https://youtu.be/Wv6VVYIf484
ಹುಬ್ಬಳ್ಳಿ; ಕಾರ್ಮಿಕರಿಗೆ ಲಾಕ್‌ಡೌನ್ ಪರಿಹಾರ ತ್ವರಿತವಾಗಿ ನೀಡಬೇಕು ರೈತ ವಿರೋಧಿ ಧೋರಣೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಡಲೇ ಕೈಬೀಡಬೇಕು ಎಂದು ಆಗ್ರಹಿಸಿ
ಸಿಪಿಐ, ಸಿಪಿಐ(ಎಂ) ಹಾಗೂ ಎಸ್ ಯುಸಿಐಸಿ ಪಕ್ಷದ ವತಿಯಿಂದ ಇಂದು ನಗರದ ಮಿನಿವಿಧಾನ ಬಳಿ ಪ್ರತಿಭಟನೆ ಮಾಡಲಾಯಿತು.
ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ ಮುಖಂಡರಾದ ಮಹೇಶ ಪತ್ತಾರ ಮಾತನಾಡಿ,
ಸರ್ಕಾರ ಕಾರ್ಮಿಕರಿಗೆ ₹3 ಸಾವಿರ ಪರಿಹಾರ ಘೋಷಿಸಿದೆ. ಬೆಲೆ ಏರಿಕೆ ನಡುವೆ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಕನಿಷ್ಠ ₹10 ಸಾವಿರ ಪರಿಹಾರವನ್ನು ಮುಂದಿನ ಮೂರು ತಿಂಗಳವರೆಗೂ ನೀಡಬೇಕು ಎಂದು ಆಗ್ರಹಿಸಿದರು.
ಹಸಿದಾಗ ಅನ್ನ ನೀಡುವುದೇ ನಿಜವಾದ ಕಾಳಜಿ. ಕೋವಿಡ್‌ನಿಂದಾಗಿ ತೊಂದರೆಗೆ ಒಳಗಾಗಿರುವ ನೋಂದಾಯಿತ ಕಾರ್ಮಿಕರಿಗೆ ಕಷ್ಟದ ಸಮಯದಲ್ಲಿ ಪರಿಹಾರ ನೀಡಬೇಕು. ವಿಳಂಬವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಿದರೆ ಏನು ಪ್ರಯೋಜನ’ ಎಂದು ನಾಯಕರು ಪ್ರಶ್ನಿಸಿದರು.
‘ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿದರೆ ಉಚಿತ ಚಿಕಿತ್ಸೆ ನೀಡಬೇಕು. ಉಚಿತ ಲಸಿಕೆ ನೀಡುವ ಮೂಲಕ ಕಾರ್ಮಿಕರ ಹಿತ ಕಾಪಾಡಬೇಕು. ಕಟ್ಟಡ ಕಾರ್ಮಿಕರಲ್ಲದವರ ನೋಂದಣಿಯನ್ನು ಕೂಡಲೇ ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದರು.
ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮುಖಂಡ ದೇವಾನಂದ ಜಗಾಪೂರ, ಮಹದಾಯಿ ಹೋರಾಟಗಾರ ಅಮೃತ ಇಜಾರಿ, ಮುಖಂಡರಾದ ಬಿ.ಎ.ಮುಧೋಳ, ಎ.ಎಸ್.ಪೀರಜಾದೆ, ಎಂ.ಎಚ್.ಮುಲ್ಲಾ, ಮಂಜುನಾಥ ಹುಜರಾತಿ, ಮೋಹ್ಮದ ರಫೀಕ್ ಮುಳಗುಂದ, ರಮೇಶ ಭೂಸ್ಲೆ ನಭೀಸಾಬ ನದಾಫ್, ಮುಂತಾದವರಿದ್ದರು