ಹುಬ್ಬಳ್ಳಿ: ನಗರದ ವಿಶ್ವೇಶ್ವರ ನಗರ ಸರ್ಕಾರಿ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ ಗೋಕುಲ ರಸ್ತೆಯ ಖಾಸಗಿ ಹೊಟೇಲ್ ನಲ್ಲಿ ನಡೆಯಿತು.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪೋಷಕರಂತೆ ಶಿಕ್ಷಕರ ಪಾತ್ರವೂ ಮುಖ್ಯವಾಗಿದೆ. ಆದ್ದರಿಂದ ಅವರ ನಿಸ್ವಾರ್ಥ ಸೇವೆಗಾಗಿ ಶಿಕ್ಷಕರಿಗೆ ಗೌರವ ಸಲ್ಲಿಸುವುದು ನಮ್ಮ ಸಂಪ್ರದಾಯದ ಭಾಗವಾಗಿದೆ ಮತ್ತು ವಿದ್ಯಾರ್ಥಿಗಳ ಜವಾಬ್ದಾರಿಯೂ ಆಗಿದೆ. ಬ್ಯಾಂಕರ್‌ಗಳು, ವೈದ್ಯರು, ಇಂಜಿನಿಯರ್‌ಗಳು, ವ್ಯವಸ್ಥಾಪಕರು, ವಾಣಿಜ್ಯೋದ್ಯಮಿಗಳು ಮತ್ತು ಶಿಕ್ಷಕರಾಗಿ ಹಲವಾರು ವೃತ್ತಿಗಳಲ್ಲಿ ಯಶಸ್ವಿಯಾಗಿದ್ದ ತಮ್ಮ ಕಲಿಸಿದ ಗುರುಗಳಿಗೆ ವಂದನೆ ಸಲ್ಲಿಸುವ ಮೂಲಕ ಗುರುವಿಗೆ ಅಮೂಲ್ಯವಾದ ಭಕ್ತಿ ಭಾವ ಕಾಣಿಕೆ ಅರ್ಪಣೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಶಾಲೆಯ ನಿಕಟ ಪೂರ್ವ ಮುಖ್ಯ ಶಿಕ್ಷಕಿ
ಶ್ರೀಮತಿ ಕಮಲಾ ಅಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ದಿನಗಳಲ್ಲಿ ಪಾಠ ಮಾಡಿದ 20 ನಿವೃತ್ತ ಶಿಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು ಸ್ನೇಹಿತರ ಪುನರ್ಮಿಲನ ಮತ್ತು ವಿದ್ಯಾರ್ಥಿಗಳಿಂದ ಮನರಂಜನಾ ಚಟುವಟಿಕೆಗಳನ್ನು 1991,1993,1994 ಬ್ಯಾಚ್‌ಗಳು ಮತ್ತು ಹೈಸ್ಕೂಲ್ 1996 ಮತ್ತು 1997 ಬ್ಯಾಚ್‌ಗಳ ವಿದ್ಯಾರ್ಥಿಗಳನ್ನು ಕುರಿತು ಶಿಕ್ಷಕರು ಹಿರಿ ಹಿರಿ ಹಿಗ್ಗಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು. ಶಿಕ್ಷಕರನ್ನು ಸನ್ಮಾನಿಸಿ ಮತ್ತೊಮ್ಮೆ ಶಿಕ್ಷಕರ ಆಶೀರ್ವಾದ ಪಡೆದಿರುವುದಕ್ಕೆ ವಿದ್ಯಾರ್ಥಿಗಳು ಹೆಮ್ಮೆ ಪಟ್ಟರು.