ಅಮರಗೋಳ,ಬೆಳವಟಗಿ, ಗುಡಿಸಾಗರ, ಗ್ರಾಮಗಳಲ್ಲಿ ಜೆಡಿಎಸ್ ಪಕ್ಷದ ಸಂಘಟನಾ ಸಭೆ

Spread the love

ನವಲಗುಂದ : ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಮರಗೋಳ,ಬೆಳವಟಗಿ, ಗುಡಿಸಾಗರ, ಗ್ರಾಮಗಳಲ್ಲಿ ಜೆಡಿಎಸ್ ಪಕ್ಷದ ಸಂಘಟನಾ ಸಭೆ ನಡೆಸಲಾಯಿತು. ಸಭೆಯಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಜೆಡಿಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಪ್ರಕಾಶ ಅಂಗಡಿ ವಕೀಲರು ಮಾತನಾಡಿದರು. ಈ ಭಾಗದ ಶಾಸಕರು ಸಚಿವರಾದರು ಏನು ಕೆಲಸ ಮಾಡಲಿಕ್ಕೆ ಆಗಲಿಲ್ಲಾ,ಕೇವಲ ಭರವಸೆ ಕೊಡುತ್ತಾ ಹೋಗುತ್ತಾರೆ ವಿನಃ ಕೆಲಸ ಮಾಡಿರುವುದಿಲ್ಲಾ, ಆದ್ದರಿಂದ ಈ ಬಾರಿ ನನಗೆ ಅವಕಾಶ ಮಾಡಿಕೊಡಿ ನಿಮ್ಮ ಸೇವಕನಾಗಿ ನಾನು ಕೆಲಸ ಮಾಡುತ್ತೇನೆ. ರಾಜ್ಯದ ಹಿತ ಕಾಪಾಡಲು ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷದ ಸರ್ಕಾರ ಅವಶ್ಯಕತೆ ಇದೆ.ರೈತರ ,ಕೂಲಿ ಕಾರ್ಮಿಕರ ,ರಾಜ್ಯದ ಹಿತ ಜೆಡಿಎಸ್ ಪಕ್ಷ ಬೇಕಾಗಿದೆ. ನಾನು ಕೂಡಾ ಅಣ್ಣಿಗೇರಿ ಎ ಪಿ ಎಮ್ ಸಿ ಅಧ್ಯಕ್ಷನಾಗಿ ಅನೇಕ ಕೆಲಸಗಳನ್ನು ಮಾಡಿದೆ ,ರಾಜ್ಯ ಬೋರ್ಡ್ ಸದಸ್ಯನಾಗಿ ಕೋಟ್ಯಾಂತರ ರೂಪಾಯಿಗಳನ್ನು ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಈ ಬಾರಿ ನಾನು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದು ನನಗೆ ಅವಕಾಶ ಮಾಡಿಕೊಡಿ ನವಲಗುಂದ ಕ್ಷೇತ್ರದಲ್ಲಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಜನರಲ್ಲಿ ಮನವಿ ಮಾಡಿಕೊಂಡರು
ಬಸವರಾಜ ಹಾದಿಮನಿ, ಬಸವರಾಜ ಯಂಕಂಚಿ, ರುದ್ರಯ್ಯ ಮಠಪತಿ,ಮಹಾಂತೇಶ ತಳವಾರ,ವೀರುಪಾಕ್ಷಯ್ಯ ಹಿರೇಮಠ, ಷಣ್ಮುಖ ಸುರೇಬಾನ,ಶಿವಪುತ್ರಪ್ಪ ಪೂಜಾರ,ಶಿವಾನಂದ ಬರದ್ವಾಡ,ಮಲ್ಲಪ್ಪ ಬಿಡ್ನಾಳ ಹಾಗೂ ನೂರಾರು ಪಕ್ಷದ ಕಾರ್ಯಕರ್ತರು ಮುಂತಾದವರು ಭಾಗವಹಿಸಿದ್ದರು.


Spread the love

About Karnataka Junction

    Check Also

    ಭಾರೀ ಮಳೆಗೆ ಹಲವಾರು ಅವಾಂತರ, 24 ಬೈಕ್ ನೀರಿನಲ್ಲಿ

    Spread the loveಭಾರೀ ಮಳೆಗೆ ಹಲವಾರು ಅವಾಂತರ, 24 ಬೈಕ್ ನೀರಿನಲ್ಲಿ ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ …

    Leave a Reply

    error: Content is protected !!