ಹುಬ್ಬಳ್ಳಿ; ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡ ಗ್ರಾಮದಲ್ಲಿ “ರಾಜ್ಯ ಮಟ್ಟದ ಪಗಡ ಸ್ಪರ್ಧೆಯಲ್ಲಿ” ಮುಖ್ಯ ಅಥಿತಿಯಾಗಿ ನವಲಗುಂದ ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಪ್ರಕಾಶ ಅಂಗಡಿ ವಕೀಲರು ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪಗಡಿ ಆಟದಲ್ಲಿ ಅತ್ಯಂತ ಚಾಣಾಕ್ಷತನದಿಂದ ಆಡಬೇಕಾಗುತ್ತದೆ.ಸೋಲು ಗೆಲುವುಗಳನ್ನು ಸಮಾನಾಂತರದಲ್ಲಿ ನಾವು ನೋಡಬೇಕು ಅಂದಾಗ ಮಾತ್ರ ಏನಾದರೂ ಸಾದಿಸಲಿಕ್ಕೆ ಸಾಧ್ಯವಾಗುತ್ತದೆ.ಈ ಬಾರಿ ಇಲ್ಲಿ ಸೇರಿತಕ್ಕಂತಹ ಜನತೆಯಲ್ಲಿ ಕೈ ಮುಗಿದು ನಾನು ಕೇಳುತ್ತೆನೆ 2023 ರ ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೆನೆ ನನಗೆ ಒಂದು ಅವಕಾಶ ಮಾಡಿಕೊಡಿ ,ಈಗಾಗಲೇ ಎನ್ ಎಚ್ ಕೋನರಡ್ಡಿಯವರನ್ನು ನೋಡಿರಿ ಮತ್ತು ಶಂಕರ ಪಾಟೀಲ ಮುನೇನಕೊಪ್ಪರನ್ನು ನೋಡಿರಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ನಮ್ಮ ಕ್ಷೇತ್ರದ ಜನ ತಿರಸ್ಕಾರ ಮಾಡಲು ಈಗಾಗಲೇ ತಯಾರಾಗಿದ್ದಾರೆ ಎಂದು ಸೇರಿದ ಜನರಲ್ಲಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಸಾನಿಧ್ಯವನ್ನು ಗಂಗಯ್ಯಜ್ಜ ಹಿರೇಮಠ ಅವರು ವಹಿಸಿದ್ದರು,ಮುಖ್ಯ ಅತಿಥಿಯಾಗಿ ಮಾಜಿ ಶಾಸಕರಾದ ಎನ್ ಎಚ್ ಕೋನರಡ್ಡಿ ಆಗಮಿಸಿದ್ದರು ಎಸ್ ಎಮ್ ಗುಂಜಾಳ,ನವೀನ ಬೂದಿಹಾಳ ,ಮಹಾದೇವಪ್ಪ ಕರಲಿಂಗಣ್ಣವರ,ಪುರದಪ್ಪ ಜಂತಲಿ,ಶಿವಾನಂದ ಕಿರೇಸೂರ,ಮಹೇಶ ಕೋಳಿವಾಡ,ಸ್ಪರ್ಧಾಳುಗಳು,ಗ್ರಾಮಸ್ಥರು ಭಾಗವಹಿಸಿದ್ದರು.
Check Also
ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು
Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ನಂಬರ್ …