ಹಾವೇರಿ: ‘ಕೈ – ದಳ’ ಮೈತ್ರ ಸರ್ಕಾರ ಪತನಗೊಳಿಸಿದ ಮಾದರಿಯಲ್ಲಿ ಗ್ರಾ.ಪಂ. ಅಧ್ಯಕ್ಷನನ್ನು ಅಧಿಕಾರದಿಂದ ಕೆಳಸುವಲ್ಲಿ ಗ್ರಾ.ಪಂ. ಸದಸ್ಯರು ಸಕ್ಸಸ್ ಆಗಿದ್ದಾರೆ. ಹೌದು, ಹೇಳಿದಂತೆ ಅಧ್ಯಕ್ಷ ನಡೆಯದ ಕಾರಣ ಹಾಲಿ ಅಧ್ಯಕ್ಷ ಈಗ ಮಾಜಿ ಗ್ರಾ.ಪಂ ಅಧ್ಯಕ್ಷನಾಗಿದ್ದಾರೆ.
ಆಪರೇಷನ್ ದೇವರಗುಡ್ಡ ಗ್ರಾ.ಪಂ ಯಶಸ್ವಿಯಾಗಿದ್ದಾರೆ.
ವಿಮಾನದಿಂದ ಕೇಳಗಿಳಿದು ಗ್ರಾ.ಪಂ ಸದಸ್ಯರು ಪೊಜು ಕೊಟ್ಟಿದ್ದು
ಮತ್ತೊಂದೆಡೆ ಹಾರ ಹಾಕಿಸ್ಕೊಂಡು ಪೋಜ್ ನೀಡಿರೋ ವ್ಯಕ್ತಿ. ಅಬ್ಬಬ್ಬ ಈ ದೃಶ್ಯ ಕಂಡು ಬಂದಿದ್ದು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ.. ಅಷ್ಟಕ್ಕೂ ಇವರೆಲ್ಲ ಟ್ರಪಿ ಮಾಡಿದರ್ವಾ ಅಂತಾ ಯೋಚಿಸ್ಬೇಬೆ…! ಇವರು ಪ್ರವಾಸ ಮಾಡಿದವರಲ್ಲ ದೇವರಗುಡ್ಡದ ಗ್ರಾ.ಪಂ ಹಾಲಿ ಅಧ್ಯಕ್ಷ ಕೇಳಗಿಸಲು ಬೆಂಗಳೂರು ರೆಸಾರ್ಟ್ ಯಿಂದ ವಾಪಸ್ ಆದವರು. ಹೌದು, ರಾಜ್ಯಾದ್ಯಂತ ಸದ್ದು ಮಾಡಿದ್ದ ದೇವರಗುಡ್ಡದ ಆಪರೇಷನ್ ಗ್ರಾಮ ಪಂಚಾಯತ ಈಗ್ ಸಕ್ಸಸ್ ಆಗಿದೆ. ರಾಜ್ಯದಲ್ಲಿ ಮೈತ್ರ ಸರ್ಕಾರ ಪತನಗೊಳಿಸಲು ಮಾಡಿದ ಪ್ಲ್ಯಾನ್ ಮಾದರಿಯಲ್ಲಿ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮ ಪಂಚಾಯತಿ ಸದಸ್ಯರು ರೆಸಾರ್ಟ್ ಪಾಲಿಟಿಕ್ಸ್ ಮಾಡಿ ಯಶಸ್ವಿಯಾಗಿದ್ದಾರೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಗ್ರಾ.ಪಂ ಹಾಲಿ ಅದ್ಯಕ್ಷರಾಗಿದ್ದ ಮಾಲತೇಶ ದುರಗಪ್ಪ ನಾಯರ್ ಒಪ್ಪಂದದಂತೆ 15 ತಿಂಗಳು ಅಧಿಕಾರ ನಡೆಸುವುದಾಗಿ ಒಪ್ಪಂದಯಾಗಿತ್ತು. ಆದ್ರೆ, ಒಪ್ಪಂದಂತೆ ಹಾಲಿ ಅಧ್ಯಕ್ಷ ನಡೆದುಕೊಳ್ಳದ ಹಿನ್ನೆಲೆ. ಎಂಬತ್ತು ಜನ ಗ್ರಾ.ಪಂ ಸದಸ್ಯರು ೪೦ ದಿನಗಳ ಕಾಲ ಬೆಂಗಳೂರು ರೆಸಾರ್ಟ್ ನಲ್ಲಿ ತಂಗಿದ್ದರು. ಒಟ್ಟು 13 ಜನ ಗ್ರಾ.ಪಂ ಸದಸ್ಯರಲ್ಲಿ 9 ಸದಸ್ಯರು ದೇವರಗುಡ್ಡ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಗುರೂಜಿ ಬಣದವರು, ಇನ್ನುಳಿದ ನಾಲ್ವರು ಬಿಜೆಪಿ ಸದಸ್ಯರಾಗಿದ್ದರು. ಇನ್ನು ಹಾಲಿ ಅಧ್ಯಕ್ಷ ಮಾತಿಗೆ ತಪ್ಪಿದ ಹಿನ್ನಲೆ ಸದಸ್ಯರು ಬೆಂಗಳೂರಿನ ರೆಸಾರ್ಟ್ ನಿಂದ ವಿಮಾನದಲ್ಲಿ ಬಂದು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದರು. ತಾಲೂಕು ಉಪ ವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಸಮ್ನುಖಕದಲ್ಲಿ ನಡೆದ ಅವಿಶ್ವಾ ಮಂಡನೆಯಲ್ಲಿ ಏಳು ಮತ ಪಡೆದು ಸುರೇಶ್ ಚಳಗೇರಿ ಎಂಬುವವರು ಹೊಸ ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಒಟ್ಟಿನಲ್ಲಿ ಅಧಿಕಾರ ಆಸೆಗೆ ಬಿದ್ದು ಹಾಲಿ ಅಧ್ಯಕ್ಷ ಈಗ ಮಾಜಿ ಆಗಿದ್ದಾರೆ. ಇನ್ನು ಬೆಂಗಳೂರು ರೆಸಾರ್ಟ್ ಪಾಲಿಟಿಕ್ಸ್ ಮಾಡಿದ್ದ ಗ್ರಾ.ಪಂ ಸದಸ್ಯರು ಪುಲ್ ಖುಷಿಯಾಗಿದ್ದಾರೆ.
Check Also
ನನಗಿಂತ ಭರತ್ ಗೆ ಹೆಚ್ಚು ಮತ ನೀಡಿ ಗೆಲ್ಲಸಿ- ಸಂಸದ ಬಸವರಾಜ ಬೊಮ್ಮಾಯಿ ಮನವಿ
Spread the loveಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ …