Breaking News

ನಾಡಿನ ಕೆಲ ಸಾಹಿತ್ಯ, ರಾಜಕೀಯ, ಧಾರ್ಮಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಬಂಟ ಸಮಾಜದ ಕೊಡುಗೆ ದೊಡ್ಡದು- ಶೆಟ್ಟರ್

Spread the love

ಹುಬ್ಬಳ್ಳಿ: ಈ ನಾಡಿನ ಕೆಲ ಸಾಹಿತ್ಯ, ರಾಜಕೀಯ, ಧಾರ್ಮಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಬಂಟ ಸಮಾಜ ಸಮುದಾಯದ ಕೊಡುಗೆ ದೊಡ್ಡದು. ಅವರ ಸಂಸ್ಕೃತಿ, ಕಲೆ ಹಾಗೂ ಪರಂಪರೆ ವಿಶೇಷವಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಸಮುದಾಯದವರು ಛಾಪು ಮೂಡಿಸಿದ್ದಾರೆ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ನಗರದ ಆರ್‌.ಎನ್. ಶೆಟ್ಟಿ ಕಲ್ಯಾಣ ಮಂಟಪದ ಆವರಣದಲ್ಲಿರುವ ಪ್ರಸನ್ನ ಮಹಾಗಣಪತಿ ದೇವರ ಬ್ರಹ್ಮ ಕಲಶೋತ್ಸವದ ಅಂಗವಾಗಿ, ಹುಬ್ಬಳ್ಳಿ–ಧಾರವಾಡ ಬಂಟರ ಸಂಘ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ‘ವ್ಯಾಪಾರ ಮತ್ತು ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಕರಾವಳಿಯವರು ಹೆಸರುವಾಸಿಯಾಗಿದ್ದಾರೆ. ಸಮುದಾಯದ ಒಗ್ಗಟ್ಟು ಬಲಿಷ್ಠವಾಗಿದ್ದು, ಇತರರಿಗೆ ಮಾದರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಶೀರ್ವಚನ ನೀಡಿದ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ‘ಧರ್ಮವೆಂದರೆ ದೈವತ್ವದೊಡನೆ ಭಾವನೆ ಬೆಸೆಯುವುದು. ಜಗತ್ತಿನ ಪ್ರತಿ ಮನುಷ್ಯನಲ್ಲೂ ಧರ್ಮ ಸಂಯೋಜನೆಗೊಂಡಿದೆ. ಧಾರ್ಮಿಕ ಭಾವನೆ ಕೂಡ ಒಗ್ಗಟ್ಟಿನ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ. ಬಂಟ ಸಮುದಾಯ ಇದಕ್ಕೆ ನಿದರ್ಶನವಾಗಿದೆ’ ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ‘ದಸರಾ ಹಬ್ಬ ನೆನಪಿಸುವಂತಹ ಈ ಧಾರ್ಮಿಕ ಸಭೆಯ, ಬಂಟ ಸಮುದಾಯದ ಸಾಂಸ್ಕೃತಿಕ ವೈಭವವನ್ನು ತೋರಿಸುತ್ತದೆ. ವಿವಿಧತೆಯಲ್ಲಿ ಏಕತೆಯ ಮಂತ್ರ ಹೊಂದಿರುವ ಭಾರತವು, ಎಲ್ಲಾ ಜಾತಿ–ಧರ್ಮಗಳನ್ನು ಒಗ್ಗೂಡಿಸಿಕೊಂಡಿರುವ ಸೌಹಾರ್ದ ದೇಶವಾಗಿದೆ’ ಎಂದು ಹೇಳಿದರು.
ವಾಗ್ಮಿ ಆದರ್ಶ ಗೋಖಲೆ ಮಾತನಾಡಿದರು. ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಶಾಸಕ ಜಗದೀಶ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ, ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಉಪಾಧ್ಯಕ್ಷ ಶಾಂತಾರಾಮ ಶೆಟ್ಟಿ, ಪಾಲಿಕೆಯ ಮಾಜಿ ಸದಸ್ಯ ಮೋಹನ ಹಿರೇಮನಿ, ಆನಂದ ಗುರುಸ್ವಾಮಿ, ಪ್ರದೀಪ ಪಕ್ಕಳ, ದಿನೇಶ ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.
ಗಮನ ಸೆಳೆದ ಶೋಭಾಯಾತ್ರೆ
ನಗರದ ಸ್ಟೇಷನ್ ರಸ್ತೆಯ ಈಶ್ವರ ದೇವಸ್ಥಾನದಿಂದ ಆರ್‌.ಎನ್. ಶೆಟ್ಟಿ ಕಲ್ಯಾಣ ಮಂಟಪದವರೆಗೆ ನಡೆದ ಶೋಭಾಯಾತ್ರೆಗೆ ಮೇಯರ್ ಈರೇಶ ಅಂಚಟಗೇರಿ ಯಾತ್ರೆಗೆ ಚಾಲನೆ ನೀಡಿದರು.
ಆಂಜನೇಯ ವೇಷಧಾರಿಗಳು, ಬಾಯಲ್ಲಿ ಬೆಂಕಿಯುಗುಳುತ್ತಾ ಸಾಗಿದ ಹುಲಿ ವೇಷಧಾರಿಗಳು ಗಮನ ಸೆಳೆದರು. ಚಂಡೆ, ಮದ್ದಳೆ, ಕರಾವಳಿಯ ವಿಶೇಷ ವಾದ್ಯಗಳು, ವಸ್ತ್ರವೈಭವವನ್ನು ಸಾರುವ ರೂಪಕಗಳು ಹಾಗೂ ಕಲಾ ತಂಡಗಳು ನೋಡುಗರನ್ನು ಆಕರ್ಷಿಸಿದವು. ನೂತನ ಪ್ರಸನ್ನ ಮಹಾಗಣಪತಿ ದೇವಸ್ಥಾನದ ಸ್ತಬ್ಧಚಿತ್ರವು ಮೆರಗು ತಂದಿತು. ಬಂಟ ಸಮುದಾಯದವರು ಸಾಂಪ್ರದಾಯಿಕ ಉಡುಗೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡರು


Spread the love

About Karnataka Junction

[ajax_load_more]

Check Also

ವೀರಶೈವ ಲಿಂಗಾಯತ ಧಾರವಾಡ ಮಹಾಸಭಾ ಜಿಲ್ಲಾ ಘಟದ ಅಧ್ಯಕ್ಷರಿಗೆ ಸನ್ಮಾನ

Spread the loveಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಧಾರವಾಡ ಮಹಾಸಭಾ ಜಿಲ್ಲಾ ಘಟಕ ಲಿಂಗಾಯತ ಭವನದಲ್ಲಿ ಅಖಿಲ ಭಾರತ …

Leave a Reply

error: Content is protected !!