ಹುಬ್ಬಳ್ಳಿ; ನಗರದ ಹೆಗ್ಗೇರಿ ಮಾರುತಿ ನಗರ ಮಹಿಳಾ ಮಂಡಳ ಹಾಗೂ ಸಿ, ಎಸ್, ಸಿ, ಕಾಮನ್ ಸರ್ವಿಸ್ ಸೆಂಟರ್ ಅವರ ಸಹಯೋಗದಲ್ಲಿ ನಗರದ ಹೆಗ್ಗೇರಿ ಮಾರುತಿ ನಗರ ಕಾಲೋನಿಯಲ್ಲಿ ಸಿ,ಎಸ್, ಸಿ ಸೆಂಟರ್ ವತಿಯಿಂದ ಉಚಿತವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯೋಜನೆಯಾದ ಆಯುಷ್ಮಾನ್ ಭಾರತ ಕಾರ್ಡನ್ನು ಉಚಿತವಾಗಿ ನೊಂದಣಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖಂಡೆ ಲಕ್ಷ್ಮಿ ಬಿಜ್ಜರಗಿ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನ ಹೇಗೆ ಪಡೆಯಬೇಕು ಎಂಬ ನಿಟ್ಟಿನಲ್ಲಿವಸಾರ್ವಜನಿಕರಿಗೆ ಸದುಪಯೋಗ ಬಗ್ಗೆ ವಿವರವಾಗಿ ತಿಳಸಿ ಕೊಟ್ಟರು, ಹಾಗೂ ಸಮಸ್ತ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ ಮಾಡಲಾಯಿತು, ಇದೇ ವೇಳೆ ಮಧು ಪಟ್ಟಣ ಶೆಟ್ಟಿ ಅವರು ನಿರೂಪಣೆ ಮಾಡಿದರು, ಶಿವರುದ್ರಪ್ಪ ಬಡಿಗೇರ್ ವಂದಿಸಿದರು, ಶಿವಬಸಪ್ಪ ಗಚ್ಚಿನವರ, ನರಸಿಂಹರ ಅರೆಪಲ್ಲಿ ಬಂಟಿಂಗ್ ರಾಮು, ಹಾಗೂ ಮಾರುತಿ ನಗರದ ಗುರು -ಹಿರಿಯರು ಉಪಸ್ಥಿತರಿದ್ದರು.
Check Also
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ
Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …