Breaking News

ಸಿಇಟಿ ಪರೀಕ್ಷೆಗೆ ಇಂದಿನಿಂದ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ

Spread the love

ಬೆಂಗಳೂರು: ರಾಜ್ಯದಲ್ಲಿ ಕೊರೊನಾದಿಂದಾಗಿ ಇದೀಗ ಶೈಕ್ಷಣಿಕ ಪಠ್ಯಕ್ರಮವೇ ಏರುಪೇರಾಗಿದೆ. ಹಲವು ಬಾರಿ ವೃತ್ತಿಪರ ಕೋರ್ಸ್​ಗಳಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪರೀಕ್ಷೆ ಮುಂದೂಡಲಾಗಿದೆ. ಇದೀಗ ಅಂತಿಮವಾಗಿ ಆಗಸ್ಟ್ ಅಂತ್ಯದಲ್ಲಿ ಪರೀಕ್ಷೆ ನಡೆಸಲು ಯೋಜಿಸಲಾಗಿದೆ.
ಇದಕ್ಕಾಗಿ ಇಂದಿನಿಂದ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿದೆ.
ಸರ್ಕಾರದ ಆದೇಶದಂತೆ ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ, ನ್ಯಾಚುರೋಪತಿ, ಬಿ-ಫಾರ್ಮ ಹಾಗೂ 2 ನೇ ವರ್ಷದ ಬಿ ಫಾರ್ಮ ಮತ್ತು ಡಿ ಫಾರ್ಮ್​, ಕೃಷಿ ವಿಜ್ಞಾನ ಕೋರ್ಸ್​ಗಳು ಮತ್ತು ವೆಟರ್ನರಿ ಕೋರ್ಸ್​ಗಳ ಪ್ರವೇಶಕ್ಕಾಗಿ ಆಗಸ್ಟ್ 28, 29 ರಂದು ಸಿಇಟಿ ಪರೀಕ್ಷೆ ನಡೆಯಲಿದೆ.ಪರೀಕ್ಷೆಗೆ ನೋಂದಣಿ ಮಾಡಿಕೊಂಡು ಆನ್​ಲೈನ್ ಮೂಲಕ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಾಧಿಕಾರದ ವೆಬ್‌ಸೈಟ್ kea.kar.nic.in ನಲ್ಲಿ ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿಕೊಂಡು ವೇಳಾಪಟ್ಟಿಯಂತೆ ಅರ್ಜಿ ಸಲ್ಲಿಸಲು ಕೋರಿದೆ. ಮೊಬೈಲ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.ಸಿಇಟಿ ಅರ್ಜಿ ವೇಳಾಪಟ್ಟಿ ಹೀಗಿದೆ: ಸಿಇಟಿ ನೋಂದಣಿ- ಆನ್​ಲೈನ್ ಮೂಲಕ ಅರ್ಜಿ ಸಲ್ಲಿಕೆ- ಜೂನ್ 15 (ಮಧ್ಯಾಹ್ನ 12) ರಿಂದ ಜುಲೈ 10ರ ( ಸಂಜೆ 5:30) ವರೆಗೆಆನ್ ಲೈನ್ ಮೂಲಕ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನ- ಜುಲೈ 13ವಿಶೇಷ ಪ್ರವರ್ಗಗಳ ಮೂಲ ಪ್ರಮಾಣ ಪತ್ರಗಳನ್ನು ನಿಗದಿತ ದಿನಾಂಕಗಳಂದು ಸಲ್ಲಿಸುವುದು – ಜುಲೈ 14 ರಿಂದ 20 ರವರೆಗೆಆನ್​ಲೈನ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿನ ಮಾಹಿತಿಗಳನ್ನು ಅವಶ್ಯವಿದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳುವುದು (ಶುಲ್ಕ ಪಾವತಿ ಮಾಡುವವರಿಗೆ ಮಾತ್ರ) – ಜುಲೈ 19 ರಿಂದ 22 ರವರೆಗೆ ಬೆಳಗ್ಗೆ 11ರಿಂದ 5:30ರ ತನಕ ಸಿಇಟಿ ಪ್ರವೇಶ ಪತ್ರಗಳನ್ನು ಡೌನ್​ಲೋಡ್​ ಮಾಡಿಕೊಳ್ಳಲು ಆಗಸ್ಟ್ 13 ರಂದು ಮಾಡಿಕೊಳ್ಳಬಹುದು.

ವೈದ್ಯಕೀಯ, ದಂತವೈದ್ಯಕೀಯ, ಆಯುರ್ವೇದ, ಯುನಾನಿ, ಹೋಮಿಯೋಪತಿ ಪ್ರವೇಶಕ್ಕಾಗಿ ಅಭ್ಯರ್ಥಿಗಳು ನೀಟ್ (NEET) ಅರ್ಹತೆಯನ್ನು ಪಡೆದಿರಬೇಕು. ಆರ್ಕಿಟೆಕ್ಚರ್ ಪ್ರವೇಶಕ್ಕಾಗಿ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನಡೆಸುವ NATA-2021 ರಲ್ಲಿ ಅಥವಾ 2021 ರ JEE PAPER-2 ಪರೀಕ್ಷೆಯಲ್ಲಿ ಕಡ್ಡಾಯವಾಗಿ ಅರ್ಹತೆಯನ್ನು ಪಡೆದಿರಬೇಕು.ಸಿಇಟಿ 2021ಕ್ಕೆ ಆನ್​ಲೈನ್ ಮೂಲಕ ನೋಂದಾಯಿಸಿಕೊಂಡು, ಆನ್​ಲೈನ್ ಅರ್ಜಿ ಸಲ್ಲಿಸಿ, ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ.ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ, ನ್ಯಾಚುರೋಪತಿ, ಬಿ-ಫಾರ್ಮ ,2 ನೇ ವರ್ಷದ ಬಿ ಫಾರ್ಮ , ಡಿ ಫಾರ್ಮ್​, ಕೃಷಿ ವಿಜ್ಞಾನ ಕೋರ್ಸ್​ಗಳು ಮತ್ತು ವೆಟರ್ನರಿ ಕೋರ್ಸ್​ಗಳ ಪ್ರವೇಶಕ್ಕೆ ಕಡ್ಡಾಯ


Spread the love

About Karnataka Junction

[ajax_load_more]

Check Also

ಹೆಣ್ಣು ಮಕ್ಕಳೇ ಸ್ಟಾಂಗು ಗುರು ಕಾರ್ಯಕ್ರಮ ಸ್ಟಾರ್ ಸುವರ್ಣ ಚಾಲನೆ

Spread the loveಹುಬ್ಬಳ್ಳಿ: ನಗರದ ವಿನೂತನ ಪೌಂಡೇಶನ್ ಹುಬ್ಬಳ್ಳಿ ಅಧ್ಯಕ್ಷರು ಅಕ್ಕಮ್ಮಾ ಕಂಬಳಿ ಮುಂತಾದವರ ನೇತೃತ್ವದಲ್ಲಿ ಹೆಣ್ಣು ಮಕ್ಕಳೇ ಸ್ಟಾಂಗು …

Leave a Reply

error: Content is protected !!