ಹುಬ್ಬಳ್ಳಿ: ಜೈನ ಸಮುದಾಯದ ತೀರ್ಥ ಕ್ಷೇತ್ರ ಎಂದೇ ಕರೆಯಿಸಿಕೊಳ್ಳುವ ಜಾರ್ಖಂಡ್ ರಾಜ್ಯದ ಸಮ್ಮೇದ ಶಿಖರ್ಜಿ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಮಾಡದೇ ಅದರ ಪಾವಿತ್ರ್ಯತೆ ಕಾಪಾಡುವಂತೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ
ಶಿಖರ್ಜಿ ಉಳಿಸಿ ಎಂಬ ಅಭಿಯಾನ ನಡೆಸಲಾಯಿತು..ಅದರಂಗವಾಗಿ ಜೈನ ಸಮಾಜದ ಸಾವಿರಾರು ಜನ ಪ್ರತಿಭಟನಾ ರ್‍ಯಾಲಿ ನಡೆಸಿ, ತಹಸೀದಾರ ಮುಖಾಂತರ ಕೇಂದ್ರ ಹಾಗೂ ಜಾರ್ಖಂಡ್ ಸರ್ಕಾರಕ್ಕೆ ಮನವಿ ಸಲ್ಲಿಸಿದರು..
ನಗರದ ರೈಲ್ವೆ ನಿಲ್ದಾಣ ಎದುರಿನ ಜೈನ್ ಮಂದಿರದಿಂದ ಪ್ರತಿಭಟನಾ ರಾಲಿ ಆರಂಭಗೊಳಿಸಿ
ತಹಶಿಲ್ದಾರರಕಚೇರಿವರೆಗೂ ಪ್ರತಿಭಟನಾ ರ್‍ಯಾಲಿ ನಡೆಸಿದ ಜೈನ ಸಮಾಜದ ಜನ ಕಚೇರಿಗೆ ಬಂದು ಕೆಲ ಹೊತ್ತು ಪ ನಡೆಸಿದರು….ಶತಮಾನಗಳ ಹಿಂದೆಯೇ ಸಮ್ಮೇದ ಶಿಖರ್ಜಿಯನ್ನು ಜೈನರ ಯಾತ್ರ ಸ್ಥಳವೆಂದು ಘೋಷಿಸಲಾಗಿದೆ. ಮೊಘಲ್ ಚಕ್ರವರ್ತಿ ಅಕ್ಬರ್ ಕೂಡ ಶಿಖರ್ಜಿ ಜೈನರ ತೀರ್ಥ ಕ್ಷೇತ್ರ ಎಂದು ಆದೇಶ ಹೊರಡಿಸಿದ್ದ. ಬ್ರಿಟೀಷರ ಕಾಲದಲ್ಲೂ ಇದನ್ನು ಒಪ್ಪಿಕೊಳ್ಳಲಾಗಿತ್ತು. ಜೈನರು ಭಾರತದಲ್ಲೇ ಅತೀ ಸೂಕ್ಷ್ಮ ಅಲ್ಪ ಸಂಖ್ಯಾತರಾಗಿದ್ದಾರೆ. ಜೈನರ ಪ್ರತಿರೋಧದ ನಡುವೆಯೂ ಜಾರ್ಖಂಡ್ ರಾಜ್ಯ ಸರ್ಕಾರ ಈ ಪವಿತ್ರ ಸ್ಥಳವನ್ನು ಪ್ರವಾಸಿ ಸ್ಥಾನವೆಂದು ಘೋಷಿಸುವ ಮೂಲಕ ಅದನ್ನು ಅಪವಿತ್ರಗೊಳಿಸಲು ಮುಂದಾಗಿದೆ. ಇದನ್ನು ಪ್ರವಾಸಿ ತಾಣವನ್ನಾಗಿಸಿದರೆ ಅಲ್ಲಿ ಧಾರ್ಮಿಕತೆಗೆ ವಿರುದ್ಧವಾದ ಚಟುವಟಿಕೆಗಳು ನಡೆಯುತ್ತವೆ. ಇದರಿಂದ ಶಿಖರ್ಜಿಯ ಪಾವಿತ್ರ್ಯತೆ ಹಾಳಾಗುತ್ತದೆ ಜೊತೆಗೆ ಭವಿಷ್ಯದಲ್ಲಿ ಜೈನ ದೇಗುಲಗಳಿದೆ ತೊಂದರೆಯಾಗುತ್ತದೆ. ಆದ್ದರಿಂದ ಜಾರ್ಖಂಡ್ ಸರ್ಕಾರ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವೆಂದು ಘೋಷಿಸಿದ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಜೈನ್ ಸಮಾಜದ ಮುಖಂಡ ವಿಮಲ ತಾಳಿಕೋಟಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
