ಧಾರವಾಡ: ಬಿಎಫ್ 7 ಆತಂಕದ ಮಧ್ಯೆ ಸಮ್ಮೇಳನ ಮತ್ತು ಯುವ ಜನೋತ್ಸವ ಹಿನ್ನೆಲೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು
ಧಾರವಾಡದಲ್ಲಿ ಆರೋಗ್ಯ ಸಚಿವ ಡಾ. ಡಿ. ಸುಧಾಕರ ಹೇಳಿದರು.
ಬಿಎಫ್ 7 ಆತಂಕದ ಹಿನ್ನೆಲೆಯಲ್ಲಿ
ಧಾರವಾಡ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಸುದ್ದಿಗಾರರ ಯ ಅವರು ಮಾತನಾಡಿದರು. ಬಿಎಫ್ 7 ಆತಂಕ ಕುರಿತು ಯಾವುದೇ ಊಹಾಪೋಹಗಳಿಗೆ ಕಿವಿ ಕೊಡುವುದು ಅಗತ್ಯವಿಲ್ಲ ಜೊತೆಗೆ
ಯಾವುದೇ ಚಟುವಟಿಕೆಗೆ ನಿರ್ಬಂಧ ಇರುವುದಿಲ್ಲ ಎಂದು ಅಭಯ ನೀಡಿದರು. ಈ ಕುರಿತು ಯಾವುದೇ ಅನಗತ್ಯವಾದ ಹೇಳಿಕೆ ಸುದ್ದಿಗಳಿಗೆ
ಯಾರು ಗೊಂದಲ ಆಗುವುದು ಬೇಡ
ಮುನ್ನಚ್ಚರಿಕೆಯ ಸರಳ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಅವರು, ಕಡ್ಡಾಯವಾಗಿ ಮುಂಜಾಗ್ರತಾ ಕ್ರಮವಾಗಿ ಮಾಸ್ಕ ಧರಿಸಬೇಕು
ಪ್ರತಿಯೊಬ್ಬರೂ ಬೂಸ್ಟರ್ ಡೋಸ್ ತೆಗೆದುಕೊಳ್ಳಲೇಬೇಕು ಇದು ಕಡ್ಡಾಯ ಕೂಡಾ ಆಗಿದೆ. ಇನ್ನು ಪ್ರತಿಯೊಬ್ಬರೂ ಒಳಾಂಗಣ ಪ್ರದೇಶದಲ್ಲಿ ಅಂತರ ಕಾಯ್ದುಕೊಳ್ಳಬೇಕು ಸ್ವಚ್ಚತೆ, ಮೊದಲಿನಂತೆ ಕೋವೀಡ್ ನಿಯಮಗಳನ್ನು ಪಾಲನೆ ಮಾಡಿದರೆ
ಇದಿಷ್ಟು ಮಾಡಿದರೆ ಯಾವುದಕ್ಕೂ ನಿರ್ಬಂಧ ಇರುವುದಿಲ್ಲ ಎಂದರು.
*ಈಗತಾನೇ ಆರ್ಥಿಕ ಪುನಶ್ಚೇತನ ಆಗುತ್ತಿದೆ*
ಮಹಾಮಾರಿ ಕೋವೀಡ್ ಹೋದ ನಂತರ ಈಗ ತಾನೇ ಆರ್ಥಿಕ ಚಟುವಟಿಕೆಗಳು ನಡೆಯುತ್ತಿದ್ದು ಎಲ್ಲ ಉದ್ಯಮಗಳು ಪುನಶ್ಚೇತನಗೊಳ್ಳುತ್ತಿವೆ ಎಂದ ಅವರು ಮತ್ತೆ ಜನರನ್ನು ಕಷ್ಟಕ್ಕೆ ದೂಡುವ ಆಲೋಚನೆ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.
*ಆರ್ಥಿಕ ಚಟುವಟಿಕೆ ನಿಯಂತ್ರಣದ ವಿಚಾರ ಇಲ್ಲ* ಇನ್ನು ಆರ್ಥಿಕ ಚಟುವಟಿಕೆ ನಿಯಂತ್ರಣ ಕುರಿತು ಸಹ ಮಾತನಾಡಿದ ವೈದ್ಯಕೀಯ ಸಚಿವರು
ಜೀವ ಮತ್ತು ಜೀವನ ಮುಖ್ಯ ಆದ್ದರಿಂದ ಜೀವ ಉಳಿಸಿ ಜೀವನ ಸುಗಮ ಮಾಡಬೇಕಿದೆ
ಆ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು. ಶಾಸಕ ಅಮೃತ ದೇಸಾಯಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶ್ವನಿ ಪಾಟೀಲ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
Check Also
ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು
Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ನಂಬರ್ …