Breaking News

ನಮಗೆ 2D ಮೀಸಲಾತಿ ಬೇಡವೇ ಬೇಡಾ

Spread the love

ಬೆಳಗಾವಿ; ಪಂಚಮಸಾಲಿ ಸಮುದಯಕ್ಕೆ 2ಎ ಮೀಸಲಾತಿ ಬದಲು 2ಡಿ ಎಂಬ ಹೊಸ ಕ್ಯಾಟಗಿರಿ ಸೃಷ್ಟಿಸಿ, ಮೀಸಲಾತಿ ಘೋಷಣೆ ಮಾಡಿದ್ದ ಸರ್ಕಾರದ ನಿರ್ಧಾರ ನಮಗೆ ಸಹಮತವಿಲ್ಲ ಆದ್ದರಿಂದ 2ಎ ಮೀಸಲಾತಿಗೆ ಸಿಗುವ ಸೌಲಭ್ಯಗಳು ಅಲ್ಲಿ ಇಲ್ಲ. 2ಎ ಮೀಸಲಾತಿ ನೀಡಬೇಕು ಎಂದು ಸಾಕಷ್ಟು ಪ್ರತಿಭಟನೆ ಬಿಸಿ ಬಿಜೆಪಿ ಸರ್ಕಾರಕ್ಕೆ ತಟ್ಟಿದ್ದರು. ಆದ್ರೆ ಅವರು ಮಾತ್ರ ಪಂಚಮಸಾಲಿ ಸಮುದಾಯಕ್ಕೆ 2ಎ ಮಿಸಲಾತಿ ನೀಡಲು ಹಿಂದೇಟು ಹಾಕುತ್ತಿದೆ. ಅಧಿವೇಶನ ಸಂದರ್ಭದಲ್ಲಿ ಹೋರಾಟ ಕಾವು ಹೆಚ್ಚಾಗುತ್ತಿದಂತೆ ತರಾತುರಿಯಲ್ಲಿ 2ಡಿ ಎಂಬ ಹೊಸ ಕ್ಯಾಟಗರಿ ಸೃಷ್ಟಿಸಿ ಮೀಸಲಾತಿ ಘೋಷಣೆ ಮಾಡಿದ ಸರ್ಕಾರಕ್ಕೆ ಮತ್ತೆ ಹಿನ್ನಡೆ ಆಗಿದೆ. ನಾವು ಕೇಳುತ್ತಿರುವ ಮೀಸಲಾತಿ ಸಿಕ್ಕಿಲ್ಲ ಎಂದು 2ಡಿ ಮಿಸಲಾತಿ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಲು ಸಮಯ ಪಡೆದುಕೊಂಡಿದ್ದ ಪಂಚಮಸಾಲಿ ಸಮುದಾಯ, ಇಂದು ಅಂತಿಮವಾಗಿ ತನ್ನ ನಿಲುವು ಪ್ರಕಟಿಸಿದೆ.‌ ಬೆಳಗಾವಿ ಗಾಂಧಿ ಭವನದಲ್ಲಿ ಸ್ವಾಮೀಜಿ, ಬಸನಗೌಡ ಪಾಟೀಲ್ ಯತ್ನಾಳ, ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ನಡೆದ ಮಹತ್ವದ ರಾಜ್ಯ ಕಾರ್ಯಕಾರಣಿ ಸಭೆ ಬಳಿಕ 2ಡಿ ಮೀಸಲಾತಿಯನ್ನು ಪಂಚಮಸಾಲಿ ಸಮಾಜ ತಿರಸ್ಕರಿಸುತ್ತಿದೆ ಎಂದು ಜಯಮೃತ್ಯುಂಜಯ ಶ್ರೀ ಗಳು ತಿಳಿಸಿದ್ದಾರೆ. ‌ಸಿಎಂ ಬೋಮ್ಮಾಯಿ ಅವರು ತಾಯಿ ಮೇಲೆ ಆಣೆ ಕೊಟ್ಟು ಡಿಸೆಂಬರ್ 29 ರಂದು ಮೀಸಲಾತಿ ಘೋಷಣೆ ಮಾಡಿದರು. ಆದ್ರೆ ಈ ಮೀಸಲಾತಿಯನ್ನು ನಾವು ತಿರಸ್ಕರಿಸುತ್ತೇವೆ.‌
ಸಿಎಂ 24 ಗಂಟೆಯಲ್ಲಿ 2ಎ ಮೀಸಲಾತಿ ಕೊಡ್ತಿರೋ ಇಲ್ಲವೋ ಅನ್ನೋದನ್ನ ಸ್ಪಷ್ಟ ಪಡಿಸಬೇಕು. ಇದೇ ತಿಂಗಳು ಜನವರಿ12 ರ ಒಳಗಾಗಿ ಸರ್ಕಾರ ಮೀಸಲಾತಿ ಘೋಷಣೆ ಮಾಡಬೇಕು. ಘೋಷಣೆ ಮಾಡದಿದ್ದರೆ ಜನವರಿ 13 ರಂದು ಹಾವೇರಿಯ ಸಿಎಂ ಮನೆ ಮುಂದೆ ಒಂದು ದಿನದ ಉಗ್ರ ಹೋರಾಟ ಮಾಡುತ್ತೇವೆ ಎಂದು ಶ್ರೀಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಂಚಮಸಾಲಿ ಸಮುದಾಕ್ಕೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರಿಗೆ ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಸಿಗಬೇಕು ಎಂದು ನಡೆಯುತ್ತಿರುವ ಹೋರಾಟ ಮತ್ತೆ ಹೊಸ ಆಯಾಮದೊಂದಿಗೆ ಆರಂಭ ಆಗಲಿದೆ. ಜ.