ಹುಬ್ಬಳ್ಳಿ: ಶೈಲಶ್ರೀ ಮಂಜುನಾಥ ಫೈನ್ ಆರ್ಟ್ಸ್ ಮತ್ತು ಕಲ್ಚರಲ್ ಸಂಸ್ಥೆ ಬೈರಿದೆವರಕೊಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯೋಗದಲ್ಲಿ ಮಹಿಳೆಯರಿಗಾಗಿ “ಮಹಿಳಾ ಜಾನಪದ ಸಂಭ್ರಮ 2022” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಲೀಲಾ ಮೇಟಿ ಕನ್ನಡ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿಯ ಮೂಲಬೇರು ಮಹಿಳೆ ಹಲವಾರು ಜನಪದ ಕಲೆಗಳನ್ನು ಆದಿಕಾಲದಿಂದು ಇಂದಿನವರೆಗೂ ಉಳಿಸಿ ಬೆಳೆಸಿದ ಹಿರಿಮೆ ಮಹಿಳೆಯರಿಗೆ ಸಲ್ಲಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಹುಬ್ಬಳ್ಳಿಯ ಲಿಂಗರಾಜ ನಗರದ ಶ್ರೀ ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಲಾಗಿತ್ತು ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ಜಗ್ಗಲಗಿ, ಜಾನಪದ ಗೀತೆಗಳು, ಜಾನಪದ ನೃತ್ಯ, ಭರತನಾಟ್ಯ, ಗಾಯನ, ಸುಗಮ ಸಂಗೀತ, ಸೋಬಾನ ಪದ, ಬೀಸೋ ಪದ, ತತ್ವಪದ, ದೇಶಭಕ್ತಿ ನೃತ್ಯ, ವಚನ ನೃತ್ಯ ಹಾಗೂ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಶೇಷವಾಗಿ ಮಹಿಳೆಯರಿಗಾಗಿ ಆಯೋಜಿಸಲಾಗಿತ್ತು. ನಗರದ ಸುಪ್ರಸಿದ್ಧ ಕಲಾವಿದರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಜನಕ್ಕೆ ಸಂಗೀತದ ರಸದೌತಣವನ್ನು ಊಣಬಡಿಸಿದರು.
ಎಲ್ಲ ಕಲಾವಿದರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಶೈಲಶ್ರೀ ಮಂಜುನಾಥ ಉದ್ಘಾಟಿಸಿದರು ಅತಿಥಿಗಳಾಗಿ ಅಂಕಿತಾ ಶಿಂಧೆ, ರಾಮೇಶ್ವರಿ ಆಡೂರ, ರಾಜೇಶ್ವರಿ ಕಿರೇಸೂರ, ಶೈಲಾ ಚಿಕ್ಕಮಠ ಉಪಸ್ಥಿತರಿದ್ದರು ಜ್ಯೋತಿ ಬಾಗುನವರ್ ಸ್ವಾಗತಿಸಿದರು ಸ್ವಾಗತಿಸಿದರು ವೀಣಾ ಭಟ್ ನಿರೂಪಿಸಿದರು ಕಾರ್ಯಕ್ರಮವನ್ನು ಅಮಿತಕುಮಾರ ಶಿಂಧೆ ಆಯೋಜಿಸಿದ್ದರು.
Check Also
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ
Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …