ಹುಬ್ಬಳ್ಳಿ: ಅನಧಿಕೃತವಾಗಿ ದಿನಾಂಕ ನಿಗದಿ ಇಲ್ಲದ ಡಾಕ್ಯುಮೆಂಟ್ ತೋರಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಜನರ ದಾರಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮಹತ್ವದ ಕಳಸಾ ಬಂಡೂರಿ ಯೋಜನೆಯಲ್ಲಿ ಯಾವುದೇ ರೀತಿಯಲ್ಲಿ ಅಧಿಕೃತವಲ್ಲದ ದಾಖಲೆಯನ್ನು ತೋರಿಸಿ ಜನರ ದಿಕ್ಕು ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಹೋರಾಟದ ಸಿದ್ದತೆ ಆರಂಭವಾದ ಮೇಲೆ ಸರ್ಕಾರ ಎಚ್ವೆತ್ತುಕೊಂಡಿದೆ. ಮುಗ್ದ ರೈತರಿಗೆ ಸುಳ್ಳು ಹೇಳುವುದು,ಮೋಸ ಮಾಡುವುದು ಬಿಜೆಪಿಯ ವರಸೆಯಾಗಿದೆ. ಚುನಾಚಣೆ ಬಂದಾಗ ಬಿಜೆಪಿಯವರು ಸುಳ್ಳು ಹೇಳುತ್ತಾರೆ. ಮೋಸ ಮಾಡುತ್ತಾರೆ ಎಂದರು.
ಯಡಿಯೂರಪ್ಪ ಗೋವಾ ಮುಖ್ಯಮಂತ್ರಿ ವಿರೋಧ ಮಾಡ್ತಾರೆ ಎಂದು ಪತ್ರ ತೋರಿಸಿದ್ರು. ಅದು ಬೋಗಸ್ ಲೆಟರ್, ಸುಳ್ಳು ದಾಖಲೆಯನ್ನು ಯಡಿಯೂರಪ್ಪ ಬಹಿರಂಗ ಪಡಿಸಿದ್ದರು. ಮಹದಾಯಿ ವಿಚಾರವಾಗಿ ಇದು ಮೊದಲ ದ್ರೋಹ. ಮಹದಾಯಿಗಾಗಿ ಬೊಮ್ಮಾಯಿ ಪಾದಯಾತ್ರೆ ಮಾಡಿದ್ದಾರೆ. ಎಸ್.ಆರ್.ಬೊಮ್ಮಾಯಿ ಮೊದಲ ಸಭೆ ಮಾಡಿದ್ದನ್ನು ನಾನು ನೆನಪು ಮಾಡಿಕೊಳ್ಳುತ್ತೇನೆ. ನಾನು ನೀರಾವರಿ ಸಚಿವನಾದ ಮೇಲೆ ಅನೇಕ ಸಭೆ ಮಾಡಿದ್ದೇನೆ. ನಮ್ಮ ಕಾಲದಲ್ಲಿ DPR ಸಿದ್ದಪಡಿಸಿದ್ದೇವು. ನಮ್ಮ ಡಿಪಿಆರ್ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇವು. ನಮಗೆ ಅವತ್ತು ಅನುಮತಿ ಸಿಕ್ಕಿತು ಕುಡಿಯುವ ನೀರಿಗಾಗಿ ನೀರು ಬಳಕೆ ಮಾಡಬಹುದು ಎನ್ನುವ ಅನುಮತಿ ಸಿಕ್ಕಿತ್ತು ಎಂದರು.
ಇನ್ನೂ 30.04.2002 ರಂದು ಅನುಮತಿ ಸಿಕ್ಕಿತ್ತು. ಆದರೇ ಗೋವಾ ಮುಖ್ಯಮಂತ್ರಿ ವಾಜಪೇಯಿ ಬಳಿ ತಪ್ಪು ಮಾಹಿತಿ ಹೇಳಿದ್ದರು. ನಮಗೆ ಸಿಕ್ಕ ಕ್ಲಿಯರೆನ್ಸ್ ಸ್ಥಗಿತ ಮಾಡಿದ್ದರು ಎಂದು ಎಚ್.ಕೆ ಪಾಟೀಲ್ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
Check Also
ನನಗಿಂತ ಭರತ್ ಗೆ ಹೆಚ್ಚು ಮತ ನೀಡಿ ಗೆಲ್ಲಸಿ- ಸಂಸದ ಬಸವರಾಜ ಬೊಮ್ಮಾಯಿ ಮನವಿ
Spread the loveಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ …