Breaking News

ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಹಾಡು ಹಾಡಿದ ಕೇಂದ್ರ ಸಚಿವ ಜೋಶಿ

Spread the love

ಧಾರವಾಡ: ನಗರದ ಕೆಸಿಡಿ ಕಾಲೇಜು ಮೈದಾನದಲ್ಲಿ ನಡೆದಿರುವ ಯುವಜನೋತ್ಸವದಲ್ಲಿ ಡಾ.ರಾಜಕುಮಾರ ‌ಹಾಡು ಹಾಡಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಯುವಕರನ್ನ ರಂಜಿಸಿದರು. ಧಾರವಾಡದ ಕೆಸಿಡಿ ಕಾಲೇಜು ಮೈದಾನದಲ್ಲಿ ನಡೆಯುತ್ತಿರೋ ರಾಷ್ಟ್ರೀಯ ಯುವಜನೋತ್ಸವದ ವೇಳೆ ಆಲ್ ಒಕೆ ತಂಡಕ್ಕೆ ಜೋಶಿ ನೆನಪಿನ ಕಾಣಿಕೆ‌ ಕೊಡಲು ವೇದಿಕೆ ಮೇಲೆ ಆಗಮಿಸಿದ್ದರು. ಈ ವೇಳೆ ಆಲ್ ಒಕೆ ತಂಡದ ಸದಸ್ಯರು ಅವರನ್ನ ಹಾಡು ಹಾಡಲು ಒತ್ತಾಯ ಮಾಡಿದಾಗ ಡಾ.ರಾಜಕುಮಾರ ಹಾಡಿರೋ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡು ಹಾಡಿದರು. ನಾನು ವೇದಿಕೆ ಮೇಲೆ ಮೊಮೆಂಟೊ ಕೊಡಲು ಬಂದಿದ್ದೆ, ಆದರೆ ನನಗೆ ಹಾಡು ಹಾಡಲು ಹೇಳಿ ಪನಿಷಮೆಂಟ್ ಕೊಡುತಿದ್ದಾರೆ ಎಂದ ಜೋಶಿ, ಆಲ್ ಓಕೆ ತಂಡದ ಗಾಯಕರ ಜೊತೆ ಹಾಡಿ ಯುವರನ್ನ ರಂಜಿಸಿದರು.‌…


Spread the love

About Karnataka Junction

    Check Also

    ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಪದಾಧಿಕಾರಿಗಳ ಪದಗ್ರಹಣ

    Spread the loveಹುಬ್ಬಳ್ಳಿ: 2023-24 ನೇ ಸಾಲಿನ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ …

    Leave a Reply