ಹುಬ್ಬಳ್ಳಿ: ಧಾರವಾಡ ಜಿಲ್ಲೆಯ
ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರ ಗ್ರಾಮದ ಪಕ್ಷದ ಮುಖಂಡರ ಜೊತೆಗೆ ಅಣ್ಣಿಗೇರಿ ನಗರದ ನವಲಗುಂದ ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಪ್ರಕಾಶ ಅಂಗಡಿ ವಕೀಲರು ಅವರ ಜನಸಂಪರ್ಕ ಕಾರ್ಯಾಲಯದಲ್ಲಿ ಸಂಘಟನೆಯ ಬಗ್ಗೆ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಪ್ರಕಾಶ ಅಂಗಡಿಯವರು ಮಾತನಾಡಿ 2023 ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಬಾವುಟವನ್ನು ಹಾರಿಸಲು ಕಾರ್ಯತಂತ್ರದ ಮಾಡುವುದು ಬಹಳ ಅವಶ್ಯಕತೆ ಇದೆ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಬಾಸುಸಾಬ ಫೀರಖಾನವರ,ದಾಬಲಸಾಬ ಬಳಗಲಿ,ಫಕ್ರುಸಾಬ ಬಳ್ಳೂರ, ಸಿದ್ದಪ್ಪ ಮಡಿವಾಳರ, ಗಿರಿಯಪ್ಪ ಬೇವುರ,ಗೋಪಾಲ ಗಡ್ಡಿ,ಹನಮಂತಪ್ಪ ಜುಂಜಪ್ಪನವರ,ಲಾಡಸಾಬ ಶೇಕಸನದಿ,ಮೌಲಾಸಾಬ ಬ್ಯಾಹಟ್ಟಿ,ದಸಗೀರಸಾಬ ಸಂಗಟಿ,ಬಸವರಾಜ ಹಾದಿಮನಿ, ಎಮ್ ಪಿ ಖುದ್ದನ್ನವರ ಮತ್ತಿತರರು ಭಾಗವಹಿಸಿದ್ದರು.