡೆಸಲಾಯಿತು. ಈಗ ಹಮ್ಮಿಕೊಂಡಿರುವ ಪಂಚರತದನ ಯಾತ್ರೆಯನ್ನು ವಿಜಯಪುರ ಜಿಲ್ಲೆಯ ಇಂಡಿಯಿಂದ ಆರಂಭ ಮಾಡಲಾಗುತಿದ್ದು
ಫೆ 2 ರವರೆಗೆ ವಿಜಯಪುರ, ರಾಯಚೂರು ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ ಮುಂದಿನ 15 ದಿನಗಳ ಪಂಚರತ್ನ ಯಾತ್ರೆ ಹಮ್ಮಿಕೊಳ್ಳಾಗಿದ್ದುನಂತರ ನಾಲ್ಕನೇ ಹಂತರ ಪಂಚರತ್ನ ಯಾತ್ರೆ ಕಿತ್ತೂರು ಕರ್ನಾಟಕದಲ್ಲಿ ನಡೆಯುತ್ತೆ ಎಂದರು.


Spread the love

About Karnataka Junction

    Check Also

    ಸಿಐಡಿ ಡಿಜಿಪಿ ಡಾ.ಎ.ಎಂ.ಸಲೀಂ ಅಂಜಲಿ ,ನೇಹಾ ಕೊಲೆ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹ

    Spread the loveಹುಬ್ಬಳ್ಳಿ: ಪ್ರಿಯಕರನಿಂದಲೇ ಕೋಲೆಗೀಡಾಗಿದ್ದ ನೇಹಾ ನಿರಂಜನ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ಒಂದು …

    Leave a Reply

    error: Content is protected !!