‌12ರ ಒಳಗಾಗಿ ಏನಾದರೂ ಸರ್ಕಾರ 2ಎ ಮಿಸಲಾತಿ ಘೋಷಣೆ ಮಾಡಿದರೆ ಪಂಚಮಸಾಲಿ ಹೋರಾಟದ ಕಾವು ತನ್ನಗಾಗಲಿದೆ.‌ ಇಲ್ಲದಿದ್ದರೆ ಈ ಬಾರಿ ನಡೆಯುವ ಹೋರಾಟವು ಬಿಜೆಪಿ ಸರ್ಕಾರ ಮುಂದೆ ಎದುರಿಸುವ ಚುನಾವಣೆ ಮೇಲೆ ಪರಿಣಾಮ ಬೀರಲಿದೆ.‌ ಮತ್ತೊಂದು ಸಮಯದಾಯಕ್ಕೆ ಮೀಸಲಾತಿ ನೀಡಲು ನಮ್ಮದೇನು ತೊಂದರೆ ಇಲ್ಲ. ನಮಗೆ ಮೀಸಲಾತಿ ಕೊಡುತ್ತೇವೆ ಅಂತಾ ಭರವಸೆ ನೀಡಿದ್ದೀರಿ ಬೊಮ್ಮಾಯಿ ಅವರು ತಾಯಿ ಆನೆ ಮಾಡಿದ್ದೀರಿ. ನುಡಿದಂತೆ ನಡೆದುಕೊಳ್ಳದಿದ್ದರೆ ಇದರ ಗಂಭೀರ ಪರಿಣಾಮ ಪಕ್ಷದ ಮೇಲೆ ಆಗುತ್ತದೆ ಹಾಗೂ ನಿಮ್ಮ ಮೇಲೂ ಆಗುತ್ತದೆ. ನೀವು ಹೀಗೆ ಮೊಸ ಮಾಡಿದ್ರೆ ನಮ್ಮ ಪಕ್ಷಕ್ಕೆ ಪೆಟ್ಟು ಬೀಳುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಬಸವಗೌಡ ಯತ್ನಾಳ ಎಚ್ಚರಿಕೆ ನೀಡಿದ್ದಾರೆ. ತನ್ನ ನಿಲುವು ಪ್ರಕಟಿಸಲು ಸರ್ಕಾರಕ್ಕೆ ಗಡವು ನೀಡಿರುವ ಪಂಚಮಸಾಲಿ ಲಿಂಗಾಯತ ಸಮುದಾಯದ ನಾಯಕರು, ಸಿಎಂ ಮನೆ ಮುಂದೆ ಮುಂದಿನ ಹೋರಾಟಕ್ಕೆ ಕರೆ ನೀಡಿದ್ದಾರೆ. ‌ಸಿಎಂ ಮನೆ ಮುಂದೆ ಹೋರಾಟದ ಬಳಿಕವೂ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗದಿದ್ದರೆ ಮುಂದಿನ ಹೋರಾಟದ ರೂಪರೇಷೆಗಳನ್ನು ಅಲ್ಲೇ ಪ್ರಕಟಿಸಿ ಮುಂದೆ ಉಗ್ರವಾದ ಹೋರಾಟ ಮಾಡಲು ನಿರ್ಧರಿಸಲಾಗಿದೆ. ‌


Spread the love

About Karnataka Junction

    Check Also

    ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರಿಂದ ನಾಳೆ ಐಐಟಿಯಲ್ಲಿನ ಜ್ಞಾನ ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ ಉದ್ಘಾಟನೆ

    Spread the loveಧಾರವಾಡ ಫೆ.29: ಭಾರತದ ಗೌರವಾನ್ವಿತ ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನ್‌ಕರ್ ಅವರು ನಾಳೆ ಮಾರ್ಚ್ 1, …

    Leave a Reply