Breaking News

ಅಣ್ಣಿಗೇರಿಯ ದಾಸೋಹ ಮಠದ ಜಾತ್ರಾ ಮಹೋತ್ಸವದಲ್ಲಿ ಪ್ರಕಾಶ್ ಅಂಗಡಿಗೆ ಸನ್ಮಾನ

Spread the love

ಹುಬ್ಬಳ್ಳಿ; ಅಣ್ಣಿಗೇರಿಯ ದಾಸೋಹಮಠದ ಜಾತ್ರಾ ಮಹೋತ್ಸವದಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಪ್ರಕಾಶ ಅಂಗಡಿ ಅವರಿಗೆ ಸನ್ಮಾನ ಮಾಡಲಾಯಿತು. ನಂತರ ಮಾತನಾಡಿದ ಅವರು, ಅಣ್ಣಿಗೇರಿ ದಾಸೋಹಮಠ ಯಾವಾಗಲೂ ಅನ್ನದಾಸೋಹ ,ಜ್ಞಾನ ದಾಸೋಹ ಯಾವಾಗಲೂ ಬಕ್ತರಿಗೆ ಉನಬಡಿಸುತ್ತಾ ಬಂದಿದೆ.ಶಿವಕುಮಾರ ಮಹಾಸ್ವಾಮಿಗಳ ಪರಿಶ್ರಮದಿಂದ ಈ ರೀತಿಯಾಗಿ ಬೆಳೆದು ಬಂದಿದೆ.ಎಲ್ಲಾ ಭಕ್ತರಲ್ಲಿ ಹಾಗೂ ಸ್ವಾಮೀಜಿಯವರಲ್ಲಿ ನನ್ನದೊ‌ಂದು ವಿನಂತಿ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ನಾನು ಸ್ಪರ್ದಿಸುತ್ತಿದ್ದೇನೆ ನನಗೊಂದು ಅವಕಾಶ ಮಾಡಿಕೊಡಿ ಎಂದ ಅವರು ಇಡೀ ಅಣ್ಣಿಗೇರಿ ತಾಲ್ಲೂಕು ,ನವಲಗುಂದ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವೆ ಎಂದು ಜನರಲ್ಲಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಪರಮ ಪೂಜ್ಯ ಶಿವಕುಮಾರ ಸ್ವಾಮಿಗಳು, ಶಿರಹಟ್ಟಿಯ ದಿಂಗಾಲೇಶ್ವರ ಮಹಾಸ್ವಾಮಿಗಳು, ಬ್ಯಾಹಟ್ಟಿಯ ಹಿರೇಮಠ ಮಹಾಸ್ವಾಮಿಗಳು, ಮಹೇಶ್ ಅಂಗಡಿ, ದೇಸಾಯಿಯವರು, ಷಣ್ಮುಖ ಗುರಿಕಾರ,ನಿಂಗಪ್ಪ ಬಡ್ಡೆಪ್ಪನವರ, ಅರ್ಜುನ ಕಲಾಲ,ಜೋಶಿಯವರು ಮುಂತಾದವರು ಭಾಗವಹಿಸಿದ್ದರು.


Spread the love

About Karnataka Junction

[ajax_load_more]

Check Also

*ಎಸ್.ಬಿ.ಐ ಹುದ್ದೆಗಳ ನೇಮಕಾತಿ; ಜ.6 ರಿಂದ ಪೂರ್ವಭಾವಿ ಪರೀಕ್ಷೆ ಸಿದ್ಧತೆಗೆ ಉಚಿತ ತರಬೇತಿ*

Spread the loveಹುಬ್ಬಳ್ಳಿ : ನವನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿಯಿಂದ ಸ್ಟಡಿ ಸರ್ಕಲ್ ಯೋಜನೆಯಡಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ …

Leave a Reply

error: Content is protected !!